ಹಿಂದುತ್ವಕ್ಕೆ ಬೇಕಾಗಿದೆ ತಿದ್ದುಪಡಿ ಮಸೂದೆ

0
109

ಧಾರ್ಮಿಕ ಅಲ್ಪಸಂಖ್ಯಾತರನ್ನು ಭಯಪಡಿಸಿ, ಮಣಿಸುವ ಗುರಿಯೊಂದಿಗೆ ಬಿಜೆಪಿ ಸರಕಾರವು ತನ್ನ ಬತ್ತಳಿಕೆಯಿಂದ ಒಂದರ ನಂತರ ಒಂದರಂತೆ ಅಸ್ತ್ರಗಳನ್ನು ಹೊರಕ್ಕೆಳೆಯುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಪಾಸುಮಾಡಿದ Gನ್‌ಐಎ ತಿದ್ದುಪಡಿ ಮಸೂದೆ, ಯುಎಪಿಎ ತಿದ್ದುಪಡಿ ಮಸೂದೆ ಅವುಗಳಲ್ಲಿ ಕೆಲವು. ಇಂದಿನ ವರೆಗೆ ಕೇವಲ ಕೆಲವು ಸಂಘಟನೆಗಳನ್ನು ಮಾತ್ರ ಭಯೋತ್ಪಾದಕ ಗುಂಪೆಂದು ಘೋಷಿಸುತ್ತಿದ್ದರೆ, ಇನ್ನು ಮುಂದೆ ವ್ಯಕ್ತಿಯನ್ನು ಕೂಡ ಭಯೋತ್ಪಾದಕನೆಂದು ಘೋಷಿಸಲು ಹೊಸ ಮಸೂದೆಯ ಪ್ರಕಾರ ಎನ್‌ಐಎಗೆ ಸಾಧ್ಯವಿದೆ. ಲಾಗಾಯ್ತಿನಿಂದ Gನ್‌ಐಎಯ ಕೆಲಸಕಾರ್ಯಗಳ ಇತಿಹಾಸವನ್ನು ಪರಿಶೀಲಿಸಿದರೆ ದೇಶದಲ್ಲಿ ಮುಸ್ಲಿಮರು ಮತ್ತು್ತ ಮಾವೋವಾದಿಗಳಷ್ಟೇ ಭಯೋತ್ಪಾದಕರಾಗಿದ್ದರು; ಮಕ್ಕಾಮಸ್ಜಿದ್, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಿಸಿ ಮುಗ್ಧರ ಹತ್ಯೆ ನಡೆಸಿದ ಮಂದಿ ಭಯೋತ್ಪಾದಕರಲ್ಲ. ಗುಜರಾತಿನಲ್ಲಿ ಪಿತೂರಿ ನಡೆಸಿ ಗಲಭೆಗಳನ್ನೆಬ್ಬಿಸಿ ಸಾವಿರಾರು ಮಂದಿಯನ್ನು ಹತ್ಯೆ ನಡೆಸಿದ ಓರ್ವನೇ ಓರ್ವ ಭಯೋತ್ಪಾದಕನೋ, ದೇಶದ್ರೋಹಿಯೋ ಆಗುವುದಿಲ್ಲ.ಮುಸ್ಲಿಮ್ ಯುವಕರನ್ನು ಕೇವಲ ಸಂಶಯದಿಂದ ಜೀವನ ಪರ್ಯಂತ ಜೈಲಿನಲ್ಲಿ ಕೊಳೆಯುವಂತೆ ಮಾಡುವ ಎಲ್ಲಾ ಅಧಿಕಾರ ಎನ್‌ಐಎಗೆ ನೀಡಲಾಗಿತ್ತು. ಅದರ ಹೊರತಾಗಿ ಇದೀಗ ತಿದ್ದುಪಡಿಯ ಮೂಲಕ ಇನ್ನಷ್ಟು ಅಧಿಕಾರವನ್ನು ನೀಡಲಾಗಿದೆ.

ಪ್ರಜೆಗಳ ಹಕ್ಕುಗಳನ್ನು ಗಾಳಿಗೆ ತೂರಿ, ಯುಎಪಿಎ ಮಸೂದೆಯನ್ನು ತಂದು 2004, 2008, 2013ರಲ್ಲಿ ತಿದ್ದುಪಡಿ ಮೂಲಕ ತನಿಖಾಧಿಕಾರಿಗಳಿಗೆ ಇನ್ನಷ್ಟು ಹೆಚ್ಚಿನ ಅಧಿಕಾರವನ್ನು ನೀಡಿದ್ದು ಕಾಂಗ್ರೆಸ್ ಸರಕಾರವಾಗಿತ್ತು. ಅಬ್ದುನ್ನಾಸರ್ ಮಅದನಿ ಸೇರಿದಂತೆ ದೀರ್ಘಕಾಲ ಜೈಲುವಾಸ ಅನಿಭವಿಸಬೇಕಾಗಿ ಬಂದ ನೂರಾರು ನಿರಪರಾಧಿಗಳು ಅದರ ಬಲಿಪಶುಗಳಾಗಿದ್ದರು. ಜುಲೈ 23ರಂದು ಬಿಡುಗಡೆಯಾದ ಅಲಿಭಟ್, ರಈಸ್ ಬೇಗ್, ಲತೀಫ್ ಅಹ್ಮದ್ ಬಾಜ, ಮಿರ್ಝಾ ನಿಝಾರ್ ಮೊದಲಾದವರು ಕರಾಳ ಕಾನೂನಡಿ ಜೈಲಿನಲ್ಲಿ ಕಳೆದಿದ್ದು ಬರೋಬ್ಬರಿ 23 ವರ್ಷಗಳನ್ನು!

ನಿರ್ದಿಷ್ಟವಾದ ಗುರಿಯನ್ನು ಮುಂದಿರಿಸಿಕೊಂಡು ಬಿಜೆಪಿ ಸರಕಾರವು ಯುಎಪಿಎ ತಿದ್ದುಪಡಿ ಮಸೂದೆಯನ್ನು ಮಾಡಿಸಿದೆ. ಒಟ್ಟು 8 ಮಂದಿ ವಿರೋಧಿಸಿ ಮತ ಚಲಾಯಿಸಿದಾಗ ಬಾಕಿಯಿರುವ 279 ಸಂಖ್ಯೆಯ ಬಹುಮತದೊಂದಿಗೆ ಲೋಕಸಭೆಯಲ್ಲಿ ಮಸೂದೆಯು ಅಂಗೀಕಾರಗೊಂಡಿತು. ಕಾಂಗ್ರೆಸ್ ಸಂಸದರು ಸಭಾತ್ಯಾಗ ಮಾಡಿದಾಗ ಮುಸ್ಲಿಮ್ ಲೀಗ್ ಸಂಸದರು ವಿರೋಧಿಸಿ ಮತ ಚಲಾಯಿಸಿದರು. ಈ ಮಸೂದೆಯು ಕಾನೂನು ಆಗುವುದರೊಂದಿಗೆ ರಾಜ್ಯ ಸರಕಾರಗಳ ಅನುಮತಿಯನ್ನು ಪಡೆಯದೇ ಎನ್‌ಐಎಗೆ ಓರ್ವ ವ್ಯಕ್ತಿಯನ್ನು ಭಯೋತ್ಪಾಕನೆಂದು ಘೋಷಿಸಲು ಮತ್ತು ಸೊತ್ತನ್ನು ಮುಟ್ಟುಗೋಲು ಹಾಕಲು ಸಾಧ್ಯವಿದೆ.

ಮಸೂದೆಯ ಕುರಿತು, ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮವೆಂದು ಕೇಂದ್ರ Wೃಹ ಸಚಿವ ಅಮಿತ್‌ಶಾ ಲೋಕಸಭೆಯಲ್ಲಿ ವರ್ಣಿಸಿದರು. ಮಸೂದೆ ಎಂದೂ ದುರುಪಯೋಗವಾಗದು ಎಂದು ಕೇಂದ್ರ ಸರಕಾರವು ಖಾತರಿಯನ್ನು ನೀಡುತ್ತದೆ ಎಂಬ ಮಾತಿನಲ್ಲಿ ಎಷ್ಟು ಖಾತರಿಯಿದೆ ಎಂಬುದನ್ನು ಕಾದುನೋಡಬೇಕಾಗಿದೆ. ತೃಣಮೂಲ ಕಾಂಗ್ರೆಸ್ಸಿನ ಮಹುವಾ ಮೊಯಿತ್ರಾ ಯುಎಪಿಎ ತಿದ್ದುಪಡಿಯು ಹೆಚ್ಚಿನ ಪ್ರಮಾಣದಲ್ಲಿ ದುರುಪಯೋಗವಾಗುವ ಸಾಧ್ಯತೆಯ ಬಗ್ಗೆ ಲೋಕಸಭೆಯಲ್ಲಿ ಎಚ್ಚರಿಸಿದರು. ಕೇಂದ್ರ ಸರಕಾರ ಯಾರನ್ನಾದರು ಗುರಿಯಾಗಿಸಲು ಬಯಸಿದರೆ ಈ ಕಾನೂನನ್ನು ಉಪಯೋಗಿಸಬಹುದು. ಸರಕಾರದ ಕ್ರಮಗಳ ಬಗ್ಗೆ ಅಸಹಮತ ತೋರುವ ವಿಪಕ್ಷ ನಾಯಕರನ್ನೂ, ಅಲ್ಪಸಂಖ್ಯಾತರನ್ನೂ, ಹೋರಾಟಗಾರರನ್ನೂ ಈ ರೀತಿ ಗುರಿಯಾಗಿಸಲು ಕಾನೂನನ್ನು ಉಪಯೋಗಿಸಬಹುದೆಂಬ ಮಹುವಾ ಮೊಯಿತ್ರಾರ ಟೀಕೆಯು ಹೆಚ್ಚುಕಡಿಮೆ ಸರಿ ಎಂಬುದಕ್ಕೆ ಹಿಂದಿನ ಅನುಭವಗಳೇ ಸಾಕಷ್ಟಿವೆ. ಇಂದು ತಿದ್ದುಪಡಿ ಮಸೂದೆಯ ಅಗತ್ಯವಿರುವುದು ಕರಾಳ ಕಾನೂನಿಗಳಿಗಲ್ಲ; ಬದಲಿಗೆ ದೇಶಕ್ಕೆ ಬೆದರಿಕೆಯಾಗಿ ನಾಗರಿಕರನ್ನು ಬಲಿಪಡೆಯಲು ಬಾಯ್ದೆರೆದು ನಿಂತಿರುವ ಹಿಂದುತ್ವ ಫ್ಯಾಶಿಸಂಗೆ.

ಆದ್ದರಿಂದ ಹಿಂದುತ್ವ ಫ್ಯಾಶಿಸ್ಟರು ನಿರಪರಾಧಿಗಳನ್ನು ಬೇಟೆಯಾಡಿನರಕಯಾತನೆಗೆ ತಳ್ಳಲು ಬಳಸುವ ಕರಾಳ ಕಾನೂನಿನ ನಡೆಗಳನ್ನು ಜನತಂತ್ರ ಹೋರಾಟದ ಮೂಲಕ ಸೋಲಿಸಬೇಕಾಗಿದೆ ಮತ್ತು ಈ ಮೂಲಕ ನಾಗರಿಕರಿಗೆ ನಿರ್ಭೀತಿಯಿಂದ ಬದುಕುವ ಸ್ವಾತಂತ್ರವನ್ನು ಕಲ್ಪಿಸಬೇಕಾಗಿದೆ.

LEAVE A REPLY

Please enter your comment!
Please enter your name here