ಸರಕಾರಿ ಅನುದಾನಿತ ಮದ್ರಸಾ ಮುಚ್ಚಿ, ಹಿಂದುತ್ವ ಸಾಬೀತು ಪಡಿಸಿ : ಉದ್ಧವ್ ಠಾಕ್ರೆಗೆ ಬಿಜೆಪಿ ಶಾಸಕನ ಸವಾಲು

Prasthutha|

ಮುಂಬೈ : ರಾಜ್ಯದ ಎಲ್ಲಾ ಸರಕಾರಿ ಅನುದಾನಿತ ಮದ್ರಸಾಗಳನ್ನು ಮುಚ್ಚುವ ಧೈರ್ಯ ತೋರಿ ಮತ್ತು ನಿಮ್ಮ ಹಿಂದುತ್ವ ಸಾಬೀತು ಮಾಡಿ ಎಂದು ಬಿಜೆಪಿ ಶಾಸಕ ಅತುಲ್ ಭಟ್ಕಲ್ ಕರ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಸವಾಲು ಮಾಡಿದ್ದಾರೆ.

ತಮ್ಮ ಹಿಂದುತ್ವದ ಬದ್ಧತೆಗೆ ಯಾರೊಬ್ಬರಿಂದಲೂ ದೃಢೀಕರಣ ಪತ್ರದ ಅಗತ್ಯವಿಲ್ಲ ಎನ್ನುವ ಮಹಾರಾಷ್ಟ್ರ ಮುಖ್ಯಮಂತ್ರಿಯವರು, ಸರಕಾರಿ ಅನುದಾನದಲ್ಲಿ ನಡೆಸಲ್ಪಡುತ್ತಿರುವ ಧಾರ್ಮಿಕ ಮೂಲಭೂತವಾದವನ್ನು ಬೋಧಿಸುವ ಮದ್ರಸಾಗಳ ಮುಚ್ಚುವ ಧೈರ್ಯ ತೋರಿಸಲಿ ಎಂದು ಅತುಲ್ ಹೇಳಿದ್ದಾರೆ. ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ಅವರು ಈ ಸವಾಲು ಹಾಕಿದ್ದಾರೆ.

- Advertisement -

ಮದ್ರಸಾಗಳಿಗೆ ಮತ್ತು ಧಾರ್ಮಿಕ ಶಿಕ್ಷಣ ಬೋಧಕರಿಗೆ ನೀಡುವ ಹಣಕಾಸು ಬೆಂಬಲವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ವಿದ್ಯಾರ್ಥಿ ವೇತನದ ರೂಪದಲ್ಲಿ ವಿದ್ಯಾರ್ಥಿಗಳಿಗೆ ನೇರವಾಗಿ ತಲುಪಿಸುವಂತೆ ಅವರು ತಿಳಿಸಿದ್ದಾರೆ.  

- Advertisement -