December 1, 2020

ಹೈದರಾಬಾದ್: ಬಿಜೆಪಿಯ ‘ಭಾಗ್ಯನಗರ’ದ ಇತಿಹಾಸವೇನು??

ಹೈದರಾಬಾದ್: ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಪ್ರಚಾರ ಅಭಿಯಾನದ ವೇಳೆ ನಗರದ ಮೂಲ ಹೆಸರು ಭಾಗ್ಯನಗರವಾಗಿದ್ದು, ತಾನು ಅಧಿಕಾರಕ್ಕೆ ಬಂದ ಕೂಡಲೇ ಆ ಹೆಸರನ್ನು ಇಡಲಾಗುವುದು ಎಂದು ಬಿಜೆಪಿ ಹೇಳಿತ್ತು.  ಇದರೊಂದಿಗೆ ಹೆದರಾಬಾದ್ ನ ಪ್ರಮಾಣೀಕೃತವಲ್ಲದ ಇತಿಹಾಸವೊಂದು ಚರ್ಚೆಗೆ ಬಂದಿದೆ.

ಗೃಹ ಸಚಿವ ಅಮಿತ್ ಶಾ ಒಳಗೊಂಡಂತೆ ಹಲವು ಬಿಜೆಪಿ ನಾಯಕರು ಚುನಾವಣೆಯ ವೇಳೆ ‘ಭಾಗ್ಯ ಲಕ್ಷ್ಮಿ ಮಂದಿರ’ಕ್ಕೆ ಭೇಟಿ ನೀಡಿರುವುದು ಈ ಹಿನ್ನೆಲೆಯಲ್ಲಾಗಿತ್ತು. ಮಂದಿರವು 16 ಶತಮಾನ ಹಳೆಯ ಚಾರ್ ಮಿನಾರ್ ಪಕ್ಕದಲ್ಲೇ ಇದ್ದು,ಇತಿಹಾಸದಲ್ಲಿ ಅದು ಯಾವಾಗ ಸ್ಥಾಪನೆಗೊಂಡಿದೆ ಎಂಬ ಕುರಿತು ಸರಿಯಾದ ಉಲ್ಲೇಖವಿಲ್ಲ.

ಭಾಗ್ಯನಗರ ಮತ್ತು ಭಾಗ್ಯಲಕ್ಷ್ಮಿ ಮಂದಿರದ ಸಿದ್ಧಾಂತವು ಹಳೆಯದ್ದು. ಹೈದರಾಬಾದ್ ನ ಇತಿಹಾಸದಲ್ಲಿ ಅದಕ್ಕಿರುವ ಸ್ಥಾನದ ಕುರಿತು ಇತಿಹಾಸಕಾರರು ಭಿನ್ನಾಭಿಪ್ರಾಯವನ್ನು ಹೊಂದಿದ್ದಾರೆ.

ಭಾಗ್ಯನಗರದ ಕತೆ ಹೈದರಾಬಾದ್ ನ ಸ್ಥಾಪಕ ಮತ್ತು ಆಡಳಿತಗಾರ ಕುಲಿ ಕುತುಬ್ ಶಾನಿಗೆ ಭಾಗಮತಿ ಎಂಬ ಹೆಸರಿನ ನೃತ್ಯಗಾತಿಯೊಂದಿಗೆ ಇದ್ದ ಪ್ರೀತಿಗೆ ಸಂಬಂಧಿಸಿದ್ದು. ಆತ ನಗರಕ್ಕೆ ಭಾಗಮತಿಯ ಹೆಸರನ್ನು ಇಟ್ಟ. ಭಾಗಮತಿ ಇಸ್ಲಾಮ್ ಗೆ ಮತಾಂತರಗೊಂಡು ‘ಹೈದರ್ ಮಹಲ್’ ಎಂದು ಹೆಸರು ಬದಲಿಸಿದ ಕಾರಣ ಹೈದರಾಬಾದ್ ಎಂಬ ಕತೆಯಿದೆ.  

ತನ್ಮಧ್ಯೆ ಭಾರತದ ಪುರಾತತ್ವ ಇಲಾಖೆ ದಶಕಗಳಿಂದ ಮಂದಿರವನ್ನು ಅನಧಿಕೃತ ಕಟ್ಟಡವೆಂದು ಪರಿಗಣಿಸಿದೆ. ಅದನ್ನು ತೆರವುಗೊಳಿಸಬೇಕೆಂದು 1960ರಲ್ಲೇ ಆದೇಶವನ್ನು ಹೊರಡಿಸಿತ್ತು.  ಚುನಾವಣಾ ಪ್ರಚಾರವನ್ನು ಕೋಮುವಾದೀಕರಣಗೊಳಿಸುವುದಕ್ಕಾಗಿ ಬಿಜೆಪಿ ಭಾಗ್ಯನಗರದ ಕುರಿತ ಪ್ರಮಾಣೀಕೃತವಲ್ಲದ ಇತಿಹಾಸವನ್ನು ಬಳಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!