Home ಟಾಪ್ ಸುದ್ದಿಗಳು ಅಮೀರ್ ಖಾನ್- ಕಿರಣ್ ರಾವ್ 15 ವರ್ಷಗಳ ದಾಂಪತ್ಯಕ್ಕೆ ಬ್ರೇಕ್

ಅಮೀರ್ ಖಾನ್- ಕಿರಣ್ ರಾವ್ 15 ವರ್ಷಗಳ ದಾಂಪತ್ಯಕ್ಕೆ ಬ್ರೇಕ್

ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ಅವರ ಪತ್ನಿ ಕಿರಣ್ ರಾವ್ ವಿಚ್ಛೇದನ ಪಡೆಯುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ಬಯಸುತ್ತೇವೆ. ನಾವಿಬ್ಬರು ಪರಸ್ಪರ ಗಂಡ-ಹೆಂಡತಿಯಾಗಿ ಇನ್ನು ಮುಂದೆ ಇರುವುದಿಲ್ಲ. ಆದರೆ, ಮಗನಿಗೆ ಜಂಟಿ ಪೋಷಕರಾಗಿ ಇರುತ್ತೇವೆ ಎಂದಿದ್ದಾರೆ.


ಈ 15 ವರ್ಷಗಳಲ್ಲಿ ಪರಸ್ಪರ ನೋವು-ನಲಿವುಗಳನ್ನು ಹಂಚಿಕೊಂಡಿದ್ದೇವೆ. ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಿಂದ ಕೂಡಿದೆ. ಆದರೆ, ನಾವೀಗ ನಮ್ಮ ಜೀವನದ ಹೊಸ ಅಧ್ಯಾಯ ಪ್ರಾರಂಭಿಸಲು ಬಯಸುತ್ತೇವೆ ಎಂದಿದ್ದಾರೆ.
ನಮ್ಮ ಮಗ ಆಜಾದ್ ಗೆ ನಾವಿಬ್ಬರು ಪೋಷಕರಾಗಿದ್ದು, ಒಟ್ಟಿಗೆ ಪೋಷಿಸುತ್ತೇವೆ. ನಮ್ಮ ನಿರ್ಧಾರಕ್ಕೆ ಬೆಂಬಲಿಸಿದ ಕುಟುಂಬಸ್ಥರು, ಸ್ನೇಹಿತರಿಗೂ ಧನ್ಯವಾದಗಳು. ನಮ್ಮ ಈ ವಿಚ್ಛೇದನವನ್ನು ದಾಂಪತ್ಯದ ಅಂತ್ಯವಾಗಿ ನೋಡದೆ, ಹೊಸ ಪ್ರಯಾಣದ ಆರಂಭವಾಗಿ ನೋಡುತ್ತೀರಿ ಎಂದು ಭಾವಿಸಿದ್ದೇವೆ ಎಂದಿದ್ದಾರೆ.


ಅಮೀರ್ ಖಾನ್ ಈ ಹಿಂದೆ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಆದರೆ 2002 ರಲ್ಲಿ 16 ವರ್ಷಗಳ ವಿವಾಹದ ನಂತರ ವಿಚ್ಛೇದನ ಪಡೆದಿದ್ದರು. ಅವರಿಗೆ ಇರಾ ಮತ್ತು ಮಗ ಜುನೈದ್ ಎಂಬ ಮಕ್ಕಳಿದ್ದಾರೆ.

Join Whatsapp
Exit mobile version