Home ಟಾಪ್ ಸುದ್ದಿಗಳು ಅಫ್ಘಾನಿಸ್ಥಾನದಲ್ಲಿ ಭೀಕರ ಭೂಕಂಪ : ಸಾವಿರದ ಗಡಿ ದಾಟಿದ ಸಾವಿನ ಸಂಖ್ಯೆ

ಅಫ್ಘಾನಿಸ್ಥಾನದಲ್ಲಿ ಭೀಕರ ಭೂಕಂಪ : ಸಾವಿರದ ಗಡಿ ದಾಟಿದ ಸಾವಿನ ಸಂಖ್ಯೆ

ಕಾಬುಲ್: ಅಫ್ಘಾನಿಸ್ಥಾನ ದೇಶದ ಪೂರ್ವ ಭಾಗದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವಿನ ಸಂಖ್ಯೆ ಸಾವಿರದ ಗಡಿದಾಟಿದ್ದು, 1500 ರಷ್ಟು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಖೋಸ್ಟ್ ಪ್ರಾಂತ್ಯದ ಸ್ಪೆರಾ ಜಿಲ್ಲೆ ಮತ್ತು ಪಕ್ಟಿಕಾ ಪ್ರಾಂತ್ಯದ ಬರ್ಮಲಾ, ಜಿರುಕ್, ನಾಕಾ ಮತ್ತು ಗಯಾನ್ ಜಿಲ್ಲೆಗಳಲ್ಲಿ ಭೂಕಂಪ ಸಂಭವಿಸಿದ್ದು, ಅಪಾರವಾದ ನಷ್ಟವುಂಟಾಗಿದೆ.

ಈ ಭೂಕಂಪನದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. 1,500 ಕ್ಕೂ ಅಧಿಕ ಗಾಯಗೊಂಡಿದ್ದಾರೆ ಎಂದು ಪಕ್ಟಿಕಾ ಪ್ರಾಂತ್ಯದ ಮಾಹಿತಿ ವಿಭಾಗದ ಮುಖ್ಯಸ್ಥ ಅಮೀನ್ ಹುಝೈಫಾ ಮಾಹಿತಿ ಹೊರಹಾಕಿದ್ದಾರೆ.

ಭೂಕಂಪ ಸಂಭವಿಸಿದ ತಾಣಗಳಿಗೆ ಹಲವು ಹೆಲಿಕಾಪ್ಟರ್ ಮತ್ತು ರಕ್ಷಣಾ ತಂಡಗಳು ಆಗಮಿಸಿ ರಕ್ಷಣಾ ಕಾರ್ಯ ನಡೆಸಿದೆ.

Join Whatsapp
Exit mobile version