Home ಟಾಪ್ ಸುದ್ದಿಗಳು ಸಂಕ್ರಾಂತಿ ಬಳಿಕ ಜನರ ಕೈ ಸುಡಲಿದೆ ನಂದಿನಿ ಹಾಲಿನ ದರ: 5 ರೂ. ಏರಿಕೆ ಸಾಧ್ಯತೆ

ಸಂಕ್ರಾಂತಿ ಬಳಿಕ ಜನರ ಕೈ ಸುಡಲಿದೆ ನಂದಿನಿ ಹಾಲಿನ ದರ: 5 ರೂ. ಏರಿಕೆ ಸಾಧ್ಯತೆ

ಬೆಂಗಳೂರು: ಸಂಕ್ರಾಂತಿ ಹಬ್ಬದ ಬಳಿಕ ಕರ್ನಾಟಕ ಹಾಲು ಒಕ್ಕೂಟ (KMF) ನಂದಿನಿ ಹಾಲಿನ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಪ್ರತಿ ಲೀಟರ್​ ಹಾಲಿನ ದರದಲ್ಲಿ 5 ರೂ. ಏರಿಕೆ ಮಾಡುವಂತೆ ಬುಧವಾರ ನಡೆದ ಹಾಲು ಒಕ್ಕೂಟ ಸಭೆಯಲ್ಲಿ ಪ್ರಸ್ತಾಪವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಮಾಹಿತಿ ನೀಡಿದರು.

ಬೆಲೆ ಏರಿಕೆ ಬಗ್ಗೆ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ಪರಿಶೀಲಿಸುತ್ತೇವೆ. ದರ ಏರಿಕೆ ದುಡ್ಡು ರೈತರ ಕೈ ಸೇರುತ್ತೆ ಎಂದರು.

ಸರ್ಕಾರ ಈ ಹಿಂದೆ ಪ್ರತಿ ಲೀಟರ್​ ಪ್ಯಾಕೇಟ್​ನಲ್ಲಿ 50 ಎಂಎಲ್ ಹಾಲನ್ನು ಹೆಚ್ಚಳ ಮಾಡಿ 2 ರೂಪಾಯಿ ದರ ಏರಿಕೆ ಮಾಡಿತ್ತು. ಇದರಿಂದ ಗ್ರಾಹಕರ ಕೆಂಗಣ್ಣಿಗೆ ಗುರಿಯಾದ ಸರ್ಕಾರ, ಇದನ್ನು ವಾಪಸ್​ ಪಡೆಯಲು ಮುಂದಾಗಿದೆ.

ಪ್ರತಿ ಲೀಟರ್​ಗೆ 5 ರೂ. ಹೆಚ್ಚಳ ಮಾಡಲು ಮುಂದಾಗಿರುವುದಕ್ಕೆ ಜನರು ಆಕ್ರೋಶ ಹೊರಹಾಕಿದ್ದು, ದಿಢೀರ್ ಬೆಲೆ ಏರಿಕೆ ಮಾಡುವುದು ಸರಿಯಲ್ಲ.‌ ಹಾಲಿನ ದರ ಹೆಚ್ಚಳಕ್ಕೆ ಯಾವುದೆ ಮಾನದಂಡ ಇಲ್ಲ. ಈ ಬಗ್ಗೆ ತಜ್ಞರ ಸಲಹೆ ಪಡೆದು ಬಳಿಕ ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Join Whatsapp
Exit mobile version