ಶೋಪಿಯಾನ ನಕಲಿ ಎನ್ಕೌಂಟರ್: ಸೇನಾ ನಾಯಕ ಸೇರಿದಂತೆ ಮೂವರ ವಿರುದ್ಧ ಚಾರ್ಜ್ ಶೀಟ್

Prasthutha|

ಶೋಪಿಯಾನ: ಮೂವರು ಕಾರ್ಮಿಕರನ್ನು ನಕಲಿ ಎನ್ಕೌಂಟರ್ ನಲ್ಲಿ ಕೊಂದು ಅನಾಮಿಕ ಉಗ್ರಗಾಮಿಗಳೆಂದು ಭಾರತೀಯ ಸೈನಿಕರು ಹೂತು ಹಾಕಿದ ಹಲವು ದಿನಗಳ ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೇನಾ ನಾಯಕನನ್ನೊಳಗೊಂಡಂತೆ ಮೂವರು ವ್ಯಕ್ತಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ರಾಜೌರಿ ನಿವಾಸಿಗಳಾದ ಇಮ್ತಿಯಾಝ್ ಅಹ್ಮದ್, ಅಬ್ರಾರ್ ಅಹ್ಮದ್ ಮತ್ತು ಮುಹಮ್ಮದ್ ಅಬ್ರಾರ್  ಎಂಬವರ ಹತ್ಯೆಗಳ ಕುರಿತು ಶನಿವಾರದಂದು ಶೋಪಿಯಾನದ ಮುಖ್ಯ ಜುಡೀಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ 1400 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

- Advertisement -

ಆರೋಪಿಗಳನ್ನು ಸೇನೆಯ 62 ರಾಷ್ಟ್ರೀಯ ರೈಫಲ್ ನ ಕ್ಯಾಪ್ಟನ್ ಭೂಪೇಂದ್ರ, ಬಿಲಾಲ್ ಅಹ್ಮದ್ ಲೋನ್ ಮತ್ತು ತಬೀಶ್ ನಝೀರ್ ಎಂದು ಗುರುತಿಸಲಾಗಿದೆ.

ನಾಗರಿಕರನ್ನು ಅಪಹರಿಸಿ ನಕಲಿ ಗುಂಡು ಕಾಳಗದ ಸಂಚನ್ನು ರೂಪಿಸಿರುವುದು ತನಿಖೆಯ ವೇಳೆ ಬಹಿರಂಗಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -