ಹಸಿವಿನಿಂದ ಕೊರೋನ ಸೋಂಕಿತನ ಸಾವು | ತನಿಖೆಗೆ ಆದೇಶ

Prasthutha|

ಬಳ್ಳಾರಿ : ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಹೋಮ್ ಐಸೊಲೇಶನ್ ನಲ್ಲಿದ್ದ ಸೋಂಕಿತರೊಬ್ಬರು ಹಸಿವಿನಿಂದ ಬಳಲಿ ಸಾವಿಗೀಡಾದ ಅಮಾನವೀಯ ಘಟನೆ ವರದಿಯಾಗಿದೆ. ಬಳ್ಳಾರಿಯ ಬಿ.ಬೆಳಗಲ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವೃದ್ಧ ವ್ಯಕ್ತಿಯನ್ನು ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಆದರೆ, ಈ ವೇಳೆ ಅವರಿಗೆ ಸರಿಯಾಗಿ ಊಟ ಲಭಿಸಿಲ್ಲ. ಹೀಗಾಗಿ, ಹಸಿವಿನಿಂದ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ವೃದ್ಧ ವ್ಯಕ್ತಿಗೆ ಸೋಂಕು ಇರುವುದು ದೃಢಪಡುತ್ತಿದ್ದಂತೆ ಅವರ ಕುಟುಂಬಸ್ಥರು, ಅವರನ್ನು ಮನೆಯಲ್ಲೇ ಬಿಟ್ಟು ಪ್ರತ್ಯೇಕವಾಗಿ ಹೊರಟುಹೋಗಿದ್ದರು. ಮನೆಯಲ್ಲೇ ಇದ್ದ ಸೋಂಕಿತ ವ್ಯಕ್ತಿ ಕೋವಿಡ್ ಸಹಾಯವಾಣಿಗೆ ನಿರಂತರವಾಗಿ ಕರೆ ಮಾಡಿದ್ದರೂ ಯಾವುದೇ ಸಹಾಯ ದೊರಕಿರಲಿಲ್ಲ. ಅನ್ನ, ನೀರು, ಸೂಕ್ತ ಚಿಕಿತ್ಸೆ ಇಲ್ಲದೆ, ವೃದ್ಧ ಮನೆಯಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಘಟನೆಯ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಆದೇಶಿಸಿದ್ದಾರೆ.

- Advertisement -