Home ಟಾಪ್ ಸುದ್ದಿಗಳು ಅ.25ರಿಂದ ಮಂಗಳೂರು-ಮೈಸೂರು ನಡುವೆ ವಿಮಾನ ಸೇವೆ ಆರಂಭ

ಅ.25ರಿಂದ ಮಂಗಳೂರು-ಮೈಸೂರು ನಡುವೆ ವಿಮಾನ ಸೇವೆ ಆರಂಭ

ಮೈಸೂರು : ಮೈಸೂರು ಮತ್ತು ಮಂಗಳೂರಿಗರಿಗೆ ಸಿಹಿ ಸುದ್ದಿ. ಇನ್ನು ಅ.25ರಿಂದ ಈ ಎರಡೂ ನಗರಗಳ ನಡುವೆ ವಿಮಾನದಲ್ಲಿ ಓಡಾಟ ನಡೆಸಬಹುದು. ಅ.25ರಿಂದ ಮಂಗಳೂರಿನಿಂದ ಮೈಸೂರಿಗೆ ವಿಮಾನ ಯಾನ ಸೇವೆ ಪ್ರಾರಂಭಿಸಲು ಏರ್ ಇಂಡಿಯಾ ನಿರ್ಧರಿಸಿದೆ.

ಟ್ರಯಲ್ ರನ್ ನಂತರ ಕಾರ್ಯ ಸಾಧ್ಯತಾ ವರದಿಯನ್ನು ಆಧರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಏರ್ ಇಂಡಿಯಾ ಬೆಂಗಳೂರಿನಿಂದ ಮಂಗಳೂರಿಗೆ ಬೆಳಗ್ಗೆ 6:50ಕ್ಕೆ ಬರುವ ವಿಮಾನವನ್ನೇ ಮೈಸೂರಿನ ಕಡೆ ತಿರುಗಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮೈಸೂರಿನಿಂದ 7:55ಕ್ಕೆ ಹೊರಟು, 8:50ಕ್ಕೆ ಮಂಗಳೂರಿಗೆ ತಲುಪುವ ಸಾಧ್ಯತೆಯಿದೆ ಎನ್ನಲಾಗಿದೆ.     

Join Whatsapp
Exit mobile version