ಸಿಎಎ ವಿರೋಧಿ ಹೋರಾಟಗಾರ ಶರ್ಜಿಲ್ ಇಮಾಮ್ ದೆಹಲಿ ಪೊಲೀಸರ ವಶಕ್ಕೆ
Prasthutha: August 26, 2020

ನವದೆಹಲಿ : ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ದೆಹಲಿ ಗಲಭೆಗೆ ಸಂಬಂಧಿಸಿ ಪೊಲೀಸರು ಶರ್ಜಿಲ್ ಇಮಾಮ್ ಅವರನ್ನು ಬಂಧಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳ ತಡೆ(ಯುಎಪಿಎ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು
ರಸ್ತೆ ತಡೆ ಪ್ರತಿಭಟನೆಯೊಂದರಲ್ಲಿ ಮಾಡಿದ್ದ ಭಾಷಣಕ್ಕಾಗಿ ಇಮಾಮ್ ದೇಶದ್ರೋಹ ಕಾನೂನಿನಡಿ ಪ್ರಕರಣ ದಾಖಲಾಗಿತ್ತು. ಜ.28ರಂದೇ ಅವರು ಬಿಹಾರದ ಜೆನಾಬಾದ್ ನಲ್ಲಿ ಬಂಧಿತರಾಗಿದ್ದರು. ಜನವರಿಯಲ್ಲೇ ದೆಹಲಿಯಿಂದ ಗುವಾಹತಿಗೆ ಅವರನ್ನು ಕರೆ ತರಲಾಗಿತ್ತು. ಜು. 22ರಂದು ಇಮಾಮ್ ಅವರಿಗೆ ಕೋವಿಡ್ – 19 ಪಾಸಿಟಿವ್ ಕಂಡು ಬಂದಿತ್ತು. ಈಗ ಅವರನ್ನು ದೆಹಲಿ ಪೊಲೀಸರು ಮತ್ತೆ ತಮ್ಮ ವಶಕ್ಕೆ ಪಡೆದಿದ್ದಾರೆ.
ಇಮಾಮ್ ಜೆಎನ್ ಯುನ ಪಿಎಚ್ ಡಿ ವಿದ್ಯಾರ್ಥಿ ಮತ್ತು ಐಐಟಿ ಹಳೆ ವಿದ್ಯಾರ್ಥಿಯಾಗಿದ್ದಾರೆ. ಶಾಹೀನ್ ಬಾಗ್ ನಲ್ಲಿ ನಡೆದಿದ್ದ ಸಿಎಎ ವಿರೋಧಿ ಹೋರಾಟದಲ್ಲಿ ಇಮಾಮ್ ಸಕ್ರಿಯವಾಗಿ ಭಾಗವಹಿಸಿದ್ದರು.
ಫೋಟೊ ಕೃಪೆ : The Wire
