Home ಟಾಪ್ ಸುದ್ದಿಗಳು ಇರಾಕ್ ನಲ್ಲಿ ಅಮೆರಿಕಾ ದೂತವಾಸದ ಮೇಲೆ ದಾಳಿ: ಟ್ರಂಪ್ ಆರೋಪ ನಿರಾಕರಿಸಿದ ಇರಾನ್

ಇರಾಕ್ ನಲ್ಲಿ ಅಮೆರಿಕಾ ದೂತವಾಸದ ಮೇಲೆ ದಾಳಿ: ಟ್ರಂಪ್ ಆರೋಪ ನಿರಾಕರಿಸಿದ ಇರಾನ್

ಬಗ್ದಾದ್: ಇರಾಕ್ ನ ರಾಜಧಾನಿ ಬಗ್ದಾದ್ ನಲ್ಲಿರುವ ಅಮೆರಿಕಾ ರಾಯಭಾರಿ ಕಚೇರಿಯ ಮೇಲೆ ಇತ್ತೀಚೆಗೆ ನಡೆದ ರಾಕೆಟ್ ದಾಳಿಯ  ಹಿಂದೆ ಟೆಹ್ರಾನ್ ಇದೆಯೆಂಬ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಗಳನ್ನು ಇರಾನ್ ನಿರಾಕರಿಸಿದೆ.

ರವಿವಾರ ರಾತ್ರಿ ಬಗ್ದಾದ್ ನಲ್ಲಿ ಅಮೆರಿಕಾ ದೂತವಾಸಕ್ಕೆ ಸಮೀಪದಲ್ಲಿರುವ ತೀವ್ರ ಭದ್ರತೆಯ ಗ್ರೀನ್ ಝೋನ್ ಮೇಲೆ ಮೂರು ರಾಕೆಟ್ ಗಳು ಬಿದ್ದಿದ್ದವು. ಅವುಗಳಲ್ಲಿ ಒಂದನ್ನು ರಾಕೆಟ್ ನಿಗ್ರಹ ವ್ಯವಸ್ಥೆಯನ್ನು ಬಳಸಿ ದಿಕ್ಕುತಪ್ಪಿಸಲಾಗಿತ್ತು.

ಇರಾಕ್ ನಲ್ಲಿ ಅಮೆರಿಕನ್ನರ ಮೇಲೆ ಮಾರಣಾಂತಿಕ ದಾಳಿ ಸಂಭವಿಸಿದರೆ ತಾನು ಅದಕ್ಕೆ ಇರಾನನ್ನು ಜವಾಬ್ದಾರನನ್ನಾಗಿಸುವುದಾಗಿ ಟ್ರಂಪ್ ಬುಧವಾರ ಎಚ್ಚರಿಸಿದ್ದರು. ತವರಿನಲ್ಲಿ ತಾನು ಅನುಭವಿಸುತ್ತಿರುವ ವೈಫಲ್ಯಗಳ ಕುರಿತು ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಯುಎಸ್ ಅಧ್ಯಕ್ಷರು ಈ ರೀತಿಯ ಆರೋಪದಲ್ಲಿ ತೊಡಗಿದ್ದಾರೆ ಎಂದು ಇರಾನ್ ವಿದೇಶಾಂಗ ಸಚಿವ ಮುಹಮ್ಮದ್ ಜವಾದ್ ಝಾರಿಫ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

Join Whatsapp
Exit mobile version