Home ಟಾಪ್ ಸುದ್ದಿಗಳು ಹೋಟೆಲ್ ನಲ್ಲಿ ಆಹಾರದ ಬೆಲೆ ಏರಿಕೆ: ಗ್ರಾಹಕರಿಗೆ ಸಂಕಷ್ಟ !

ಹೋಟೆಲ್ ನಲ್ಲಿ ಆಹಾರದ ಬೆಲೆ ಏರಿಕೆ: ಗ್ರಾಹಕರಿಗೆ ಸಂಕಷ್ಟ !


ಬೆಂಗಳೂರು: ವಾಣಿಜ್ಯ ಗ್ಯಾಸ್ ಸಿಲಿಂಡರ್ ಏರಿಕೆ ಬೆನ್ನಲ್ಲೆ ತಿಂಡಿ ತಿನಿಸುಗಳ ದರ ಏರಿಕೆ ಮಾಡಲು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘ ನಿರ್ಧಾರ ಮಾಡಿದೆ.


ಮುಂದಿನ ವಾರದಿಂದ ಹೋಟೆಲ್ ಗಳಲ್ಲಿ ಊಟ, ತಿಂಡಿ, ಟೀ, ಕಾಫಿ ಮತ್ತಿತರ ತಿಂಡಿ ತಿನಿಸುಗಳ ಶೇ.10 ರಿಂದ 15ರಷ್ಟು ಹೆಚ್ಚಳಕ್ಕೆ ನಿರ್ಧಾರ ಮಾಡಿದೆ.


ಈ ಬಗ್ಗೆ ಮಾಹಿತಿ ನೀಡಿದ ಹೋಟೆಲ್ ಮಾಲೀಕರು, ಮೊದಲೇ ಕೊರೊನಾ ಲಾಕ್ ಡೌನ್ ನಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಉದ್ಯಮದಲ್ಲಿ ಸ್ವಲ್ಪವಾದರೂ ಚೇತರಿಕೆ ಆಗಬೇಕೆಂದು ಬೆಲೆ ಏರಿಕೆ ಅನಿವಾರ್ಯ. ಜೊತೆಗೆ. ದಿನಸಿ ಸಾಮಾಗ್ರಿಗಳ ಏರಿಕೆಯಿಂದ ಹೋಟೆಲ್ ಮಾಲೀಕರು ಕಂಗಾಲಗಿದ್ದಾರೆ. ಅಡುಗೆ ಎಣ್ಣೆಯ ಬೆಲೆವೂ ದುಬಾರಿಯಾಗಿದೆ. ಅಲ್ಲದೆ ಕಳೆದ 2 ವರ್ಷಗಳಿಂದ ಯಾವುದೇ ಊಟ, ತಿಂಡಿ, ಟೀ, ಕಾಫೀ ಏರಿಕೆಯಾಗಿಲ್ಲ ಎಂದು ತಿಳಿಸಿದ್ದಾರೆ.

Join Whatsapp
Exit mobile version