ಹಿಂದುತ್ವದ ಖಡ್ಗದೊಂದಿಗೆ ಮುಂದೆ ಬರಲು ಶಿವಸೇನೆ ಸದಾ ಸಿದ್ಧ : ಸಂಜಯ್ ರಾವತ್

Prasthutha|

ಹೊಸದಿಲ್ಲಿ : ದೇಶಕ್ಕೆ ಅಗತ್ಯವಿರುವಾಗಲೆಲ್ಲಾ ಹಿಂದುತ್ವದ ಖಡ್ಗದೊಂದಿಗೆ ಮುಂದೆ ಬರಲು ಸಿದ್ದ ಎಂದು ಶಿವಸೇನಾ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ. ಶಿವಸೇನೆ ಹಿಂದೆಯೂ ಹಿಂದುತ್ವವನ್ನು ಎತ್ತಿ ಹಿಡಿದ ಪಕ್ಷವಾಗಿದೆ. ಇನ್ನು ಮುಂದೆಯೂ ಇದನ್ನು ಮುಂದುವರಿಸಲಿದ್ದೇವೆ ಎಂದು ಬಿಜೆಪಿಯೊಂದಿಗಿನ ಮಾತಿನ ಸಮರದಲ್ಲಿ ಸಂಜಯ್ ರಾವತ್ ಹೇಳಿಕೆ ನೀಡಿದ್ದಾರೆ. ನಾವು ಯಾವಾಗಲೂ ಹಿಂದುತ್ವದವರಾಗಿದ್ದೇವೆ. ನಾವು ಬಿಜೆಪಿಯಂತೆ ಹಿಂದುತ್ವ ರಾಜಕೀಯ ಆಡುತ್ತಿಲ್ಲ. ದೇಶಕ್ಕೆ ಆವಶ್ಯಕತೆ ಬಂದಾಗ ಶಿವಸೇನೆಯು ಹಿಂದುತ್ವದ ಖಡ್ಗದೊಂದಿಗೆ ಮುಂದೆ ಬರಲು ಸಿದ್ಧವಾಗಿದೆ ಎಂದು ರಾವತ್ ಹೇಳಿದ್ದಾರೆ.

ನವೆಂಬರ್ 16ರಂದು ಮಹಾರಾಷ್ಟ್ರದಲ್ಲಿ ದೇವಾಲಯಗಳನ್ನು ತೆರೆಯುವ ರಾಜ್ಯ ಸರಕಾರದ ನಿರ್ಧಾರವನ್ನು ಹಿಂದುತ್ವಕ್ಕೆ ದೊರೆತ ಜಯ ಎಂದು ಬಿಜೆಪಿ ಹೇಳಿತ್ತು. ಆದರೆ ಇದು ಯಾರೊಬ್ಬರ ಜಯ ಅಥವಾ ವೈಫಲ್ಯವಲ್ಲ ಎಂದು ರಾವತ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯ ಮೇರೆಗೆ ದೇವಾಲಯಗಳನ್ನು ಮುಚ್ಚಲಾಗಿತ್ತು ಎಂದು ರಾವತ್ ಬಿಜೆಪಿಗೆ ನೆನಪಿಸಿದರು.

- Advertisement -