ಅಲೋಪಥಿ ವಿರುದ್ಧ ಸುಳ್ಳು ಆರೋಪ: ರಾಮ್ ದೇವ್ ವಿರುದ್ಧ ಎಫ್ಐಆರ್

Prasthutha|

ಕೊರೋನಾ ಚಿಕಿತ್ಸೆಗಾಗಿ ವೈದ್ಯಕೀಯ ಜಗತ್ತು ಬಳಸುತ್ತಿರುವ ಔಷಧಿಗಳ ಬಗ್ಗೆ “ಸುಳ್ಳು” ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಛತ್ತೀಸ್‌ಗಡದ ರಾಯ್‌ಪುರದ ಪೊಲೀಸರು ಯೋಗ ಗುರು ರಾಮದೇವ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

- Advertisement -


ಭಾರತೀಯ ವೈದ್ಯಕೀಯ ಸಂಘದ -ಐಎಂಎ ಛತ್ತೀಸ್‌ಗಡದ ಘಟಕವು ನೀಡಿದ ದೂರಿನ ಆಧಾರದ ಮೇಲೆ ರಾಮಕೃಷ್ಣ ಯಾದವ್ ಅಲಿಯಾಸ್ ಬಾಬಾ ರಾಮ್‌ದೇವ್ ವಿರುದ್ಧ ಬುಧವಾರ ರಾತ್ರಿ ಪ್ರಕರಣ ದಾಖಲಿಸಲಾಗಿದೆ ಎಂದು ರಾಯ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಯಾದವ್ ಮಾಹಿತಿ ನೀಡಿದ್ದಾರೆ.


ರಾಮ್ ದೇವ್ ವಿರುದ್ಧ ಐಪಿಸಿ ಸೆಕ್ಷನ್ 188, 269, 504 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

Join Whatsapp