ಸಿಎಎ-ಎನ್‌ಆರ್‌ಸಿಗೆ ವಿರೋಧ: ಬಿಜೆಪಿ ಉಪಾಧ್ಯಕ್ಷ ಸ್ಥಾನದಿಂದ ನೇತಾಜಿ ಮೊಮ್ಮಗನ ಅಮಾನತು

Prasthutha: July 10, 2020

ಪಶ್ಚಿಮ ಬಂಗಾಳ ಬಿಜೆಪಿಯ ಉಪಾಧ್ಯಕ್ಷರಲ್ಲಿ ಒಬ್ಬರಾಗಿದ್ದ ಚಂದ್ರ ಕುಮಾರ್ ಬೋಸ್ ಅವರನ್ನು ಬಿಜೆಪಿ ಕೈಬಿಟ್ಟಿದೆ. ಇವರು ಸ್ವಾತಂತ್ರ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ ಮೊಮ್ಮಗನಾಗಿದ್ದು, ಸಿಎಎ-ಎನ್‌ಆರ್‌ಸಿ ವಿರುದ್ಧದ ನಿಲುವಿನಿಂದ ಬಿಜೆಪಿ ಉಪಾಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲಾಗಿದೆ ಎಂದು ಅನುಮಾನಿಸಲಾಗಿದೆ.

‘‘ಅವರು ಮುಸ್ಲಿಮರನ್ನು ಈ ರೀತಿ ಹೇಗೆ ಬೇರ್ಪಡಿಸಬಹುದು? ನೇತಾಜಿಯ ಸಿದ್ಧಾಂತವು ಎಂದಿಗೂ ಇದನ್ನು ಹೇಳಿರಲಿಲ್ಲ. ಅವರು ಎಲ್ಲಾ ಧರ್ಮಗಳ ಭಾಗವಹಿಸಿಕೆಯೊಂದಿಗೆ ಆಝಾದ್ ಹಿಂದ್ ಫೌಜ್ ಅನ್ನು ರಚಿಸಿದ್ದರು. ಆದ್ದರಿಂದ ನಾನು ಸಿಎಎ-ಎನ್‌ಆರ್‌ಸಿಯನ್ನು ವಿರೋಧಿಸಿದೆ. ಆದರೆ ನನ್ನ ಸಲಹೆಗಳು ಕೇಂದ್ರ ನಾಯಕರಿಗೆ ಸರಿ ಎನಿಸಲಿಲ್ಲ ಎಂದು ತೋರುತ್ತದೆ’’ ಎಂದು ಚಂದ್ರ ಕುಮಾರ್ ಬೋಸ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದರು.

‘‘ನಾವು ಮುಸ್ಲಿಮರನ್ನು ಏಕೆ ದೂರವಿಡುತ್ತಿದ್ದೇವೆ? ಮುಸ್ಲಿಮರಿಗೆ ಶಿಕ್ಷಣವನ್ನು ನೀಡಬೇಕು. ಮದರಸಾ ಶಿಕ್ಷಣಕ್ಕೆ ಮೀರಿದ ಜ್ಞಾನವನ್ನು ಅವರಿಗೆ ಒದಗಿಸಬೇಕು’’ ಎಂದಿದ್ದ ಬೋಸ್‌ರವರು ಮುಸ್ಲಿಮರನ್ನು ಪಕ್ಷಕ್ಕೆ ಹೆಚ್ಚು ಸೇರ್ಪಡೆಗೊಳಿಸಬೇಕೆಂದು ಮನವಿ ಮಾಡಿದ್ದರು. ಅಮಾನತುಗೊಳಿಸಿದ ಹೊರತಾಗಿಯೂ, ‘‘ಮಮತಾ ಬ್ಯಾನರ್ಜಿಯ ಮುಸ್ಲಿಮ್ ಶಾಂತಿಯ ರಾಜಕೀಯದ ವಕ್ತಾರರಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಬಿಜೆಪಿಯ ಪ್ರಮುಖ ನಾಯಕರು, ಅವರ ಬಗ್ಗೆ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ’’ ಎಂದು ಬೋಸ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!