ಸೌದಿ ಅರೇಬಿಯಾದಲ್ಲಿ ಶೀಘ್ರದಲ್ಲೇ ಪ್ರಾಯೋಜಕತ್ವ ವ್ಯವಸ್ಥೆ ರದ್ದು | 10ಲಕ್ಷಕ್ಕೂ ಅಧಿಕ ವಲಸಿಗರಿಗೆ ಲಾಭ

Prasthutha|

ರಿಯಾಧ್ : ಮಹತ್ವದ ನಿರ್ಧಾರವೊಂದರಲ್ಲಿ, ಮುಂದಿನ ವರ್ಷದ ಮಧ್ಯಂತರದ ಬಳಿಕ ಪ್ರಾಯೋಜಕತ್ವ ವ್ಯವಸ್ಥೆ ರದ್ದು ಪಡಿಸಲು ಸೌದಿ ಅರೇಬಿಯಾ ನಿರ್ಧರಿಸಿದೆ. ಈ ನಿರ್ಧಾರದಿಂದ ಸುಮಾರು 10 ಲಕ್ಷಕ್ಕೂ ಅಧಿಕ ವಲಸಿಗರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಮುಂದಿನ ವಾರ ಈ ಕುರಿತು ಸೌದಿ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಅಧಿಕೃತ ಘೋಷಣೆ ಮಾಡಲಿದೆ. ವಲಸಿಗ ನೌಕರರು ಮತ್ತು ಅವರ ಮಾಲಿಕರ ನಡುವಿನ ಗುತ್ತಿಗೆ ಆಧಾರಿತ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.

- Advertisement -

ಪ್ರಾಯೋಜಕತ್ವ ವ್ಯವಸ್ಥೆ ಕಳೆದ 70 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಇದೀಗ ತರಲಿರುವ ಹೊಸ ನಿಯಮದ ಪ್ರಕಾರ ವಿದೇಶಿ ನೌಕರರು ಮತ್ತು ಮಾಲಕರ ನಡುವಿನ ಸಂಬಂಧವನ್ನು ಉದ್ಯೋಗ ಗುತ್ತಿಗೆ ಒಪ್ಪಂದದ ಮೂಲಕ ದೃಢ ಪಡಿಸಲಾಗುತ್ತದೆ. ‘ಕಫಾಲ’ ವ್ಯವಸ್ಥೆ ಎನ್ನಲಾಗುವ ಪ್ರಸ್ತುತ ವ್ಯವಸ್ಥೆಯಲ್ಲಿ, ನೌಕರರನ್ನು ತಮ್ಮ ಉದ್ಯೋಗದಾತರಿಗೆ ಒಪ್ಪಿಸುವುದಾಗಿದೆ ಅಥವಾ ನೌಕರರ ವೀಸಾ ಮತ್ತು ಕಾನೂನು ಸ್ಥಿತಿಗತಿಗೆ ಉದ್ಯೋಗದಾತರು ಪ್ರಾಯೋಜಕರಾಗಿರುತ್ತಾರೆ.

ಪ್ರಾಯೋಜಕತ್ವ ವ್ಯವಸ್ಥೆ ರದ್ದತಿಯಿಂದ ವಲಸಿಗ ನೌಕರರಿಗೆ ಎಕ್ಸಿಟ್ ಮತ್ತು ರಿ ಎಂಟ್ರಿ ವೀಸಾಗಳನ್ನು ಪಡೆಯುವುದಕ್ಕೆ ಮುಕ್ತ ಸ್ವಾತಂತ್ರ್ಯ ನೀಡಲಿದೆ. ವಿದೇಶಿ ವಲಸಿಗ ನೌಕರರ ಜೀವನ ಮಟ್ಟ ಸುಧಾರಿಸಲಿದೆ. ಪ್ರಾಯೋಜಕರ ಅನುಮತಿಯಿಲ್ಲದೆ ಹೊರಹೋಗುವ ಮತ್ತು ಉದ್ಯೋಗ ಪಡೆಯುವ ಅವಕಾಶವಿದೆ.

- Advertisement -