ಹುತಾತ್ಮ ಸೈನಿಕನ ಬಡ ವೃದ್ಧ ತಾಯಿಗೆ ಉಚಿತ ಚಿಕಿತ್ಸೆ ಕಲ್ಪಿಸಿದ ಮುಸ್ಲಿಮ್ ವೈದ್ಯ

Prasthutha|

ಮಹಾರಾಷ್ಟ್ರದ ಯುರೋಲಜಿಸ್ಟ್ ಆಗಿರುವ ಡಾ.ಅಲ್ತಾಫ್ ಶೇಖ್ ಎಂಬ ವೈದ್ಯ ಹುತಾತ್ಮ ಸೈನಿಕನ ತಾಯಿಯ ಬಡತನವನ್ನು ಕಂಡು ಆಕೆಗೆ ಉಚಿತ ಚಿಕಿತ್ಸೆ ಕಲ್ಪಿಸಿ ಸುದ್ದಿಯಾಗಿದ್ದಾರೆ. ಡಾ.ಅಲ್ತಾಫ್ ಶೇಖ್, ವೀಲ್ ಚೆಯರ್ ನಲ್ಲಿ ಕುಳಿತಿರುವ ವೃದ್ಧ ಮಹಿಳೆಯನ್ನು ಆಲಂಗಿಸುವ ಹೃದಯಸ್ಪರ್ಶಿ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿಈಗ ಹರಿದಾಡುತ್ತಿದೆ.

ಮಹಾರಾಷ್ಟ್ರದ ಪಿಡಬ್ಲ್ಯುಡಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಅಶೋಕ್ ಚವಾನ್ ಔರಂಗಬಾದ್ ಜಿಲ್ಲೆಯ ನಿವಾಸಿ ವೈದ್ಯ ಅಲ್ತಾಫ್ ರಿಗೆ ಕರೆ ಮಾಡಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

- Advertisement -

ವೈರಲ್ ವಿಡಿಯೋ ಜೊತೆಗೆ ಅಶೋಕ್ ಚವಾನ್, “ಔರಂಗಬಾದ್ ನ ಡಾ.ಅಲ್ತಾಫ್ ವೃದ್ಧ ಮಹಿಳೆಯೋರ್ವರಿಗೆ ಚಿಕಿತ್ಸೆ ನೀಡುತ್ತಿದ್ದರು. ಆಕೆ ಓರ್ವ ಹುತಾತ್ಮನ ತಾಯಿ ಎಂದು ಅರಿತ ಕೂಡಲೇ, ಆತ ಆ ವೃದ್ಧೆಯ ಶುಲ್ಕವನ್ನು ಮನ್ನಾ ಮಾಡಿದರು. ಈ ವಿನಮ್ರ ಭಾವವನ್ನು ನೋಡುತ್ತಾ, ದೇಶಕ್ಕಾಗಿ ಸೇವೆ ಸಲ್ಲಿಸಿದ ಹೀರೋಗಳ ಕುರಿತಂತೆ ತನ್ನ ಸೇವೆ ಮತ್ತು ಸಂವೇದನೆಗೆ ಧನ್ಯವಾದ ಸಲ್ಲಿಸಲು ವೈದ್ಯರಿಗೆ ಕರೆ ಮಾಡಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಅಂದಹಾಗೆ, ಡಾ. ಅಲ್ತಾಫ್ ಶೇಖ್, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಶೇಖ್, ಶಾಂತಾಬಾಯಿ ಸೂರ್ ಕಿಡ್ನಿ ಸಂಬಂಧಿತ ಕಾಯಿಲೆಗೆ ತುತ್ತಾಗಿದ್ದಾರೆ ಮತ್ತು ಆಕೆ ತುಂಬಾ ಬಡವರಾಗಿದ್ದಾರೆ ಎಂದು ತಿಳಿಸಿದ್ದಾರೆ.

- Advertisement -