ಸಿಎಎ – ಎನ್ ಆರ್ ಸಿ ಜಾರಿ ವಿರೋಧಿಸಿ ಅಸ್ಸಾಂನಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆ

Prasthutha|

ಜೊರ್ಹಾತ್ : ಸಿಎಎ – ಎನ್ ಆರ್ ಸಿ ಶೀಘ್ರದಲ್ಲೇ ಜಾರಿಯಾಗುತ್ತದೆ ಎಂಬ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿಕೆ ಖಂಡಿಸಿ, ಅಸ್ಸಾಂನಲ್ಲಿ ಮತ್ತೊಮ್ಮೆ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ. ಜೊರ್ಹಾತ್ ಜಿಲ್ಲೆಯಲ್ಲಿ ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಸಂಘ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಪ್ರತಿಕೃತಿ ದಹಿಸಿ, ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದರು.

ಜೊರ್ಹಾತ್ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಂಘಟನೆಯ ಸದ್ಯಸ್ಯರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ, ಆರೆಸ್ಸೆಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವರು ಘೋಷಣೆಗಳನ್ನು ಕೂಗಿದ್ದಾರೆ.

- Advertisement -

ಅಸ್ಸಾಮಿಗಳ ಗುರುತು ನಾಶಕ್ಕೆ ನಾವು ಬಿಡುವುದಿಲ್ಲ ಎಂದು ವಿದ್ಯಾರ್ಥಿ ಸಂಘದ ಅಧ್ಯಕ್ಷ ಅರ್ಜುನ್ ಮೋನಿ ಭುಯಾನ್ ಹೇಳಿದ್ದಾರೆ. ಅಸ್ಸಾಮಿಗರು ಯೋಧರ ಕುಲದವರು. ಅಗತ್ಯ ಬಿದ್ದರೆ, ನಾವು ರಕ್ತ ಹರಿಸಲೂ ಸಿದ್ಧ ಎಂದು ಅವರು ತಿಳಿಸಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿ ಪಾರ್ಥ ಪ್ರತಿಮ್ ಬೋರಾ ಕೂಡ ಇದಕ್ಕೆ ತಮ್ಮ ಧ್ವನಿಗೂಡಿಸಿದ್ದಾರೆ.

- Advertisement -