ಹೊಸ ಉದ್ಯೋಗಗಳ ವಿಸಾ ನೀಡಲು ಪ್ರಾರಂಭಿಸಿದ ಕತಾರ್ : ಆಯ್ದ ರಾಷ್ಟ್ರಗಳಿಗೆ ಮಾತ್ರ

Prasthutha|


ಕೋವಿಡ್ ನಿಂದಾಗಿ ಕತಾರ್ ಹೊಸ ಉದ್ಯೋಗಗಳ ವಿಸಾಗಳನ್ನು ನೀಡುವುದನ್ನು ನಿಲ್ಲಿಸಿತ್ತು. ಆದರೆ ವಿವಿಧ ಕ್ಷೇತ್ರಗಳ ನುರಿತ ಕಾರ್ಮಿಕರ ಹೆಚ್ಚುತ್ತಿರುವ ಬೇಡಿಕೆ ಮತ್ತು ಕತಾರ್ ನಲ್ಲಿ ಕೋವಿಡ್ ಹರಡುವುದು ಕಡಿಮೆಯಾದ ಹಿನ್ನೆಲೆಯಲ್ಲಿ ಹೊಸ ವಿಸಾಗಳನ್ನು ನೀಡಲಾಗುತ್ತಿದೆ. ಇದೀಗ ಆಫ್ರಿಕನ್ ದೇಶಗಳಿಂದ ಮಾತ್ರ ಹೊಸ ನೇಮಕಾತಿಗಳನ್ನು ಅನುಮತಿಸಲಾಗಿದೆ.
ಕೀನ್ಯಾದಿಂದ 30 ಹೊಸ ಉದ್ಯೋಗಿಗಳ ತಂಡ ನಿನ್ನೆ ದೋಹಾಕ್ಕೆ ಆಗಮಿಸಿತು. ಕೀನ್ಯಾ ಮತ್ತು ಇತರ ಕೆಲವು ಆಫ್ರಿಕನ್ ದೇಶದ ಉದ್ಯೋಗಿಗಳಿಗೆ ಹೊಸ ವಿಸಾಗಳನ್ನು ನೀಡಲಾಗಿದೆ. ಆಫ್ರಿಕಾದ ವಿವಿಧ ದೇಶಗಳ ಉದ್ಯೋಗಿಗಳಿಗೆ 300 ಹೊಸ ವಿಸಾಗಳನ್ನು ನೀಡಲಾಗಿದೆ ಎಂದು ಮ್ಯಾನ್ ಪವರ್ ರಿಕ್ರೂಟ್ ಮೆಂಟ್ ಕಂಪೆನಿಯ ಪ್ರತಿನಿಧಿಯೊಬ್ಬರು ಕತಾರ್ ಟ್ರಿಬ್ಯೂನ್ ಗೆ ತಿಳಿಸಿದ್ದಾರೆ.
ಆದರೆ ಏಷ್ಯಾದ ಉದ್ಯೋಗಿಗಳಿಗೆ ಹೊಸ ವಿಸಾಗಳನ್ನು ಇನ್ನೂ ನೀಡಲಾಗಿಲ್ಲ. ಭಾರತ ಮತ್ತು ಇತರ ದೇಶಗಳಲ್ಲಿ ಕೋವಿಡ್ ಹರಡುವುದು ಕಡಿಮೆಯಾದರೆ ಮಾತ್ರ ಹೊಸ ನೇಮಕಾತಿ ಪ್ರಾರಂಭವಾಗುತ್ತದೆ ಎಂದು ಕ್ಷೇತ್ರದ ತಜ್ಞರು ಹೇಳುತ್ತಾರೆ.

- Advertisement -