ವುಮೆನ್ ಇಂಡಿಯಾ ಮೂವ್ ಮೆಂಟ್ (ವಿಮ್) ರಾಜ್ಯದಾದ್ಯಂತ ಹಮ್ಮಿಕೊಂಡ “ಸಮಗ್ರ ಪರಿಹಾರ ಘೋಷಿಸಿ ಜನರ ಜೀವ ಉಳಿಸಿ” ಎಂಬ ಘೋಷ ವಾಕ್ಯದಲ್ಲಿ ವಿವಿಧ ಹಕ್ಕೊತ್ತಾಯಗಳು ಬರೆದಿರುವ ಪ್ಲೇ ಕಾರ್ಡ್ ಪ್ರದರ್ಶನ ನಡೆಸಿ ಪುದು ಗ್ರಾಮದ ಅಮೆಮ್ಮಾರ್ ನಲ್ಲಿ ಪ್ರತಿಭಟನೆ ನಡೆಸಲಾಯಿತು
ಲಾಕ್ ಡೌನ್ ನಿಂದ ತತ್ತರಿಸಿದ ಜನರ ಸಂಕಷ್ಟಕ್ಕೆ ನೆರವಾಗಲಿ, ಲಾಕ್ ಡೌನ್ ಏನೋ ಸರಿ ಆದರೆ ಹೊಟ್ಟೆಗೆ ಲಾಕ್ ಡೌನ್ ಸಾಧ್ಯವೇ?, ಲಸಿಕೆ ನೀಡಿಲ್ಲ ಆಕ್ಸಿಜನ್ ಪೂರೈಸಿಲ್ಲ ಕನಿಷ್ಠ ಉತ್ತಮ ಪ್ಯಾಕೇಜ್ ಆದರೂ ಘೋಷಿಸಿ, ಜನರ ಜೀವ ಉಳಿಸಲು ಲಾಕ್ ಡೌನ್ ಮಾಡಿದ ಸರಕಾರ ಜನರು ಜೀವನ ಮಾಡಲು ಪರಿಹಾರ ಬೇಕಲ್ಲವೇ?, ಕೋವಿಡ್ ಸಂಕಷ್ಟಕ್ಕೊಳಗಾದ ಎಲ್ಲಾ ಜನರಿಗೆ ಲಾಕ್ ಡೌನ್ ಸಂದರ್ಭದಲ್ಲಿ ಸರಕಾರದ ನೆರವು ಅತ್ಯಗತ್ಯ, ರೋಗದಿಂದ ಸಾಯುವ ಬದಲು ಹಸಿವಿನಿಂದ ಸಾಯುತ್ತಿದ್ದೇವೆ ಸಮರ್ಪಕ ಪರಿಹಾರ ನೀಡಿ ಇಲ್ಲವಾದಲ್ಲಿ ಜಾಗ ಖಾಲಿ ಮಾಡಿ, ಹೊರ ಬರದಿದ್ದರೆ ಜೀವನ ನಡೆಯುವುದಿಲ್ಲ ಹೊರಬಂದರೆ ಜೀವಕ್ಕೆ ಭರವಸೆ ಇಲ್ಲ, ಕೋವಿಡ್ ತಡೆಗಟ್ಟಲು ಮನೆಯಲ್ಲೇ ಇದ್ದು ಸಹಕರಿಸಿದ ಜನರಿಗೆ ಸರಕಾರದ ಸಹಾಯವಿಲ್ಲವೇ? ಎಂಬ ಹಕ್ಕೊತ್ತಾಯದ ಬರಹಗಳುಳ್ಳ ಪ್ಲೇ ಕಾರ್ಡ್ ಪ್ರದರ್ಶನ ನಡೆಸಿ ಪ್ರತಿಭಟನೆ ನಡೆಸಲಾಯಿತು