ಸರಕಾರಿ ಪೋರ್ಟಲ್ ನಲ್ಲಿ ಕೇವಲ 40 ದಿನಗಳಲ್ಲಿ 69 ಲಕ್ಷ ನಿರುದ್ಯೋಗಿಗಳ ನೋಂದಣಿ | ಜಾಬ್ ಸಿಕ್ಕಿದ್ದು ಮಾತ್ರ ಬೆರಳೆಣಿಕೆಯದ್ದು

Prasthutha|

ನವದೆಹಲಿ : ಜು.11ರಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿದ ಕೇಂದ್ರ ಸರಕಾರದ ಉದ್ಯೋಗ ಪೋರ್ಟಲ್ ನಲ್ಲಿ ಕೇವಲ 40 ದಿನಗಳಲ್ಲಿ ಸುಮಾರು 69 ಲಕ್ಷ ಮಂದಿ ನೋಂದಾವಣೆ ಮಾಡಿಕೊಂಡಿದ್ದಾರೆ. ಆದರೆ, ಉದ್ಯೋಗ ಸಿಕ್ಕಿದ್ದು ಮಾತ್ರ ಕೆಲವೇ ಕೆಲವು ಮಂದಿಗೆ ಎಂದು ವರದಿಯೊಂದು ತಿಳಿಸಿದೆ.

ಕೊರೋನ ಸೋಂಕಿನ ಸಂಕಷ್ಟದ ದಿನಗಳಲ್ಲಿ ದೇಶದಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಈಗ ಪರಿಸ್ಥಿತಿ ನಿಧಾನಕ್ಕೆ ಸಹಜಸ್ಥಿತಿಗೆ ಮರಳುತ್ತಿದ್ದರೂ, ನಿರುದ್ಯೋಗದ ಸಮಸ್ಯೆ ಮಾತ್ರ ಮುಗಿಲುಮುಟ್ಟುತ್ತಿದೆ.ಸರಕಾರದ ಉದ್ಯೋಗ ಪೋರ್ಟಲ್ ಆರಂಭವಾದ ಒಂದೇ ವಾರದಲ್ಲಿ ಜು.14ರಿಂದ ಜು.21ರ ನಡುವೆ 7 ಲಕ್ಷ ನಿರುದ್ಯೋಗಿಗಳು ನೋಂದಣಿ ಮಾಡಿಕೊಂಡಿದ್ದರು. ಆದರೆ, ಅವರಲ್ಲಿ ಕೇವಲ 691 ಮಂದಿಗೆ ಮಾತ್ರ ಉದ್ಯೋಗ ಲಭಿಸಿದೆ.

- Advertisement -

ಕೇಂದ್ರ ನೈಪುಣ್ಯತೆ ಅಭಿವೃದ್ಧಿ ಮತ್ತು ಉದ್ಯಮೀಕರಣ ಸಚಿವಾಲಯದ ಆತ್ಮನಿರ್ಭರ ನೈಪುಣ್ಯಭರಿತ ನೌಕರರು ಉದ್ಯೋಗದಾತರ ಪೋರ್ಟಲ್ ‘ಅಸೀಮ್’ ನ ಅಂಕಿ ಅಂಶಗಳ ಪ್ರಕಾರ, ಕೇವಲ ಶೇ.2 ಮಂದಿಗೆ ಮಾತ್ರ ಉದ್ಯೋಗ ಲಭಿಸಿದೆ. ಅಂದರೆ, 3.7 ಲಕ್ಷ ಉದ್ಯೋಗಾಕಾಂಕ್ಷಿಗಳಲ್ಲಿ ಒಬ್ಬರಿಗೆ ಮಾತ್ರ ಉದ್ಯೋಗ ಸಿಕ್ಕಿದೆ. ಈ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡ 69 ಲಕ್ಷ ಮಂದಿಯಲ್ಲಿಉದ್ಯೋಗ ಸಿಕ್ಕಿದ್ದು ಕೇವಲ 7,700 ಮಂದಿಗೆ ಮಾತ್ರ. 514 ಕಂಪೆನಿಗಳು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿವೆ ಮತ್ತು ಅವುಗಳಲ್ಲಿ 443 ಕಂಪೆನಿಗಳು ಸುಮಾರು 2.92 ಲಕ್ಷ ಉದ್ಯೋಗ ಪೋಸ್ಟ್ ಮಾಡಿವೆ.

- Advertisement -