Home ಟಾಪ್ ಸುದ್ದಿಗಳು ಉಯಿಘರ್ ಮುಸ್ಲಿಮರನ್ನು ಬಲವಂತವಾಗಿ ದುಡಿಸುತ್ತಿರುವ ಆ್ಯಪಲ್ ಪೂರೈಕೆದಾರ ಲೆನ್ಸ್ ಟೆಕ್ನಾಲಜಿ ಸಂಸ್ಥೆ!

ಉಯಿಘರ್ ಮುಸ್ಲಿಮರನ್ನು ಬಲವಂತವಾಗಿ ದುಡಿಸುತ್ತಿರುವ ಆ್ಯಪಲ್ ಪೂರೈಕೆದಾರ ಲೆನ್ಸ್ ಟೆಕ್ನಾಲಜಿ ಸಂಸ್ಥೆ!

ಬೀಜಿಂಗ್: ಆ್ಯಪಲ್ ಸಂಸ್ಥೆಗೆ ಸಾಮಾಗ್ರಿ ಪೂರೈಕೆ ಮಾಡುವ ಐದು ಕಂಪನಿಗಳಲ್ಲೊಂದಾದ ಲೆನ್ಸ್ ಟೆಕ್ನಾಲಜಿ ಸಂಸ್ಥೆಯು, ಚೀನಾದ ಕ್ಸಿನ್‌ಜಿಯಾಂಗ್‌ ಪ್ರದೇಶದ ಸಾವಿರಾರು ಉಯಿಘರ್ ಮುಸ್ಲಿಮ್ ಕಾರ್ಮಿಕರನ್ನು ಬಲವಂತದಿಂದ ಸಂಸ್ಥೆಯಲ್ಲಿ ದುಡಿಸುತ್ತಿದೆ ಎಂದು ಟೆಕ್ ಟ್ರಾನ್ಸ್ ಪರೆನ್ಸಿ ಪ್ರಾಜೆಕ್ಟ್(ಟಿಟಿಪಿ) ಕಂಡುಕೊಂಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಆದರೆ ಲೆನ್ಸ್ ಟೆಕ್ನಾಲಜಿ ಸಂಸ್ಥೆಯು ಉಯಿಘರ್ ಕಾರ್ಮಿಕರನ್ನು ಬಲವಂತವಾಗಿ ಕೆಲಸ ಮಾಡಿಸುತ್ತಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಆ್ಯಪಲ್ ಸಂಸ್ಥೆ ತಳ್ಳಿ, ತಮಗೆ ಸಾಮಾಗ್ರಿ ಪೂರೈಸುತ್ತಿರುವ ಯಾವುದೇ ಸಂಸ್ಥೆಯೂ ಕೂಡ ಉಯಿಘರ್ ಮುಸ್ಲಿಮ್ ಕಾರ್ಮಿಕರನ್ನು ಬಲವಂತವಾಗಿ ದುಡಿಸುತ್ತಿಲ್ಲ ಎಂದು ಖಾತ್ರಿಪಡಿಸಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯ, ಬಲವಂತದ ಉದ್ಯೋಗ ಚೀನಾದಲ್ಲಿಲ್ಲ ಹಾಗೂ ಕೆಲವರು ದುರುದ್ದೇಶದಿಂದ ಈ ರೀತಿಯ ಸುದ್ದಿಯನ್ನು ಹರಡುತ್ತಿದ್ದಾರೆ ಎಂದು ತಿಳಿಸಿದೆ.

Join Whatsapp
Exit mobile version