“ಸಂಘಿಗಳು ಕೋತಿಗಳಂತೆ” | ಹಳೆಯ ಟ್ವೀಟ್ ಗಳನ್ನು ಹಾಕಿ ಖುಷ್ಬೂ ಕಾಲೆಳೆದ ಟ್ವಿಟ್ಟರಿಗರು

Prasthutha|

ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡ ದ ಕೆಲವೇ ಗಂಟೆಗಳಲ್ಲಿ ಖುಷ್ಬೂ ಅವರ ಹಳೆಯ ಟ್ವೀಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಈ ಹಿಂದೆ ಬಿಜೆಪಿ ಮತ್ತು ನರೇಂದ್ರ ಮೋದಿಯವರನ್ನು ಕಟುವಾಗಿ ಟೀಕಿಸಿದ್ದ ಮತ್ತು ಅಪಹಾಸ್ಯ ಮಾಡಿದ್ದ ನಟಿಯ ಹಳೆಯ ಟ್ವೀಟ್ ಗಳನ್ನು ಹಾಕಿ ಟ್ವಿಟ್ಟರಿಗರು ಕಾಲೆಳೆಯುತ್ತಿದ್ದಾರೆ.

ಖುಷ್ಬೂ 2010ರಲ್ಲಿ ಡಿಎಂಕೆ ಮೂಲಕ ರಾಜಕೀಯ ಪ್ರವೇಶಿಸಿದ್ದರು. 2014ರಲ್ಲಿ ಕಾಂಗ್ರೆಸ್ ಗೆ ಸೇರಿದರು. ನಂತರ ಅವರು ರಾಷ್ಟ್ರೀಯ ವಕ್ತಾರರಾಗಿ ನೇಮಕವಾಗಿದ್ದರೂ ರಾಜ್ಯ ಕಾಂಗ್ರೆಸ್ ನಾಯಕತ್ವದೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ಟಿಕೆಟ್ ಗಾಗಿ ಪ್ರಯತ್ನಿಸಿದ್ದರೂ ರಾಜ್ಯ ಕಾಂಗ್ರೆಸ್ ನಾಯಕತ್ವದ ವಿರೋಧದಿಂದ ಅದು ಕೈ ತಪ್ಪಿತ್ತು. ನಂತರ ಅವರು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರಲಿಲ್ಲ.

- Advertisement -