ಹಥ್ರಾಸ್: ಮಾಧ್ಯಮಗಳನ್ನು ಭೇಟಿಯಾಗದಂತೆ ಸಂತ್ರಸ್ತೆಯ ಕುಟುಂಬಕ್ಕೆ ಪೊಲೀಸರ ದಿಗ್ಬಂಧನ

ಹಥ್ರಾಸ್: ತಮ್ಮನ್ನು ಮಾಧ್ಯಮಗಳೊಂದಿಗೆ ಮಾತನಾಡುವುದರಿಂದ ತಡೆಯಲಾಗಿದೆ ಎಂದು ಹಥ್ರಾಸ್ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಯ ಕುಟುಂಬ ಸದಸ್ಯರೊಬ್ಬರು ತಿಳಿಸಿದ್ದಾರೆ.

ಈ ಬೆಳಗ್ಗೆ ಮಾಧ್ಯಮಗಳನ್ನು ತಲುಪುವುದಕ್ಕಾಗಿ ಸಂತ್ರಸ್ತೆಯ ಕುಟುಂಬದ ಕಿರು ಸದಸ್ಯನೊಬ್ಬರನ್ನು ಕಳುಹಿಸಲಾಗಿತ್ತು. ತಮ್ಮ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡುವಂತೆ ಹೇಳಲಾಗಿದೆ ಮತ್ತು ಕೆಲವು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಿರಿಯ ಸದಸ್ಯನೊಬ್ಬ ಹೇಳಿರುವುದಾಗಿ ಎನ್.ಡಿ.ಟಿ.ವಿ ವರದಿ ಮಾಡಿದೆ.

- Advertisement -

ಕುಟುಂಬ ಸದಸ್ಯನು ಗ್ರಾಮದ ಪ್ರವೇಶಭಾಗದ ಹೊರಗೆ ಕಾಯುತ್ತಿದ್ದ ಮಾಧ್ಯಮಗಳನ್ನು ತಲುಪುವುದಕ್ಕಾಗಿ ಗದ್ದೆಯನ್ನು ದಾಟಿ ಬಂದಿದ್ದನು.

“ಫೋನನ್ನು ಅವರು ವಶಪಡಿಸಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಫೋನ್ ನಲ್ಲಿ ಮಾತನಾಡುವುದಕ್ಕಾಗಿ ನನ್ನಕುಟುಂಬ ಸದಸ್ಯರು ನನ್ನನ್ನು ಇಲ್ಲಿಗೆ ಕಳಿಸಿದ್ದರು. ನಾನು ತಪ್ಪಿಸಿಕೊಂಡು ಗದ್ದೆಯ ಮೂಲಕ ಬಂದೆ. ನಮ್ಮನ್ನು ಅವರು ಹೊರಹೋಗಲು ಬಿಡುತ್ತಿಲ್ಲ. ಮಾಧ್ಯಮಗಳನ್ನೂ ಒಳಹೋಗಲು ಅವರು ಬಿಡುತ್ತಿಲ್ಲವೇ?” ಎಂದು ಬಾಲಕನು ಪ್ರಶ್ನಿಸಿದನು.

ಅವನು ವರದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಕೂಡಲೇ ಪೊಲೀಸ್ ಅಧಿಕಾರಿಯೊಬ್ಬ ಅಲ್ಲಿಗೆ ಬಂದನು. ಆತನು ಸ್ಥಳದಿಂದ ಕಾಲ್ಕಿತ್ತನು.

ಹಥ್ರಾಸ್ ಘಟನೆಯ ಕುರಿತು ಜಗತ್ತಿಗೆ ಸತ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ಮಾಧ್ಯಮ ಪ್ರವೇಶವನ್ನು ಯೋಗಿ ಸರಕಾರ ನಿಷೇಧಿಸಿದೆ.

- Advertisement -