ಹಥ್ರಾಸ್ ಯುವತಿಯ ಮೇಲೆ ಅತ್ಯಾಚಾರ ನಡೆದಿಲ್ಲ: ಯುಪಿ ಪೊಲೀಸ್

Prasthutha News

ಲಕ್ನೊ: ಎಫ್.ಎಸ್.ಎಲ್ ವರದಿಯ ಪ್ರಕಾರ  ಹಥ್ರಾಸ್ ಸಂತ್ರಸ್ತ ಯುವತಿಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿರುವುದರೊಂದಿಗೆ ಸಾಮೂಹಿಕ ಅತ್ಯಾಚಾರ ಪ್ರಕರಣವು ಹೊಸ ತಿರುವನ್ನು ಪಡೆದುಕೊಂಡಿದೆ.

ಯುವತಿ ಕತ್ತಿನಲ್ಲಾದ ಗಾಯದಿಂದ ಸಾವನ್ನಪ್ಪಿದ್ದಾಳೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ಬೆಳಕಿಗೆ ಬಂದಿದೆ ಎಂದು ಕುಮಾರ್ ತಿಳಿಸಿದ್ದಾರೆ.

ಯುವತಿಯ ದೇಹದಿಂದ ಪಡೆದ ಮಾದರಿಗಳಲ್ಲಿ ವೀರ್ಯ ಪತ್ತೆಯಾಗಿಲ್ಲ. ಜಾತಿಯಾಧಾರಿತ ಉದ್ವಿಗ್ನತೆಯನ್ನು ಪ್ರಚೋದಿಸುವುದಕ್ಕಾಗಿ ಪ್ರಕರಣವನ್ನು ಬಳಸಲಾಗಿರುವುದು ಸ್ಪಷ್ಟವಾಗುತ್ತದೆ. ಇಂತಹ ವ್ಯಕ್ತಿಗಳನ್ನು ಗುರುತಿಸಿ ಕ್ರಮತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.


Prasthutha News