ಸಲಿಂಗರತಿ ಹಕ್ಕೇ ಅಥವಾ ವಿಕೃತಿಯೇ?

0
418

-ಶಾಜಹಾನ್ ಒರುಮನಯೂರ್

ಕೊನೆಗೆ ನಮ್ಮ ಆದೇಶವು ಬಂದು ಬಿಟ್ಟಾಗ ನಾವು ಅದನ್ನು (ಆ ನಾಡನ್ನು) ಬುಡಮೇಲುಗೊಳಿಸಿ ಬಿಟ್ಟೆವು ಮತ್ತು ಅದರ ಮೇಲೆ ಬೆಂದ ಕಲ್ಲಿನ ಹರಳುಗಳ ಮಳೆಯನ್ನು ನಿರಂತರ ಸುರಿಸಿದೆವು. ಸೊದೋ, ಗೊಮೋರೋ ಎಂಬೀ ನಗರಗಳು ಅಗ್ನಿ ಮತ್ತು ಹರಳು ಕಲ್ಲುಗಳಿಂದ ನಾಶಗೊಂಡವು. (ಬೈಬಲ್-ಉತ್ಪತ್ತಿ – 18:20)

ಕಾಮನಬಿಲ್ಲು ಮತ್ತು ಕರಿಮೋಡಗಳು: ಅತ್ಯಾಧುನಿಕ ಕಾಲವು ಅಭೂತಪೂರ್ವ ವಿಕಾಸವನ್ನು ಹೊಂದಿದ ವೈವಿಧ್ಯತೆಗಳಿಂದ ಕೂಡಿದೆ. ಇತಿಹಾಸ-ವಿಜ್ಞಾನ-ರಾಜಕೀಯ ಆಖ್ಯಾನಗಳು, ಆವಿಷ್ಕಾರಗಳು ಮಾತ್ರವಲ್ಲ ಪರಂಪರೆಯೊಂದು ನಂಬಿದ ಮೌಲ್ಯ ಪ್ರಜ್ಞೆಗಳಲ್ಲೂ ನೈತಿಕ ವ್ಯವಸ್ಥೆಗಳವರೆಗೆ ಪುನರಾಖ್ಯಾನ ಮತ್ತು ಆವಿಷ್ಕಾರಗಳ ಬಿರುಕುಗಳು ದಶ್ಯವಾಗ ತೊಡಗಿದೆ. ಈ ಬಿರುಕುಗಳು ಪರಂಪರಾಗತ ಧರ್ಮಗಳನ್ನು ಮತ್ತು ಅವುಗಳ ಆಧುನಿಕ ಅಧಿಕಾರಗಳಿಗೆ ಸವಾಲು ಹಾಕುತ್ತಿದೆ ಮತ್ತು ಗೇಲಿ ಮಾಡುತ್ತಿದೆ. ಅವುಗಳಲ್ಲೊಂದು ಎಲ್‌ಜಿಬಿಟಿ ಎಂಬ ವಿಷಯ. ಈ ಶತಮಾನದ ಆರಂಭದಿಂದ ಕ್ರಾಂತಿಕಾರಕ ವ್ಯಾಖ್ಯಾನಗಳಿಂದ ಕಾನೂನಾತ್ಮಕ ರಕ್ಷಣೆ ಸಿಗುವ ವರೆಗೆ ಚರ್ಚಾ ವಿಷಯವಾಗುತ್ತಿದೆ.

ಬದಲಾಗುತ್ತಿರುವ ಸಂಜ್ಞೆಗಳು
ಎಲ್‌ಜಿಬಿಟಿ ಹಕ್ಕುಗಳೆಂದು ವ್ಯಾಖ್ಯಾನಿಸಲ್ಪಟ್ಟು ಹೆಚ್ಚೂ ಕಡಿಮೆ ಕಾನೂನಿನ ಮನ್ನಣೆಯನ್ನು ಪಡೆದ ಈ ಪ್ರಯೋಗದ (Lesbian Gay By Sexual Transgender) ಅರ್ಥ ಕಲ್ಪನೆಗಳನ್ನು ಪರಿಶೋಧಿಸಬೇಕಾಗಿದೆ. ಗಂಡು-ಹೆಣ್ಣು, ಸಲಿಂಗರತಿಗಳು, ದ್ವಿಲಿಂಗಿಗಳು ಅಥವಾ ನೈಸರ್ಗಿಕ ಅಥವಾ ಅಲ್ಲದ ಲೈಂಗಿಕಆಸಕ್ತಿವುಳ್ಳವರು; ಲಿಂಗ ಬದಲಾವಣೆ ನಡೆಸಿದವರು. ಇವೆಲ್ಲವೂ ಸಲಿಂಗರತಿಯಲ್ಲಿ ಒಳಪಡುವಂಥದ್ದು ಎಂದು ಅರ್ಥೈಸಿಕೊಳ್ಳಬಹುದು.

70ರ ದಶಕಗಳಲ್ಲಿ ಅಮೆರಿಕಾದ ಗಣರಾಜ್ಯಗಳಲ್ಲಿ ಸಲಿಂಗಕಾಮಿಗಳು ಸಂಘಟನೆ ಮತ್ತು ಹೋರಾಟವನ್ನು ಆರಂಭಿಸಿದ್ದರು. 2001ರಲ್ಲಿ ನೆದರ್‌ಲ್ಯಾಂಡ್ ಸಲಿಂಗಕಾಮಿಗಳ ಮದುವೆಗೆ ಕಾನೂನನ್ನು ಊರ್ಜಿತಗೊಳಿಸಿತು. ಇಂದು ಅಮೆರಿಕಾ, ಬ್ರಿಟನ್ ಮುಂತಾದ 25ಕ್ಕೂ ಮಿಕ್ಕಿ ದೇಶಗಳು ಸಲಿಂಗಕಾಮಿಗಳಿಗೆ ವಿವಾಹದ ಅನುಮತಿಯನ್ನು ಕಾನೂನಾತ್ಮಕವಾಗಿ ನೀಡಿದೆ. ನಮ್ಮ ದೇಶವು ಕಾನೂನಿನಲ್ಲಿರುವ ಅನೈಸರ್ಗಿಕ ಎಂಬ ಪದಪ್ರಯೋಗವನ್ನು ತಿದ್ದುಪಡಿ ತಂದು ಈ ವರ್ಷ ಸೆಪ್ಟೆಂಬರ್ 6ಕ್ಕೆ ಸಲಿಂಗಕಾಮಿಗಳ ವಿವಾಹಕ್ಕೆ ಕಾನೂನು ರಕ್ಷೆಯನ್ನು ನೀಡಿತು.

ಭಾರತದ ಪುರಾಣಗಳಾದ ರಾಮಾಯಣ, ಮಹಾಭಾರತ, ಪ್ರಾಚೀನ ಭಾರತೀಯ ಗೋಡೆ ಬರಹ ಚಿತ್ರಗಳು, ಶಿಲ್ಪಗಳು, ಕೌಟಿಲ್ಯನ ಅರ್ಥಶಾಸ್ತ್ರ, ಮನುಸ್ಮೃತಿ ಮೊದಲಾದ ಕಾನೂನು ಸಂಹಿತೆಗಳು, ಇವೆಲ್ಲವುಗಳಲ್ಲಿ ಬೈಬಲ್ ಹಳೆಯ ಒಡಂಬಡಿಕೆಯಲ್ಲೂ, ಕುರ್‌ಆನಿನಲ್ಲೂ ಒಂದೇ ರೀತಿಯಲ್ಲಿ ಪರಾಮರ್ಶಿಸಿದ ಲೂತ್ (ಲೋತ್) ಜನಾಂಗದ ಕುರಿತಾದ ವಿವರಣೆಗಳಲ್ಲೂ ಸಲಿಂಗರತಿಯ ಕುರಿತಾದ ಪರಾಮರ್ಶೆಯಿದೆ. ಒಂದು ಜನಾಂಗದ ಸರ್ವನಾಶಕ್ಕೆ ಹೇತುವಾದ ಈ ಕ್ರಮವನ್ನು ಅಕ್ರಮ ಮತ್ತು ಪಾಪವೆಂಬಂತೆ ಸೆಮಿಟಿಕ್ ಪವಿತ್ರ ವೇದಗ್ರಂಥಗಳು ಕಾಣುತ್ತದೆ. ನೈಸರ್ಗಿಕವೇ ಅನೈಸರ್ಗಿಕವೇ?

ಸಲಿಂಗಕಾಮವನ್ನು ಸಾಮಾನ್ಯವಾಗಿ ಪ್ರಕತಿದತ್ತವಾದ ಲೈಂಗಿಕ ಪ್ರಕ್ರಿಯೆ ಎಂದು ಪರಿಗಣಿಸುವ ಧೋರಣೆ ಬಲಗೊಳ್ಳುತ್ತಿದೆ. ಮನುಷ್ಯನ ನೈಸರ್ಗಿಕ ಸ್ವಭಾವವನ್ನು ಸಾಮಾಜಿಕ ಸುರಕ್ಷೆಯ ದಢತೆಯನ್ನೂ, ದೈಹಿಕ ಸ್ಥಿರತೆಯನ್ನೂ ಪರಿಗಣಿಸಿ ಮೇಲೆ ಚರ್ಚಿಸಲ್ಪಟ್ಟ ಸಂಜ್ಞೆಗಳನ್ನು ಪುನರಾವಲೋಕನ ಮಾಡಬೇಕಾಗುತ್ತದೆ. ವ್ಯಕ್ತಿಯ ಸಮಾಜದ ಲೈಂಗಿಕಾಸಕ್ತಿ ಸ್ವಚ್ಛ ಲೈಂಗಿಕತೆಯ ಪ್ರಕತಿದತ್ತವಾದ/ದೈಹಿಕ ಅನುಕೂಲ ಪ್ರತಿಕೂಲಗಳು ಇವೆಲ್ಲವನ್ನೂ ಇಂತಹ ಸಂಶೋಧನೆಗೆ ವಿಷಯವನ್ನಾಗಿಸ ಬೇಕಾಗುತ್ತದೆ.

ಮಾನವ ಜನಾಂಗದ ನಿರಂತರತೆ ವಂಶವರ್ಧನೆಯ ಗುರಿಯಾಗಿಟ್ಟುಕೊಂಡು, ದೈಹಿಕ-ಮಾನಸಿಕ ಅನುಕೂಲತೆಗೆ ಪ್ರಕತಿ-ಸಷ್ಟಿಕರ್ತ ವ್ಯವಸ್ಥಿತಗೊಳಿಸಿದ್ದಾನೆ. ಪ್ರಾಣಿ ವರ್ಗ ಎಂಬ ನೆಲೆಯಲ್ಲಿ ಪ್ರಣಯ, ರತಿ, ಗರ್ಭಧಾರಣೆ ಮನುಷ್ಯನ ಅಸ್ತಿತ್ವದ ನಿರಂತರತೆಗೆ ಅದು ಖಾತರಿಯನ್ನು ನೀಡುತ್ತದೆ. ಲೈಂಗಿಕ ಸ್ವಭಾವಗಳನ್ನು ಸೂಕ್ಷ್ಮವಾಗಿ, ಸ್ಥೂಲವಾಗಿ ನಿಯಂತ್ರಿಸಿ ವ್ಯವಸ್ಥಿತಗೊಳಿಸಿದ ಉದ್ದೇಶವನ್ನು ಗ್ರಹಿಸಲು ಇಂತಹ ಒಂದು ಸಂಶೋಧನೆ ಸಹಾಯಕವಾಗಬಹುದು.

ವಿವಾಹ ಎಂಬ ವ್ಯವಸ್ಥೆಯ ಸಾಮಾಜಿಕ ಪರತೆ, ಗುದಸಂಭೋಗದಂತಹ ದೈಹಿಕವಾಗಿ ಪ್ರತಿಕೂಲ, ಹಿಂಸಾತ್ಮಕ ಮತ್ತು ಅಪಮಾನಕರವಾದ ಲೈಂಗಿಕ ಅಭ್ಯಾಸಗಳನ್ನು ನಿಷೇಧಿಸುವವರೆಗೆ ಈ ಪ್ರಕ್ರಿಯೆಯನ್ನು ವೀಕ್ಷಿಸಬೇಕಾಗುತ್ತದೆ. ಎಲ್‌ಜಿಬಿಟಿ ಎಂಬ ಸಂಕ್ಷಿಪ್ತ ಬರಹವು ವ್ಯಾಪಿಸುವಾಗ ಅಂತಹ ಲೈಂಗಿಕ ಅಭ್ಯಾಸಗಳ ಜೀವಶಾಸ್ತ್ರ ಮತ್ತು ಮನಶಾಸ್ತ್ರ ಪರವಾದ ಕಾರಣಗಳನ್ನು ವೈಯಕ್ತಿಕ ಮತ್ತು ಸಾಮಾಜಿಕವಾದ ವೀಕ್ಷಣೆಯಿಂದ ಹಿಡಿದು ಅತ್ಯಂತ ವ್ಯವಸ್ಥಿತವಾದ ವಾಣಿಜ್ಯೀಕರಣಗೊಂಡ ಅಶ್ಲೀಲ ಸಾಹಿತ್ಯ ಉದ್ಯಮದವೆರೆಗೆ ಈ ವಿಚಾರದಲ್ಲಿ ತಪ್ಪಿತಸ್ಥನನ್ನಾಗಿಸಬೇಕಾಗುತ್ತದೆ. ಅಂತಹ ಪರಿಶೋಧನೆಗೂ ಮುನ್ನ ಎಲ್‌ಜಿಬಿಟಿ ಯನ್ನು ವ್ಯಾಖ್ಯಾನಿಸಿ ಅದರ ಅನಾರೋಗ್ಯಕರವಾದ ಪ್ರಕೃತಿ/ ಅವೈಜ್ಞ್ಞಾನಿಕತೆಯ ಬಗ್ಗೆ ಜಾಗತಿಯನ್ನುಂಟು ಮಾಡಬೇಕಾಗುತ್ತದೆ.

ಜೀವಶಾಸ್ತ್ರದ ನಿಲುವು:
ಕಣ್ಣಿದ್ದವರಿಗೆ ಕಾಣಲು ಸಾಧ್ಯವಾಗುವ ರೀತಿಯಲ್ಲಿ ಸುಸ್ಪಷ್ಟವಾದ ಪರಂಪರಾಗತ ಲೈಂಗಿಕ ಸ್ವಾಭಾವಕ್ಕೆ ಅನುಗುಣವಾದ ದೈಹಿಕ ಪ್ರಕತಿ. ಹೆಣ್ಣಿನ ದೈಹಿಕ ಮತ್ತು ಮಾನಸಿಕವಾದ ಸುಕೋಮಲ ಪ್ರಕತಿ. ಲೈಂಗಿಕ ಮತ್ತಿತರ ವಿಧೇಯ ಪ್ರಕತಿಗಳಾದ ಕರುಣೆ, ವಾತ್ಸಲ್ಯ, ದಯೆ ಮೊದಲಾದ ಮನೋಭಾವಗಳಿಂದ ಹಿಡಿದು ದೈಹಿಕವಾದ ವಿಶೇಷತೆಗಳ ವರೆಗೆ ಇವೆಲ್ಲವೂ ಸಾಕ್ಷಗಳಾಗಿವೆ.

ಒಂದು ಲೈಂಗಿಕ ವಿಕತಿ ಎಂಬ ನೆಲೆಯಲ್ಲಿ ಲೈಂಗಿಕ ಹಸಿವಿನಿಂದ/ಪರ್ಯಾಯ ಲೈಂಗಿಕತೆ ಎಂಬಂತೆ ಸಲಿಂಗಕಾಮ ವಿಕಸನಗೊಳ್ಳುತ್ತದೆ ಎಂಬುದನ್ನು ಈ ವಿಚಾರದಲ್ಲಿ ತಜ್ಞರೆನಿಸಿಕೊಂಡವರು ಸೂಚಿಸುತ್ತಾರೆ. ಫ್ರಾಯ್ಡಾನಿಂದ ಹಿಡಿದು ನಿಷೇ ವರೆಗೆ ಇರುವ ಮಂದಿಯ ನಿರೀಕ್ಷಣೆಗಳು ಇದನ್ನು ಗಟ್ಟಿಗೊಳಿಸುತ್ತದೆ. ಅಂತೆಯೇ ಪ್ರಕೃತಿ ವಿರುದ್ಧವಾದ ಮಾನವನ ಸಹಚಾರದ ಒತ್ತಡದಲ್ಲಿ ಅಸಹಜ ಮತ್ತು ಅನಾರೋಗ್ಯಕರವಾದ ವಾತಾವರಣದಲ್ಲಿ ಮೊಳಕೆಯೊಡೆಯುವ ವಿಷಕಾರಿ ಅಣಬೆಗಳಂತಿವೆ ಈ ರೀತಿಯ ಸ್ವಭಾವ ಮತ್ತು ಅಭ್ಯಾಸ ಗುಣಗಳು. ಆದರೆ ವಿರೋಧಾಭಾಸದ ಸಂಗತಿಯೆಂದರೆ ಈ ಮಾನಸಿಕ, ದೈಹಿಕ ವಿಭ್ರಾಂತಿಗಳನ್ನು ಮನಶಾಸ್ತ್ರ ಮತ್ತು ದೈಹಿಕ ಚಿಕಿತ್ಸೆಗಳನ್ನು ನಡೆಸಿ ಶಮನಿಸುವುದಕ್ಕೆ ಬದಲಾಗಿ ಈ ರೋಗಾವಸ್ಥೆಯನ್ನೇ ಸಂಭ್ರಮಿಸಿ ಪುಳಕಗೊಳ್ಳುವ ದುರಂತವನ್ನು ನಾವು ಕಾಣುತ್ತಿದ್ದೇವೆ

 ಎಲ್‌ಜಿಬಿಟಿಯನ್ನು ಬೇರ್ಪಡಿಸುವಾಗ:
Transgender ಎಲ್‌ಜಿಬಿಟಿ ಎಂಬ ಸಂಜ್ಞೆಯನ್ನು ಒಂದೇ ವೇಳೆ ವೀಕ್ಷಿಸುವಾಗ ಉದ್ಭವಿಸುವ ಸಮಸ್ಯೆಗಳ ಬಗ್ಗೆ ಚಿಂತಿಸ ಬೇಕಾಗುತ್ತದೆ. ಎಲ್‌ಜಿಬಿಟಿ ಎಂಬ ಗುಂಪು ವಿಭಿನ್ನ ಲೈಂಗಿಕ ರೂಢಿಗಳನ್ನು ಪ್ರತಿನಿಧಿಸುತ್ತಿರುವಾಗ ಎಂಬುವುದು ವ್ಯತಿರಿಕ್ತವಾದ ಲೈಂಗಿಕ ಆಸ್ಮಿತೆಯನ್ನು ಸೂಚಿಸುತ್ತದೆ.

ಪ್ರಕೃತಿಯಲ್ಲಿರುವ ಅಥವಾ ನಂತರದ ದಿನಗಳಲ್ಲಿ ವಿಕಾಸ ಹೊಂದುವ ಅನ್ಯವಾದ ಲೈಂಗಿಕ ಅಸ್ಮಿತೆ ಅಥವಾ ಸ್ವಭಾವ. ಇದರಲ್ಲಿ ದೈಹಿಕ ಮತ್ತು ಮಾನಸಿಕವಾದ ಭಾವ-ಅಭ್ಯಾಸವಾದ ಅನುಕೂಲ ಪ್ರತಿಕೂಲಗಳನ್ನು ದರ್ಶಿಸಬಹುದಾಗಿದೆ. ಈ ರೀತಿ ಗಂಡಿನ ದೇಹದಲ್ಲಿ ಹೆಣ್ತನದ ಹಾವ-ಭಾವಗಳು ಮತ್ತು ಮನಸ್ಸನ್ನು ಹೊಂದಿದವರು, ಹೆಣ್ಣಿನ ದೇಹಗಾತ್ರ ಮತ್ತು ಪುರುಷ ಸಹಜವಾದ ವಿಶೇಷತೆಯನ್ನು ಹೇರಿಕೊಳ್ಳುವವರು ಮತ್ತು ಪ್ರದರ್ಶಿಸುವವರು.

ವಂಶವಾಹಿನಿಯಾದ ವಿಶೇಷತೆ ಎಂಬಂತೆ ವಿಶೇಷ ಗಮನ ಮತ್ತು ಅಧ್ಯಯನದ ಅಗತ್ಯ ಈ ವಿಚಾರದಲ್ಲಿರಬೇಕಾಗಿದೆ. ನಪುಂಸಕರು, ಶಿಖಂಡಿಗಳು, ದ್ವಿಲಿಂಗಿಗಳು, ಖೊಜಾಗಳು, ಹಿಜಡಾಗಳು ಎಂಬಿತ್ಯಾದಿ ಅರಿಯಲ್ಪಡುವ ಈ ಗುಂಪುಗಳ ಅಸ್ತಿತ್ವವನ್ನು ಸಮಾಜದಲ್ಲಿ ದಾಖಲಿಸುವ, ಪರಿಗಣಿಸಲ್ಪಡುವ ಮತ್ತು ಅವರು ಎದುರಿಸುವ ಮಾನಸಿಕ, ದೈಹಿಕ, ಸಾಮಾಜಿಕ ಸಮಸ್ಯೆಗಳನ್ನು ತಿಳಿದುಕೊಳ್ಳುವ, ಅಧ್ಯಯನ ನಡೆಸುವ ಮತ್ತು ಪರಿಹರಿಸುವ ವಿಚಾರದಲ್ಲಿ ಸಮಾಜವು ಗಮನಿಸಲೇ ಇಲ್ಲ ಅನ್ನೋದು ವಾಸ್ತವ ಸಂಗತಿ.

***

 

LEAVE A REPLY

Please enter your comment!
Please enter your name here