ಸ್ಥಾಪಿತ ಮೌಲಾನಾಗಳು

0
56

-ಕಲೀಂ

ಸರಕಾರಗಳು ಬದಲಾಗುತ್ತಿರುವ ವೇಳೆ ಅಥವಾ ಅದರ ಸಾಧ್ಯತೆಯನ್ನು ಮುಂಚಿತವಾಗಿಯೇ ಅರಿತುಕೊಂಡು ಪಕ್ಷಾಂತರ ಮಾಡುವ ಎಂ.ಜೆ.ಅಕ್ಬರ್‌ನಂತಹ ವ್ಯಕ್ತಿಗಳು ಎಲ್ಲಾ ಪಕ್ಷಗಳಲ್ಲೂ ಕಾಣಸಿಗುತ್ತಾರೆ. ಕಾಂಗ್ರೆಸ್ ಯಾವಾಗಲೂ ಒಂದು ಸರ್ಕಸ್ ಕಂಪೆನಿಯಂತೆ. ಆದುದರಿಂದ ಭಾರಿ ಪ್ರದರ್ಶನ ತೋರಿ ಯಶಸ್ಸು ಕಾಣುವ ಮತ್ತೊಂದು ಗುಡಾರದೊಳಗೆ ನುಸುಳುವವರ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಬಹುದು. ಅಧಿಕಾರದೊಂದಿಗೆ ಸ್ಥಾನಮಾನ, ಅನುಕೂಲತೆ, ಭೋಪರಾಕ್‌ಗಳನ್ನು ಇಷ್ಟಪಡದವರು ಬಹಳ ಕಡಿಮೆ. ಕೆಲವೊಮ್ಮೆ ಕಾಂಗ್ರೆಸ್‌ನ ಅದೇ ಅಜೆಂಡಾಗಳ ಮುಂದುವರಿಕೆಯನ್ನು ಸಂಘದ ಆಳ್ವಿಕೆಯಲ್ಲೂ ಅವರು ಕಾಣುತ್ತಾರೆ. ಆದ್ದರಿಂದ ಈ ಪಕ್ಷಾಂತರದಲ್ಲಿ ಗಯಾರಾಂಗಳಿಗೆ ಅಪರಾಧ ಮನೋಭಾವ ಬಹಳ ಕಡಿಮೆಯಂದಷ್ಟೇ ಹೇಳಬಹುದು.

ಅಧಿಕಾರದ ಆಸೆಯೊಂದಿಗೆ ಭಯವೂ ಒಂದು ಅಂಶವಾಗಿರುತ್ತದೆ. ಪ್ರಧಾನ ಮಂತ್ರಿಗೆ ಪತ್ರ ಬರೆದ ಪ್ರಗತಿಪರರು, ಸಾಹಿತಿಗಳು ಮತ್ತು ಸಾಮಾಜಿಕ ನಾಯಕರ ಮೇಲೆ ಪ್ರಕರಣವನ್ನು ದಾಖಲಿಸಿದ್ದು ಇತ್ತೀಚಿಗಿನ ಸುದ್ದಿ. ಅದು ಭಯೋತ್ಪಾದನಾ ಯೋಜನೆಯ ಒಂದು ಭಾಗವಷ್ಟೆ. ಸುಮ್ಮನೆ ಯಾಕೆ ನ್ಯಾಯಾಲಯದ ಮೆಟ್ಟಿಲು ಹತ್ತಬೇಕು ಎಂಬ ಚಿಂತನೆಯ ಕಾರಣದಿಂದ ಇನ್ನಿತರ ನಾಯಕರುಗಳು ಅಂತಹ ಸತ್ಯದ ಪ್ರಸ್ತಾವನೆಗೆ ಸಹಿ ಹಾಕಲಾರರು. ಬೀಫ್ ಹೊಂದಿದ್ದಾನೆ ಎಂಬ ಕಾರಣಕ್ಕೆ ಓರ್ವ ಮುಸ್ಲಿಮನನ್ನು ಬಹಿರಂಗವಾಗಿ ಹೊಡೆದು ಕೊಲ್ಲುವುದರ ಹಿಂದೆಯೂ ಇದೇ ಉದ್ದೇಶವಿದೆ. ಅತ್ಯಂತ ಹೆಚ್ಚಿನ ಖರ್ಚಿಲ್ಲದೆ ಕೋಮುಗಲಭೆಯನ್ನು ಸೃಷ್ಟಿಸುವುದಕ್ಕಿಂತ ಇದು ಅತ್ಯಂತ ಸುಲಭ ಮತ್ತು ಲಾಭದಾಯಕವಾಗಿದೆ. ಕೆಲವರು ಈ ರೀತಿಯ ಕುಟಿಲ ತಂತ್ರಗಳ ವಿರುದ್ಧ ಧ್ವನಿ ಎತ್ತುವಾಗ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದೇ ಇರುವುದು ತಂತ್ರದ ಒಂದು ಭಾಗವಾಗಿದೆ.

ಸಂಘಿಗಳು ಅವರ ಲೆಕ್ಕಾಚಾರಕ್ಕಿಂತ ಹೆಚ್ಚಿನ ವೇಗದಲ್ಲಿ ದನ-ಕರುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಮುಸ್ಲಿಮ್ ನೇತಾರರ ಕುರಿತು ಅವರಿಗೆ ತುಂಬಾ ಅನುಮಾನವಿದೆ. ಮುಸ್ಲಿಮ್ ಸಮುದಾಯವು ಸಂಘಿಗಳನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಯಾಕೆಂದರೆ, ಸಂಘಪರಿವಾರವು ಆರಂಭದಿಂದಲೇ ಮುಸ್ಲಿಮ್ ದ್ವೇಷದ ನಿಲುವನ್ನು ಹೊಂದಿತ್ತು. ಆದ್ದರಿಂದ ಸಂಘಪರಿವಾರವನ್ನು ಸಂತುಷ್ಟಗೊಳಿಸುವಲ್ಲಿ ಭೌತಿಕ ಲಾಭಗಳನ್ನು ನಿರೀಕ್ಷಿಸಿ ಬಲೆಗೆ ಬೀಳುವವರನ್ನು ಇಂದಿಗೂ ಸಾಮಾನ್ಯ ಮುಸ್ಲಿಮರು ನಿರ್ಲಕ್ಷಿಸುತ್ತಾರೆ. ಸೂಫೀ ಸಮಾವೇಶದ ಎಲ್ಲಾ ಖರ್ಚುಗಳನ್ನು ವಹಿಸಿದ ನಂತರವೂ ಯಾವನೇ ಓರ್ವ ವಿದ್ವಾಂಸನಿಗೂ ಸಮುದಾಯದಲ್ಲಿ ಸ್ವೀಕಾರಾರ್ಹತೆ ಲಭಿಸಿಲ್ಲ. ಝಿಕ್ರ್ ಹಲ್ಕ ಬೇರೆ, ರಾಜಕೀಯವೇ ಬೇರೆ ಎಂಬ ನಿಲುವು ಜನಸಾಮಾನ್ಯರದ್ದು.

ಆದರೆ ಸಾಮ್ರಾಟನ ಎರಡನೇಯ ಪಟ್ಟಾಭಿಷೇಕದೊಂದಿಗೆ ಮುಸ್ಲಿಮರಲ್ಲಿ ದೊಡ್ಡ ಬದಲಾವಣೆಗಳು ಕಾಣುತ್ತಿದೆ. ಅದರಲ್ಲಿ ಮುಖ್ಯವಾದುದು ದೇವಬಂದ್‌ನಲ್ಲಿರುವ ಕೋಟ್ಯಂತರ ಮೌಲ್ಯದ ವಕ್ಫ್ ಭೂಮಿಯ ಹೆಸರಿನಲ್ಲಿ ಜಗಳವಾಡುತ್ತಿರುವ ಮಹ್ಮೂದ್ ಮದನಿ ಮತ್ತು ಅರ್ಶದ್ ಮದನಿಯ ವಿಚಾರ. ವಿಶಿಷ್ಟ ಉಡುಪು ಧರಿಸಿ ದೇವಬಂದಿನಿಂದ ಹೊರಬರುವ ಯುವ ಮೌಲಾನಗಳ ಸಹಾಯದೊಂದಿಗೆ ಮುಸ್ಲಿಮ್ ಸಮುದಾಯವನ್ನು ಇವರು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಉತ್ತರ ಪ್ರದೇಶದ ಮಸ್ಜಿದ್‌ಗಳಲ್ಲಿರುವ ಹೆಚ್ಚಿನ ಇಮಾಮರು, ಖತೀಬರು, ಮುಅಝ್ಝಿನ್‌ಗಳು ಈ ಗುಂಪಿನಲ್ಲಿ ಗುರುತಿಸಿಕೊಳ್ಳುವ ಕಾರಣ ಈ ನಿಯಂತ್ರಣ ಸುಲಭವಾಗಿದೆ.

ಮೌಲಾನಾ ಎಂಬ ಪದಕ್ಕೆ ನಮ್ಮ ನೇತಾರ ಎಂಬ ಅರ್ಥವಿದ್ದರೂ ಅವರು ಪೌರೋಹಿತ್ಯದ ರೂಪಕಗಳಾಗಿದ್ದಾರೆ. ಮಹ್ಮೂದ್ ಮದನಿ ಅರ್ಶದ್ ಮದನಿಯ ಜೇಷ್ಠ ಪುತ್ರ. ಒಂದು ಕಾಡಿನಲ್ಲಿ ಎರಡು ಸಿಂಹಗಳು ಇರಬಾರದೆಂಬ ಕಾನೂನಿನ ಪ್ರಕಾರ ಚಿಕ್ಕಪ್ಪನೊಂದಿಗೆ ಮಹ್ಮೂದ್ ಮದನಿ ಜಗಳವಾಡುತ್ತಿದ್ದಾರೆ. ಅದಕ್ಕೂ ಮುಂಚೆ, ತಾನೂ ಓರ್ವ ಪಕ್ವ ನೇತಾರನೆಂದು ಮಹ್ಮೂದ್ ಮದನಿ ಸಾಬೀತುಪಡಿಸಿದ್ದಾರೆ. 370, 35ಎ ವಿಧಿಯನ್ನು ಸಂಘೀ ರಾಷ್ಟ್ರಪತಿ ಕೇವಲ ಪೆನ್ನಿನಿಂದ ಗೀಚಿ ರದ್ದುಪಡಿಸಿದಾಗ ಅದನ್ನು ಮಹ್ಮೂದ್ ಮದನಿ ಬೆಂಬಲಿಸಿದ್ದರು. ಇದರಿಂದಾಗಿ ನಾಗಪುರ ಮತ್ತು ಜಂಡೇವಾಲ್‌ನಲ್ಲಿ ಅವರು ಸಂಘಪರಿವಾರದ ಪ್ರೀತಿಪಾತ್ರ ರಾಷ್ಟ್ರೀಯ ಮುಸ್ಲಿಮನಾಗಿ ಮಾರ್ಪಟ್ಟರು. ತದನಂತರ, ಮದನಿ ಜಿನೆವಾ ಪ್ರಯಾಣದ ಫಸ್ಟ್ ಕ್ಲಾಸ್ ವಿಮಾನ ಟಿಕೆಟ್ಟನ್ನು ಪಡೆದುಕೊಂಡರು. ಸೂಟುಧಾರಿಗಳಾದ ಕೆಲವು ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯರ ಜೊತೆ ನೆರೆತ ಗಡ್ಡಧಾರಿ ಶ್ವೇತ ಟೋಪಿ ಧರಿಸಿದ್ದ ಮೌಲಾನ ಸ್ಟೈಲಾಗಿ ಭಾರತ ಸರಕಾರದ ನಿಲುವನ್ನು ಮತ್ತೊಮ್ಮೆ ಬೆಂಬಲಿಸಿದರು. ಪತ್ರಕರ್ತರು ಯಾವ್ಯಾವ ಪ್ರಶ್ನೆಗಳನ್ನು ಅವರ ಮುಂದಿಟ್ಟರು ಎಂಬುದನ್ನು ಭಾರತೀಯ ಮಾಧ್ಯಮಗಳು ಬಹಿರಂಗಪಡಿಸಿಲ್ಲ. ಆದರೆ ಸೆಪ್ಟೆಂಬರ್ ಕೊನೆಯ ವಾರದಲ್ಲಿ, ಮದ್ಯ ಸೇವಿಸಲು ಸೇರುವ ಪಂಚತಾರ ಸಮಾವೇಶ ಸ್ಥಳವಾದ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್‌ನಲ್ಲಿ ಮಾಜಿ ಜಸ್ಟಿಸ್ ಎ.ಪಿ.ಷಾ ಮತ್ತಿತರರು ಸೇರಿ ಕರೆದ ಸಭೆಯೊಂದರಲ್ಲಿ ಮಹ್ಮೂದ್ ಮದನಿ ಭಾಗವಹಿಸಿದ್ದರು. ಮೌಲಾನರ ದೇಶಪ್ರೇಮದ ಭಾಷಣಕ್ಕೆ ಸಭೆಯಲ್ಲಿದ್ದ ಕಾಶ್ಮೀರಿ ಪಂಡಿತನಾದ ಓರ್ವ ಯುವಕನಿಂದ ಬಿಸಿ ಉತ್ತರ ತೂರಿ ಬಂತು. ಕಾಶ್ಮೀರ ನಮ್ಮದೆಂದು ಹೇಳಲು ಮದನಿ ಮತ್ತು ಶಾಗೆ ಅಧಿಕಾರವನ್ನು ಕೊಟ್ಟವರಾರು? ಎಂದು ಪ್ರಶ್ನಿಸಿದ ಆ ಯುವಕ, ”ಕಾಶ್ಮೀರ್ ಕಿಸೀ ಕಿ ಬಾಪ್ ಕ ನಹೀ, ಬಲ್ಕೀ ಕಾಶ್ಮೀರಿ ಕಾ ಹೈ(ಕಾಶ್ಮೀರ ಯಾರ ಅಪ್ಪನದೂ ಅಲ್ಲ, ಕಾಶ್ಮೀರ ಕಾಶ್ಮೀರಿಗಳದ್ದು)” ಎಂದು ಹೇಳಿ ರೋಷಾವೇಶಗೊಳ್ಳುತ್ತಾನೆ.

ಮದನಿ ‘ಕಾಶ್ಮೀರ್ಮ ಕಣಿವೆ’ಯನ್ನು ಒಮ್ಮೆಯಾದರೂ ಸಂದರ್ಶಿಸಿದ್ದಾರೆಯೇ ಎಂದು  ತಿಳಿಯದು. ಆದರೆ ಕಾಶ್ಮೀರ ಸಮಸ್ಯೆ ಸುದ್ದಿಯಾಗುವ ಸಂದರ್ಭದಲ್ಲೆಲ್ಲಾ ಮದನಿ ರಂಗಪ್ರವೇಶ ಮಾಡುತ್ತಾರೆ. 2010 ಅಕ್ಟೋಬರ್‌ನಲ್ಲಿ ಅಮೆರಿಕಾ ಅಧ್ಯಕ್ಷ ಒಬಾಮ ಭಾರತಕ್ಕೆ ಭೇಟಿ ನೀಡಿದಾಗ ಜಂ ಇಯ್ಯತುಲ್ ಉಲಮಾ ಹಿಂದ್ ದಿಲ್ಲಿಯ ರಾಮ್‌ಲೀಲಾ ಮೈದಾನದಲ್ಲಿ ಕಾಶ್ಮೀರ ಮಹಾ ಸಮಾವೇಶವೊಂದನ್ನು ಆಯೋಜಿಸಿದ್ದರು. ಕಾಶ್ಮೀರಿಗಳ ನ್ಯಾಯವಾದ ಹಕ್ಕುಗಳನ್ನು ಸಂರಕ್ಷಿಸಬೇಕು ಮತ್ತು ಅವರ ಪೌರ ಹಕ್ಕುಗಳನ್ನು ಪುನಃ ಸ್ಥಾಪಿಸಬೇಕೆಂಬ ಮಹತ್ವದ ಸಂದೇಶವನ್ನು ಆ ಸಮಾವೇಶವು ಮುಂದಿಟ್ಟಿತ್ತು. ಕಣಿವೆಯನ್ನು ಕಾರಾಗೃಹ ಮಾಡುವ ಎಎಫ್‌ಎಸ್‌ಪಿಎ (ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ), ರಾಷ್ಟ್ರೀಯ ಭದ್ರತಾ ಕಾಯ್ದೆ ಮೊದಲಾದವುಗಳನ್ನು ಹಿಂಪಡೆಯಬೇಕೆಂದು ಸಮಾವೇಶವು ಆಗ್ರಹಿಸಿತು. ಅದರಿಂದ ಕಾಶ್ಮೀರಿಗಳಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಅದೇ ವೇಳೆ ಮದನಿ ಅದರ ಫಾಯಿದೆಯನ್ನು ಗಿಟ್ಟಿಸಿಕೊಂಡರು. ಇದೀಗ ಮೌಲಾನ ಝೆಡ್ ಪ್ಲಸ್ ಭದ್ರತೆಯನ್ನು ಪಡೆದಿದ್ದಾರೆ.

ಇಂತಹ ಲಾಭ ಮಹ್ಮೂದ್ ಮದನಿ ಮಾತ್ರ ಪಡೆದರೆ ಸಾಲದು ಎಂದು ಬಗೆದು ಅಹ್ಲೇ ಹದೀಸ್ ಎಂಬ ಪರಿಷ್ಕೃತ ಪುರೋಹಿತ ಸಂಘಟನೆಯು  ಮಧ್ಯಪ್ರವೇಶ ಮಾಡಿದೆ.  ಈ ಎರಡೂ ಸಂಘಟನೆಗಳು ಸಿಹಿ ಎಲ್ಲಿದೆ ಎಂದು ತಿಳಿಯುವ ಅಸಾಮಾನ್ಯ ಘ್ರಾಣ ಶಕ್ತಿಯನ್ನು ಹೊಂದಿವೆ. ಭೂಗತ ಪ್ರತಿನಿಧಿಗಳು  ಇವರನ್ನು ಗೌರವಿಸುತ್ತಿದ್ದಾರೆ. ಮೌಲಾನಾ ಅಝ್ಗರ್ ಅಲಿ ಇಮಾಮ್ ಮಹ್ದಿ ಸಲಫಿ ಎಂಬ ಶಿಯಾ-ಸುನ್ನೀ ಸಮ್ಮಿಶ್ರ ನಾಮವಿರುವ ಅಹ್ಲೇ ಹದೀಸ್ ನೇತಾರ 370 ವಿಧಿ ರದ್ದನ್ನು ಮಾತ್ರ  ಬೆಂಬಲಿಸಿದ್ದಲ್ಲ. ಜೊತೆಗೆ, ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಇಡೀ ದೇಶದಲ್ಲಿ ಜಾರಿಗೊಳಿಸಿ ಬಂದೀಖಾನೆಯ ಸಂಖ್ಯೆಯನ್ನು ಹೆಚ್ಚಿಸುವುದನ್ನು ಬೆಂಬಲಿಸಿದ್ದರು. ತನ್ನ ಹಿಂಬಾಲಕರೊಂದಿಗೆ  ಅಮಿತ್ ಶಾ  ಭೇಟಿ ಮಾಡಿದ ಅವರು ತಮ್ಮ ಬೆಂಬಲವನ್ನು ಸೂಚಿಸಿದ್ದರು. ಆ ಸಂದರ್ಭದಲ್ಲಿ ಕಾಶ್ಮೀರ ಜನತೆಯ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಈ ಎಲ್ಲಾ ಕ್ರಮ ಕೈಗೊಂಡಿದ್ದೇವೆ ಎಂಬ ತಮಾಷೆಯನ್ನು ಗೃಹಮಂತ್ರಿ ಹೇಳಿದಾಗ ಗುಂಪಿನಲ್ಲಿದ್ದ ಮಹ್ಮೂದ್ ಖಾರಿ, ಮಹ್ಮೂದ್ ಉಸ್ಮಾನ್, ಮನ್ಸೂರ್ ಪೂರಿ ಬಹುಶಃ ನಗುವನ್ನು ತಡೆದುಕೊಳ್ಳಲು ಪಾಡುಪಟ್ಟಿರಬಹುದು. ದಂತ ಪಂಕ್ತಿಗಳನ್ನು ಪ್ರದರ್ಶಿಸದೇ ನಗಬೇಕೆಂದು ಸಲಫುಸ್ಸಾಲಿಹಿಗಳು ಕಲಿಸಿದ್ದರಿಂದ ಮೌಲಾನರಿಗೆ ಅದು ಕಷ್ಟವೆಂದು ತೋರಿರಲಿಕ್ಕಿಲ್ಲ. ಇನ್ನು ಭಾರತೀಯ ಮುಸ್ಲಿಮರು ಜಂಇಯ್ಯತ್‌ನ ಸದ್ಭಾವನಾ ಯಾತ್ರೆ ಎಂಬ ಹೆಸರಿನ ಇನ್ನೊಂದು ಬೆದರಿಕೆಯನ್ನು ಎದುರಿಸಲು ಸಿದ್ಧವಾಗಬೇಕಾಗಿದೆ!

ಈ ತಮಾಷೆಯ ಭಾಗವಾಗಿ ಸದ್ಯ ಮುಸ್ಲಿಮರ ನಿಯಂತ್ರಣ ತಮಗೆಂದು  ವಾದಿಸುವ ಜಂಇಯ್ಯತ್ ಆಗಸ್ಟ್‌ನಲ್ಲಿ ವಿವಿಧ ಸಂಘಟನೆಯ ಸಭೆಯೊಂದನ್ನು ದಿಲ್ಲಿಯಲ್ಲಿ ಕರೆದಿತ್ತು.  ಇದರಲ್ಲಿ ಜಮಾಅತೇ ಇಸ್ಲಾಮಿ ಅಮೀರ್, ಮುಸ್ಲಿಮರು ಸಿವಿಲ್ ಸರ್ವಿಸ್ ಪರೀಕ್ಷೆ ಉತ್ತೀರ್ಣರಾದರೆ ಎಲ್ಲವೂ ಮುಗಿಯಿತು ಎಂದು ಭಾವಿಸುವ ಝಫರ್ ಮುಹಮ್ಮದ್ ಎಂಬ ಮಾಜಿ ಬ್ಯೂರೋಕ್ರೇಟ್, ಮುಸ್ಲಿಮರ ಆಹಾರ, ಕೃಷಿ ಉತ್ಪನ್ನ ಎಂಬಿತ್ಯಾದಿ ವಿಚಾರಗಳನ್ನು ಖಾತರಿಪಡಿಸುವ ಎನ್‌ಜಿಓದ ನಾಯಕ ಮೊದಲಾದವರು ಭಾಗವಹಿಸಿದ್ದರು. ಸಭೆಯು ಕಾಶ್ಮೀರ ವಿಚಾರವಾಗಿ ದೊಡ್ಡ ಚರ್ಚೆ ನಡೆಸಿದ ನಂತರ ಬೆಟ್ಟ ಅಗೆದು ಇಲಿಯನ್ನು ಕಂಡು ಹುಡುಕಿದ ಹಾಗೆ ಜತೆಯಾಗಿ ನಿರ್ಣಯವೊಂದನ್ನು ಹೊರಡಿಸಿತು. ದೇಶದ ಭದ್ರತೆ, ಅಸ್ತಿತ್ವವನ್ನು ಖಾತರಿಪಡಿಸಬೇಕಾದುದ್ದು ಪೌರರ ಹೊಣೆಯಾಗಿದೆ ಎಂದು ಮನವಿಯಲ್ಲಿ ಹೇಳಲಾಗುತ್ತದೆ. ಮಾತ್ರವಲ್ಲ ನ್ಯಾಯ, ಮೂಲಭೂತ ಹಕ್ಕು ಇವೆಲ್ಲವನ್ನು ಪೌರರಿಗೆ ನೀಡಿದ್ದು ಕೇವಲ ರಾಷ್ಟ್ರದ ಉಳಿವಿಗಾಗಿ ಎಂಬ ಹೊಸ ಸಿದ್ಧಾಂತವನ್ನು ನೇತಾರರು ಮಂಡಿಸಿದರು. ಸಾಂವಿಧಾನಿಕವಾಗಿಯೇ ಕಾಶ್ಮೀರದ ವಿಶೇಷ ಅಧಿಕಾರವನ್ನು ರದ್ದುಪಡಿಸಿದೆ, ಅದರಲ್ಲಿ ಏನಾದರು ದೂರುಗಳಿದ್ದರೆ ಸುಪ್ರೀಂ ಕೋರ್ಟ್ ಇದೆಯಲ್ಲವೇ?! ಮತ್ತೇಕೆ ಭಯಪಡಬೇಕು? ಮೊದಲಾದ ಸಮರ್ಥನೆಗಳೂ ಮನವಿಯಲ್ಲಿದೆ. ಅದರೊಂದಿಗೆ ಮೌಲಾನಾ ಸಧ್ಯದ ಸನ್ನಿವೇಶದಲ್ಲಿ ಯುವಕರಲ್ಲಿ ಇನ್ನೊಂದು ಮನವಿಯನ್ನು ಮುಂದಿಟ್ಟಿದ್ದಾರೆ. ಶತ್ರುಗಳ, ಎದುರಾಳಿಗಳ, ಹೊಣೆಗೇಡಿ ಮಾಧ್ಯಮಗಳ ವಂಚನೆಗೆ ಬಲಿಯಾಗುವುದರಿಂದ ಎಚ್ಚರಿಕೆ ವಹಿಸಬೇಕೆಂದು ಅವರು ಕರೆ ನೀಡಿದ್ದಾರೆ.  ನಿರ್ಣಯದಲ್ಲಿ ಸಹಿ ಹಾಕಿದ ನಂತರ ಬಹುಶಃ ಜಮಾತೇ ಇಸ್ಲಾಮಿಗೆ ಎಚ್ಚರವಾಯಿತೆಂದು ಕಾಣುತ್ತದೆ. ನಂತರ ಅವರು ಸಮಚಿತ್ತವನ್ನು ಪಡೆದುಕೊಂಡು ಪ್ರತ್ಯೇಕ ಪತ್ರಿಕಾ ಪ್ರಕಟನೆಯನ್ನು ನೀಡುತ್ತಾರೆ. ಕಾಶ್ಮೀರದಲ್ಲಿ 13,000 ಮಕ್ಕಳನ್ನು ಅಕ್ರಮವಾಗಿ ಬಂಧಿಸಿದ ವಿಚಾರ ಕಾಶ್ಮೀರದ ಜನಪ್ರಿಯ ನಾಯಕ ಸಯೀದ್ ಅಲಿ ಶಾ ಗೀಲಾನಿ ಅವರಿಗೆ ತಿಳಿಸಿರಬಹುದು.

ಸನ್ನಿವೇಶ ತಿಳಿಯಾಗಿಲ್ಲವೆಂದರಿತ ಮಹ್ಮೂದ್ ಮದನಿ, ರಾಷ್ಟ್ರೀಯ ಪೌರತ್ವ ನೋಂದಣಿ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡಿದೆ ಮತ್ತು ಅದನ್ನು ವಿರೋಧಿಸಬೇಕೆಂಬ ಹೇಳಿಕೆಯೊಂದಿಗೆ ಪುನಃ ರಂಗಕ್ಕಿಳಿಯುತ್ತಾರೆ. ಆದರೆ ಸಂಘಿಗಳು ಕೋಪಗೊಳ್ಳದಿರಲು ಮೌಲಾನಾ ಬಹಳಷ್ಟು ಸೂಕ್ಷ್ಮವಾಗಿ ಮಾತುಗಳನ್ನು ಬಸಿದ್ದರು. ಮುಸ್ಲಿಮರನ್ನು ಮಾತ್ರವೇ ಬಂಧನ ಕೇಂದ್ರಗಳಿಗೆ ಕಳಿಸುವುದು, ದೇಶದ ಹೆಸರಿಗೆ ಕೆಸರೆರಚಲು ತಯಾರಾದ ವೈರಿಗಳಿಗೆ ಹೊಡೆಯಲು ದಂಡವನ್ನು ಕೊಟ್ಟಂತೆ ಎಂದು ಹೇಳುತ್ತಾರೆ. ಇದು ಮಾನವರಿಗೆ ಮೂಲಭೂತ ಹಕ್ಕುಗಳನ್ನು ನೀಡುವುದು ರಾಷ್ಟ್ರದ ಉಳಿವಿಗಾಗಿ ಎಂಬ ವಿತಂಡವಾದವನ್ನು ಎತ್ತಿದ ಮನವಿಯ ಮುಂದುವರಿದ ಭಾಗವೆಂದು ಹೇಳಬಹುದು. ಇಲ್ಲಿ ಮನುಷ್ಯರು ಅನ್ಯಾಯವಾಗಿ ಜೈಲು ಸೇರುವುದರಲ್ಲಿ ಮೌಲಾನಾರಿಗೆ ಬೇಸರವಿಲ್ಲ, ರಾಷ್ಟ್ರದ ಪ್ರತಿಷ್ಠೆಗೆ ಕಳಂಕ ಬರುತ್ತದೆ ಎಂಬುದರಲ್ಲಷ್ಟೇ ಅವರಿಗಿರುವ ಆತಂಕ!

 

 

LEAVE A REPLY

Please enter your comment!
Please enter your name here