ಹಥ್ರಾಸ್ ಪ್ರಕರಣ: ಇಂಡಿಯಾ ಟುಡೆ ವರದಿಗಾರ್ತಿಯ ದೂರವಾಣಿ ಕದ್ದಾಲಿಕೆ

Prasthutha|

ಹೊಸದಿಲ್ಲಿ: ಹಥ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ವರದಿ ಮಾಡುತ್ತಿರುವ ತನ್ನ ವರದಿಗಾರ್ತಿಯ ಸಂಭಾಷಣೆಯೊಂದು ಹೇಗೆ ಆನ್ ಲೈನ್ ನಲ್ಲಿ ಸೋರಿಕೆಯಾಯಿತು ಎಂದು ಸರಕಾರವನ್ನು ಪ್ರಶ್ನಿಸಿ ಇಂಡಿಯಾ ಟುಡೆ ಚಾನೆಲ್ ಹೇಳಿಕಯನ್ನು ಬಿಡುಗಡೆಗೊಳಿಸಿದೆ.

ಯಾಕಾಗಿ ಯುವತಿಯ ಕುಟುಂಬವನ್ನು ಕಣ್ಗಾವಲಿನಡಿ ಇಡಲಾಗಿದೆ, ಯಾವ ಕಾನೂನಿನ ಆಧಾರದ ಮೇಲೆ ದೂರವಾಣಿ ಕರೆಯನ್ನು ರೆಕಾರ್ಡ್ ಮಾಡಿ ಸೋರಿಕೆ ಮಾಡಲಾಗಿದೆ ಎಂದು ಮಾಧ್ಯಮ ಸಂಸ್ಥೆ ಪ್ರಶ್ನಿಸಿದೆ.

- Advertisement -

ಇಂಡಿಯಾ ಟಿವಿ ವರದಿಗಾರ್ತಿ ತನುಶ್ರೀ ಪಾಂಡೆ ಮತ್ತು ಸಂತ್ರಸ್ತೆಯ ಸಹೋದರ ಸಂದೀಪ್ ಮಧ್ಯೆ ಏರ್ಪಟ್ಟಿದೆಯೆನ್ನಲಾದ ಆಡಿಯೊ ಸಂಭಾಷಣೆಯ ಕ್ಲಿಪ್ ಸರಕಾರಿ ಪರ ವೆಬ್ ಸೈಟ್ ನಲ್ಲಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದಿರುವುದು ರಾಜಕೀಯ ವಿವಾದದ ಕಿಡಿಯನ್ನು ಹಚ್ಚಿದೆ.

ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ  “ಪೊಲೀಸ್ ತನಿಖೆಯಿಂದ ತೃಪ್ತಿಯಾಗಿದೆ” ಎಂದು ಬರೆಯಲಾದ ದಾಖಲೆಯ ಮೇಲೆ ಸಹಿ ಹಾಕುವಂತೆ ತನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಸಂತ್ರಸ್ತೆಯ ತಂದೆ ಹೇಳುವ ವೀಡಿಯೊವನ್ನು ಚಿತ್ರಿಸಿ ಕಳುಹಿಸುವಂತೆ ತನುಶ್ರೀ ಪಾಂಡೆ ಸಂದೀಪ್ ಗೆ ಹೇಳುವುದು ಕ್ಲಿಪ್ ನಲ್ಲಿ ಕೇಳಿಸುತ್ತದೆ.

ಮಾಧ್ಯಮಗಳು ಹೇಗೆ ವಾಸ್ತವಗಳನ್ನು ತಿರುಚುತ್ತಿದೆ ಮತ್ತು ಮಹಿಳೆಯ ಕುಟುಂಬದೊಂದಿಗೆ ಸುಳ್ಳು ಹೇಳಿಕೆ ನೀಡುವಂತೆ ಬಲವಂತಪಡಿಸುತ್ತಿದೆ ಎಂದು ಆಡಿಯೊದಿಂದ ತಿಳಿಯುತ್ತದೆ ಎಂಬುದಾಗಿ ಬಿಜೆಪಿ ಹೇಳಿದೆ.

- Advertisement -