November 28, 2020

ಹೈದರಾಬಾದ್ ಹೆಸರನ್ನು ಭಾಗ್ಯನಗರವೆಂದು ಬದಲಿಸಲಾಗುವುದು: ಆದಿತ್ಯನಾಥ್

ಹೈದರಾಬಾದ್: ಇಲ್ಲಿನ ಪುರಸಭೆ ಚುನಾವಣೆಗೆ ಮುಂಚಿತವಾಗಿ ಪ್ರಚಾರ ಅಭಿಯಾನದಲ್ಲಿ ತೊಡಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿವೃದ್ಧಿಯ ಕೊರತೆಗೆ ಆಡಳಿತ ರೂಢ ಟಿ.ಆರ್.ಎಸ್ ಮತ್ತು ಅಸದುದ್ದೀನ್ ಉವೈಸಿಯ ಎ.ಐ.ಎಂ.ಐ.ಎಂನ ದುಷ್ಟ ಮೈತ್ರಿಯನ್ನು ಆಕ್ಷೇಪಿಸಿದ್ದಾರೆ ಮತ್ತು ನಗರವನ್ನು ಭಾಗ್ಯನಗರವೆಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದ್ದಾರೆ.

ದಕ್ಷಿಣ ರಾಜ್ಯದಲ್ಲಿ ಮತದಾರರನ್ನು ಗೆಲ್ಲುವುದಕ್ಕಾಗಿ ಬಿಜೆಪಿ ರಚಿಸಿರುವ ‘ಎ’ ಪಟ್ಟಿಯ ಸೇನೆಯಲ್ಲಿ ಯೋಗಿ ಆದಿತ್ಯ ನಾಥ್ ಒಬ್ಬರಾಗಿದ್ದಾರೆ.

“ಹೈದರಾಬಾದನ್ನು ಭಾಗ್ಯನಗರವೆಂದು ಮರುನಾಮಕರಣ ಮಾಡಬಹುದು ಸಾಧ್ಯವೇ ಎಂದು ಕೆಲವು ಜನರು ನನ್ನನ್ನು ಕೇಳುತ್ತಿದ್ದಾರೆ. ನಾನು ಹೇಳಿದೆ – ಯಾಕೆ ಸಾಧ್ಯವಿಲ್ಲ? ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಾವು ಫೈಝಾಬಾದನ್ನು ಅಯೋಧ್ಯವೆಂದು ಮತ್ತು ಅಲಹಾಬಾದನ್ನು ಪ್ರಯಾಗ್ ರಾಜ್ ಎಂದು ಮರುನಾಮಕರಣ ಮಾಡಿದೆವು. ಹೈದರಬಾದನ್ನು ಯಾಕಾಗಿ ಭಾಗ್ಯನಗರವೆಂದು ಮರುನಾಮಕರಣ ಮಾಡಬಾರದು?” ಎಂದು ಅವರು ಕೇಳಿದರು.

“ಬಿಹಾರದಲ್ಲಿ ಓರ್ವ ನೂತನವಾಗಿ ಆಯ್ಕೆಯಾದ ಎ.ಐ.ಎಂ.ಎಂ ಶಾಸಕ ಪ್ರಮಾಣ ವಚನ ಸ್ವೀಕರಿಸುವಾಗ “ಹಿಂದುಸ್ತಾನ್” ಎಂದು ಹೇಳಲು ನಿರಾಕರಿಸಿದರು. ಅವರು ಹಿಂದುಸ್ತಾನದಲ್ಲಿ ಜೀವಿಸುತ್ತಾರೆ. ಆದರೆ ಪ್ರಮಾಣವಚನ ಸ್ವೀಕರಿಸುವಾಗ ಹಿಂದುಸ್ತಾನದ ಹೆಸರು ಹೇಳಲು ಹಿಂಜರಿಯುತ್ತಾರೆ” ಎಂದು ಅವರು ಹೇಳಿದರು.

ಓವೈಸಿ ಪಕ್ಷದ ಬಲಿಷ್ಠ ಹಿಡಿತವಿರುವ ಹಳೆಯ ನಗರ ಲಾಲ್ ದರ್ವಾಝದಲ್ಲಿ ಅವರು ಪ್ರಚಾರ ಭಾಷಣ ಮಾಡುತ್ತಿದ್ದರು.

ಟಾಪ್ ಸುದ್ದಿಗಳು

ವಿಶೇಷ ವರದಿ