ಶಹೀದ್ ಮುರ್ಸಿ: ನಿಯೋಗ ಮತ್ತು ವಿದಾಯ

0
32

♦ ಡಾ. ಸಿ. ಕೆ. ಅಬ್ದುಲ್ಲಾ

2012, ಜೂನ್ 17ರಂದು ಈಜಿಪ್ಟಿನ ಜನರು ಡಾ: ಮುಹಮ್ಮದ್ ಮುರ್ಸಿಗೆ ರಾಷ್ಟ್ರದ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಟ್ಟರು. 7 ವರ್ಷದ ನಂತರ ಅದೇ ದಿನಾಂಕದಂದು ಜನರ ತೀರ್ಮಾನವನ್ನು ಕಾಪಾಡಿದ ಆತ ಅದಕ್ಕಾಗಿ ಹುತಾತ್ಮರಾದರು. ಇದು ನನ್ನ ನಿಯೋಗವೆಂದು ಶಹೀದ್ ಡಾ.ಮುಹಮ್ಮದ್ ಮುರ್ಸಿ ಅರಿತಿದ್ದರು. 2012ರ ಹಾದಿಯಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಅಧ್ಯಕ್ಷೀಯ ಪದವಿಗೆ ಬ್ರದರ್ ಹುಡ್ ಮತ್ತು ಫ್ರೀಡಂ ಆ್ಯಂಡ್ ಜಸ್ಟಿಸ್ ಪಕ್ಷ ತೀರ್ಮಾನಿಸಿದ್ದ ಮುಹಮ್ಮದ್ ಖೈರತ್ ಶಾತಿರ್‌ರವರ(ಬ್ರದರ್ ಹುಡ್‌ನ ಮುಖ್ಯ ನೇತಾರರೊಂದಿಗೆ ಅವರೂ ಇದೀಗ ಜೈಲಿನಲ್ಲಿದ್ದಾರೆ) ಅಭ್ಯರ್ಥಿ ಪದವಿಯು ತಳ್ಳಿ ಹಾಕಲ್ಪಟ್ಟ ಕಾರಣದಿಂದ ಮುರ್ಸಿರವರಿಗೆ ಇಷ್ಟವಿಲ್ಲದಿದ್ದರೂ ಅವರ ವೈಯಕ್ತಿಕ ವಿರೋಧಗಳನ್ನು ಕಡೆಗಣಿಸಿ ಪಕ್ಷ ಅವರನ್ನು ಪಕ್ಷದ ಅಧ್ಯಕ್ಷ ಎಂದು ಘೋಷಿಸಿತು.

ಪಕ್ಷದ ಸಭೆ ಕಳೆದು ಹೊರ ಬರುವಾಗ ಓರ್ವ ಮಾಧ್ಯಮ ಪ್ರತಿನಿಧಿ ಅವರೊಂದಿಗೆ, ‘‘ಮುಂದೆ ಎದುರಿಸಬೇಕಾದ ಬೆದರಿಕೆಗಳ ಕುರಿತು ನೀವು ಆಲೋಚಿಸಿದ್ದೀರಾ’’ ಎಂದು ಪ್ರಶ್ನಿಸಿದ್ದರು. ‘‘ಈ ಕಠಿಣವಾದ ಬಿಕ್ಕಟ್ಟಿನ ವೇಳೆ ಈ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವುದು ಒಂದರ್ಥದಲ್ಲಿ ಮರಣವನ್ನು ಸ್ವಾಗತಿಸಿದಂತೆ. ಹಾಗಿದ್ದರೂ ಕರ್ತವ್ಯವನ್ನು ನಿರ್ವಹಿಸಲು ನಾನು ಈ ಬೆದರಿಕೆಗಳನ್ನು ವಹಿಸಿಕೊಳ್ಳುತ್ತೇನೆ’’ ಎಂದು ಮುರ್ಸಿ ಉತ್ತರಿಸಿದ್ದರು.

ಪುತ್ರ ಉಸಾಮಾ ಮುರ್ಸಿಯೊಂದಿಗೆ ಈ ಮರಳುವಿಕೆಯ ಬಗ್ಗೆ ಅವರು ಹೇಳಿದ್ದನ್ನು ಮುರ್ಸಿಯ ಚುನಾವಣಾ ಗೆಲುವನ್ನು ಘೋಷಿಸಿದ ಜಸ್ಟಿಸ್ ವಲೀದ್ ಶರಾಬಿ ದಾಖಲಿಸಿದ್ದರು. ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯಿಯೆಂದು ಘೋಷಿಸಲ್ಪಟ್ಟ ಮೊದಲ ದಿನ ಅವರಿಗೆ  ಅಭಿನಂದನೆಯನ್ನು ತಿಳಿಸಿದ ಪುತ್ರ ಉಸಾಮಾ, ‘‘ಅಪ್ಪಾಜಿ, ದುರ್ಬಲರ, ನ್ಯಾಯ ನಿರಾಕರಿಸಲ್ಪಟ್ಟವರ ಸಬಲೀಕರಣವು ನಿಮ್ಮಿಂದ ಸಾಧ್ಯವಾಗುವುದೆಂದು ನಾನೆಂದೂ ಭಾವಿಸಿರಲಿಲ್ಲ’’ ಎಂದು ಹೇಳಿದ್ದರು. ಅದನ್ನು ಕೇಳಿದ ಮುರ್ಸಿ, ‘‘ಯಾವ ಸಬಲೀಕರಣದ ಬಗ್ಗೆ ನೀನು ಮಾತನಾಡುತ್ತಿರುವಿ ಉಸಾಮಾ. ನಾನು ಗುರಿಯೆಡೆಗೆ ತಲುಪಲೇ ಇಲ್ಲ. ಈ ಹೊಣೆಗಾರಿಕೆಗೆ ತಲುಪಿದರೆ ಅದರ ಅರ್ಥ, ಮುಂದಿರುವ ದಾರಿ ಕಷ್ಟ ಕೋಟಲೆಗಳು, ಅಪಾಯಗಳು ತುಂಬಿದೆ ಎಂದಾಗಿದೆ’’ ಎಂದು ಹೇಳಿದ್ದರು. ‘‘ಸಬಲೀಕರಣ ಎಂದು ಸಾಧ್ಯವೆಂದು ನೀವು ಭಾವಿಸುತ್ತಿದ್ದೀರಿ’’ ಎಂದು ಕೇಳಿದಾಗ: ‘‘ನನ್ನ ರಕ್ತವು ಹರಿಯುವುದನ್ನು ನೀನು ನೋಡಿದ ನಂತರ’’ ಎಂದು ಅವರು ಹೇಳಿದ್ದರು.  2013 ಜೂನ್ ಕೊನೆಯ ವಾರದಲ್ಲಿ ಬಂಡಾಯದ ಕುರಿತು ಸೂಚನೆಗಳು ಸಿಕ್ಕಿದಾಗ ಜನರೊಡನೆ ಮುರ್ಸಿ ಈ ರೀತಿ ಹೇಳಿದ್ದರು, ‘‘ಅಶ್ಶರಇಯ್ಯ ಸಮನುಹಾ ಹಯಾತಿ(ಜನಪರ ನ್ಯಾಯ ನನ್ನ ಜೀವನವಾಗಬೇಕು).’’

ಎಷ್ಟೊಂದು ಕರಾರುವಕ್ಕಾದ ಮಾತುಗಳು!

ಮುರ್ಸಿಯ ಈ ಮರಳುವಿಕೆಯನ್ನು ಅವರ ಪತ್ನಿ ನಂಬಿದ್ದರು. ಶ್ರದ್ಧಾಂಜಲಿಯನ್ನು ಅರ್ಪಿಸಲು ಫೋನಾಯಿಸುವವರೊಂದಿಗೆ ‘‘ನಾನು ಶ್ರದ್ಧಾಂಜಲಿಯನ್ನು ಸ್ವೀಕರಿಸುವುದಿಲ್ಲ. ಶಹಾದತ್‌ನ ಅನುಮೋದನೆಯನ್ನು ಸ್ವೀಕರಿಸುತ್ತೇನೆ’’ ಎಂದು ನಜ್ಲಾ ಅಲೀ ಮಹ್‌ಮೂದ್ ಹೇಳಿದ್ದರು.

ವಿವಿಧ ತೊಂದರೆಗಳು!

ಅಧ್ಯಕ್ಷೀಯ ಹೊಣೆಗಾರಿಕೆಯನ್ನು ವಹಿಸಿಕೊಂಡ ನಂತರ, ಬಾಹ್ಯ ಒತ್ತಡಗಳಿಗೆ ಮಣಿದು ಬ್ರದರ್‌ಹುಡ್ ತೆಗೆದುಕೊಂಡ ಕೆಲವು ಕೆಟ್ಟ ತೀರ್ಮಾನಗಳನ್ನು ಅವರು ಅನಿವಾರ್ಯವಾಗಿ ಜಾರಿಗೊಳಿಸಬೇಕಾಯಿತು. ಅದರಲ್ಲಿ ಅತ್ಯಂತ ಅಪಾಯಕಾರಿಯಾದುದು  ಅಬ್ದುಲ್ ಫತ್ತಾಹ್ ಸಿಸಿ ಎಂಬ ಝಿಯೋನಿಸ್ಟರ ಬೆಂಬಲಿಗನನ್ನು ಸೈನ್ಯದ ಪೂರ್ಣ ಅಧಿಕಾರ ಹೊಂದಿದ ರಕ್ಷಣಾ ಮಂತ್ರಿಯಾಗಿ ನೇಮಿಸಿದ್ದು. ಅಧಿಕಾರ  ನಡೆಸಲು ಶ್ವೇತ ಭವನದ ಒತ್ತಡದ ಮೇಲೆ ಜಾರಿಗೊಳಿಸಲಾದ ಹಿಮಾಲಯನ್ ಪ್ರಮಾದವಿದು.  ಅದಕ್ಕೆ ಕಾರಣರಾದ ಬ್ರದರ್‌ಹುಡ್‌ನ ಕೆಲವು ನೇತಾರರು ಬಂಡಾಯಕ್ಕೆ ಮೊದಲೇ ‘ರಾಜ ಭೂಮಿ’ಯಲ್ಲಿ ಅಭಯವನ್ನು ಕೇಳಿದ್ದರು. ದುಃಖದ ವಿಚಾರವೆಂದರೆ ಅವರಲ್ಲಿ ಕೆಲವರು  ಮುರ್ಸಿಯ ಶಹಾದತನ್ನು ಕೊಂಡಾಡಿ ಬೆಂಕಿಯುಗುಳುವ ಭಾಷಣವನ್ನು ಮಾಡುತ್ತಿದ್ದಾರೆ. ಕಾಲವು ಅವರೆಲ್ಲರನ್ನು ತಿದ್ದಿ ದಾಖಲಿಸಿರುವುದು ದೇವಚರ್ಯೆಯಾಗಿದೆ.

ಸಬಲೀಕರಣ ಎಂದು ಸಾಧ್ಯ ಎಂದು ಕೇಳಿದ ತನ್ನ ಪುತ್ರ ಉಸಾಮನೊಂದಿಗೆ ಮುರ್ಸಿ ಹೇಳಿದ್ದೇನು, ‘‘ನನ್ನ ರಕ್ತ ಹರಿದಾಗ’’ ಎಂದಿದ್ದರು. ಇದರರ್ಥ ಮುಂದೆ  ನಿಜವಾದ ಹೋರಾಟ ಆರಂಭವಾಗುವುದೆಂದರ್ಥ. ಒಮ್ಮೆ ಅಮ್ರ್ ಇಬ್ನ್ ಅಬಸಾ ಎಂಬ ಪ್ರವಾದಿ ಅನುಚರರು ಇಸ್ಲಾಮ್, ಈಮಾನ್, ಜಿಹಾದ್ ಎಂಬಿತ್ಯಾದಿಗಳ ಉನ್ನತ ರೂಪ ಯಾವುದೆಂದು ಕೇಳಿದಾಗ ‘‘ತನ್ನ ಯುದ್ಧ ಕುದುರೆ ಕೊಲ್ಲಲ್ಪಟ್ಟು, ತನ್ನ ರಕ್ತವು ಹರಿಯುವವರೆಗೆ ಹೋರಾಡುವಾತನ ಹೋರಾಟವು ಅತ್ಯಂತ ಶ್ರೇಷ್ಠವಾದುದು’’ ಎಂದು ಪ್ರವಾದಿ ಉತ್ತರಿಸಿದ್ದರು(ನಸಾಈ). ದೇಶದಲ್ಲಿ ಮೊತ್ತಮೊದಲು ನಡೆದ ಸುಧಾರಿತ ಚುನಾವಣೆಯಲ್ಲಿ ಪಡೆದ ಅಧ್ಯಕ್ಷೀಯ ಪದವಿಯು ಮುರ್ಸಿಯ ಕೊಲ್ಲಲ್ಪಟ್ಟ ಹೋರಾಟದ ಕುದುರೆಯಾಗಿತ್ತು.

ಡಾ.ಮುಹಮ್ಮದ್ ಮುರ್ಸಿಯ ವಿರುದ್ಧ ನಡೆದ ಬಂಡಾಯದ ಹಿಂದೆ ಹಲವು ವಿಚಾರಗಳಿವೆ. ಬ್ರದರ್‌ಹುಡ್‌ನ ಕುರಿತು ಅನಿರೀಕ್ಷಿತವಾಗಿ 2011 ಜನವರಿ 25ರ ಕ್ರಾಂತಿಯ ಭಾಗೀದಾರಿಕೆ. ಮೊದಲ ಹಂತದಲ್ಲಿ ಹುಸ್ನಿ ಮುಬಾರಕ್ ಆಡಳಿತ ಮತ್ತು ಬಂಡುಕೋರರ ಮಧ್ಯಸ್ಥಿಕೆಯ ಪಾತ್ರವನ್ನು ವಹಿಸಿದವರೂ ಅವರಲ್ಲಿದ್ದರು. ಜನಪರ ಭಾಗೀದಾರಿಕೆ ಹೆಚ್ಚುವುದರೊಂದಿಗೆ ಬ್ರದರ್‌ಹುಡ್ ಕ್ರಾಂತಿಯ ನಡೆಗಳಲ್ಲಿ ಸೇರಿಕೊಂಡರು. ಹುಸ್ನಿ ಮುಬಾರಕ್ ಕುರ್ಚಿ ತೊರೆಯುವಿಕೆ ಕ್ರಾಂತಿಯ ಗೆಲುವೆಂದು  ಆಚರಿಸಲಾಗಿದ್ದರೂ, ಅದು ಯಜಮಾನನ ತಿರ್ಮಾನವಾಗಿತ್ತು. ಕ್ರಾಂತಿಯಲ್ಲಿ ಇಖ್‌ವಾನ್ ಭಾಗೀದಾರಿಕೆ ಇದ್ದ ಇನ್ನೊಂದು  ಕೈಗೊಂಬೆಯನ್ನು ಪ್ರತಿಷ್ಠಾಪಿಸಲು ಸೇನೆಯು ನಡೆಸಿದ ಯತ್ನ  ವ್ಯರ್ಥವಾಯಿತು.  ಸೂಕ್ತ  ಉತ್ತರ ನೀಡಲು ಹಿರಿಯ ನೇತಾರರಿಗೆ ಸಾಧ್ಯವಾಗಲಿಲ್ಲ. ಮಹಾಚುನಾವಣೆ ಘೋಷಿಸಿದ ನಂತರವೂ, ಸ್ಪರ್ಧಿಸುವ ವಿಚಾರದಲ್ಲಿ ನಾಯಕರಲ್ಲಿ ಭಿನ್ನತೆಯಿತ್ತು.  ಮೂರು ಬಾರಿ ನಡೆಸಿದ ಶೂರಾದಲ್ಲಿ ಮತ ಹಾಕಿ ಸ್ಪರ್ಧಿಸಬೇಕೆಂಬ ಆದೇಶಕ್ಕೆ ಕೇವಲ ಬಹುಮತ ಲಭಿಸಿತು.  ಆಡಳಿತದ ಏಜೆಂಟರುಗಳು ಈಜಿಪ್ಟ್ ಇಂಟಲಿಜೆಂಟ್ಸ್ ಪ್ರತಿನಿಧಿಗಳಾಗಿ  ಬ್ರದರ್‌ಹುಡ್ ನಾಯಕತ್ವವನ್ನು ಕೈವಶಪಡಿಸಿಕೊಂಡರು. ಅದು ಇಂದಿಗೂ ಅತ್ಯಂತ ದೊಡ್ಡ ತಡೆಯಾಗಿ ಮುಂದುವರಿಯುತ್ತಿದೆ.

ಬ್ರದರ್‌ಹುಡ್ ಅಧಿಕಾರಕ್ಕೇರಿದ ನಂತರ, ಇಸ್ರೇಲ್ ಹಿತಾಸಕ್ತಿ ಕಾಪಾಡಲು ಒಬಾಮ ಆಡಳಿತ ನಡೆಸಿದ ಹಸ್ತಕ್ಷೇಪಗಳು ಅತ್ಯಂತ ದೊಡ್ಡ ತಡೆಯಾಗಿತ್ತು. ಹುಸ್ನಿ ಮುಬಾರಕ್, ಕಛೇರಿ ಬಿಟ್ಟು ತೆರಳಿದ ತಕ್ಷಣ ಈಜಿಪ್ಟ್‌ನಲ್ಲಿ ರಾಯಭಾರಿಯಾಗಿ ಅಮೆರಿಕ ನಿಯೋಜಿಸಿದ ಪ್ಯಾಟ್ರಿಸನ್ ಎಂಬ ಬಂಡಾಯದ ಸೂತ್ರಧಾರಿ ಗುಪ್ತ ಕಾರ್ಯಾಚರಣೆ ನಡೆಸಿದ್ದನು. ಮುರ್ಸಿ ಅಧ್ಯಕ್ಷ ಪದವಿ ವಹಿಸಿದ ನಂತರ ಬಂಡಾಯಕ್ಕಾಗಿ ಒಂದು ವರ್ಷದ ಮಧ್ಯೆ 32 ಬಾರಿ ಅಬ್ದುಲ್ ಫತ್ತಾಹ್ ಸಿಸಿಯೊಂದಿಗೆ ಪ್ಯಾಟ್ರಿಸನ್ ಭೇಟಿ ನಡೆಸಿದ್ದನು. ಸಂಪೂರ್ಣ ಸಂಪರ್ಕವನ್ನು ಕಡಿದುಕೊಂಡ ಕ್ಷೇತ್ರದಲ್ಲಿ ಜನವಿರೋಧಿ ವಂಶಾಡಳಿತ  ಬಲಪ್ರಯೋಗಿಸಿ ಜನಪರ ಆಡಳಿತ ವಿರೋಧಿಸಿದ್ದು ಸಹಜವಾಗಿತ್ತು.  ಮುರ್ಸಿಯ ವಿರುದ್ಧ ಬಂಡೇಳಲು ಮತ್ತು  ಬಂಡಾಯಕೋರರ ವಿರುದ್ಧ ಪ್ರತಿಭಟಿಸಿದವರನ್ನು ದಮನಿಸಲು ಅವರು ಹಣ ವಿನಿಯೋಗಿಸಿದ್ದರು.  ಈಜಿಪ್ಟಿನ ಸೇನೆಯನ್ನು  ಮಹಾ ನಾಯಕನಂತೆ ಬಿಂಬಿಸುವಲ್ಲಿ ರಾಷ್ಟ್ರದ ಜನರ ಜತೆ ಕೆಲವು ಇಖ್‌ವಾನುಲ್ ಮುಸ್ಲಿಮೀನ್ ನಾಯಕರ ಪಾತ್ರವೂ ಇದೆ. ಮುರ್ಸಿಯಂತಹ ಕೆಲವರಷ್ಟೆ ಇದಕ್ಕೆ ಅಪವಾದವಾಗಿದ್ದಾರೆ. ಬಂಡಾಯದ ಎರಡು ದಿವಸದ ಹಿಂದಿನವರೆಗೂ ಸೇನೆ ವಂಚಿಸದು ಎಂದು  ಬ್ರದರ್‌ಹುಡ್ ನೇತಾರರು ನಂಬಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಕ್ರಾಂತಿಯ ಫಲಗಳನ್ನು ಸಂರಕ್ಷಿಸಲು ಕುರ್‌ಆನಿನ ಸೂಚನೆಯಂತೆ  ತಯಾರಿ ನಡಸಿರಲಿಲ್ಲ.

ಇರಾನನ್ನು ಮಣಿಸಲು  ಸಾಧ್ಯವಾಗದಿರುವ ಮುಖ್ಯ ಕಾರಣ ಅಲ್ಲಿ ಕ್ರಾಂತಿಯ ಫಲಗಳನ್ನು ಕಾಪಾಡುವ ಕೆಲಸವಾಗಿದೆ. ಗಾಝಾದಲ್ಲಿ ಹೋರಾಟಗಾರರು ಪಶ್ಚಿಮ ದಂಡೆಯಲ್ಲಿ  ಫತಹ್ ಮಾದರಿಯನ್ನು ಅನುಕರಿಸಿದ್ದರೆ ಫೆಲೆಸ್ತೀನಿನ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಊಹಿಸಬಹುದು. ಒಟ್ಟಿನಲ್ಲಿ ಹೇಳುವುದಾದರೆ ಹಲವು ಅಂಶಗಳು ಡಾ. ಮುಹಮ್ಮದ್ ಮುರ್ಸಿಯ ವಿರುದ್ಧ ಬಂಡೇಳುವುದರ ಹಿಂದಿದೆ. ಹೀಗಿದ್ದರೂ ಇವೆಲ್ಲರ ಮಧ್ಯೆ ಒಂದು ವರ್ಷದಲ್ಲಿ ಬಹಳಷ್ಟು ವಿಚಾರಗಳನ್ನು ಅ ಮಹಾ ವ್ಯಕ್ತಿ ಮಾಡಿ ಮುಗಿಸಿದ್ದರು. ಹಲವಾರು ವರ್ಷಗಳಿಂದ ಇಸ್ರೇಲಿಗೆ ಆಟವಾಡುತ್ತಿದ್ದ ಸಿನಾಯ್ ಪ್ರದೇಶವನ್ನು ನೇರ  ಸಂದರ್ಶಿಸಿ ಅಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯನ್ನು ಸ್ವಯಂ ಇಂಜಿನಿಯರ್ ಆದ ಆ ವಿಶ್ವವಿದ್ಯಾಲಯ ಅಧ್ಯಾಪಕ ರೂಪಿಸಿದ್ದರು. 2012 ನವೆಂಬರ್‌ನಲ್ಲಿ ಇಸ್ರೇಲ್ ನಡೆಸಿದ್ದ ಗಾಝಾ ಯುದ್ಧದ ವೇಳೆ ಮುರ್ಸಿ ಕೈಗೊಂಡ ನಿಲುವು ಅತ್ಯಂತ ಒಳ್ಳೆಯ ಉದಾಹರಣೆ. ಇಸ್ರೇಲನ್ನು ತಡೆದು ಅಮೆರಿಕ ಸೇರಿದಂತೆ ಯಜಮಾನರನ್ನು ಕೈರೋಗೆ ಬರಮಾಡಿಸಿ, ಒಂದೇ ವಾರದಲ್ಲಿ ಝಿಯೋನಿಸ್ಟರ ಬೇಡಿಕೆಯನ್ನು ವಿಫಲಗೊಳಿಸಿದರು. ಗಟ್ಟಿ  ಶಬ್ಧದಲ್ಲಿ  ಮುರ್ಸಿ  ‘‘ಲನ್ ತತ್ರುಕಲ್ ಗಝ್ಝ ವಹ್‌ದಹಾ (ಎಂದೂ ಗಾಝಾವನ್ನು ಕೈಬಿಡಲಾರೆವು) ಎಂದು ಹೇಳಿದ್ದರು’’ ಆ ನಿಲುವು ಅತ್ಯಂತ ಮೌಲ್ಯಯುತವಾಗಿತ್ತು.

ದೌತ್ಯದೊಂದಿಗೆ ಮುಂದಕ್ಕೆ:

ಅಲ್ಲಾಹನು ತೀರ್ಮಾನಿಸಿದ ವೇಳೆಯಲ್ಲಿ ಮುರ್ಸಿ ಸಮರ ಕುದುರೆಯನ್ನು ಬಲಿಯರ್ಪಿಸಿ ತನ್ನ ರಕ್ತವನ್ನು ಹರಿಸಿದರು. ಈ ದೌತ್ಯವು ಮುರ್ಸಿಯೊಂದಿಗೆ ಕೊನೆಗೊಳ್ಳುವುದಿಲ್ಲ. ದೌತ್ಯ ನಿರ್ವಹಣೆಯ ಮಧ್ಯೆ  ತನ್ನ ಜೀವ  ಅರ್ಪಿಸಿದ ನೇತಾರರೇ ಇಸ್ಲಾಮೀ ಆಂದೋಲನ ಮುಂದಕ್ಕೆ ಕೊಂಡೊಯ್ದವರು. ಮುಂದಿರುವ ಪ್ರಯಾಣ ಎಂದೂ ಸುಲಭವಲ್ಲ. ಎಷ್ಟೋ ವರ್ಷಗಳ ನಂತರವೂ, ರಾಜಿಗೆ ತಯಾರಾಗದ ಕಾರಣ ಅವರು ಮುರ್ಸಿಯನ್ನು ಕೊನೆಗೊಳಿಸಿದರು. ಜೈಲಿನಲ್ಲಿರುವ ಇಖ್‌ವಾನ್ ನಾಯಕರು ಈ ಗತಿ ಎದುರಿಸಬೇಕಾಗುತ್ತದೆ. ಅದೇ ವೇಳೆ ಬಿಕರಿಯಾಗುವಂತಹ  ಕೆಲವರು ಕ್ರಾಂತಿಯ ಹಾದಿ ತಪ್ಪಿಸಲು ಪ್ರಯತ್ನಿಸುವರು. ಈಜಿಪ್ಟ್‌ನ ಬ್ರದರ್‌ಹುಡ್ ನಾಯಕರಲ್ಲಿ ಮುಖ್ಯ ಹೊಣೆಯಲ್ಲಿರುವ 12ಕ್ಕೂ ಹೆಚ್ಚು ಮಂದಿ  ಇಂಟಲಿಜೆನ್ಸ್ ಸಂಬಂಧ ಹೊಂದಿದ್ದಾರೆಂದು ಶಾಬಿ ಮಶ್‌ವೂರ್ ಎಂಬ ಇಸ್ಲಾಮಿಸ್ಟ್ ಪತ್ರಕರ್ತ ಅವರ ಹೆಸರು ವಿವರಗಳ ಸಹಿತ ಬಹಿರಂಗಪಡಿಸಿದ್ದಾರೆ.

‘‘ಇತ್ತ ನಾವು, ಭೂಮಿಯಲ್ಲಿ ಮರ್ದಿತರಾಗಿದ್ದವರಿಗೆ ಉಪಕರಿಸಲು ಮತ್ತು ಅವರನ್ನು ನಾಯಕರಾಗಿಯೂ ಉತ್ತರಾಧಿಕಾರಿಗಳಾಗಿಯೂ ಮಾಡಲು ನಿರ್ಧರಿಸಿದ್ದೆವು’’(ಕುರ್‌ಆನ್-28:5)

ಅದು ಸಾಧ್ಯ. ಆದರೆ ಹೋರಾಟಗಳು ದುರ್ಬಲಗೊಂಡು ವಿರಾಮಗಳನ್ನು ಪರ್ಯಾವಸಾನವೆಂದು ಭಾವಿಸಿದರೆ ಹೊಡೆತ, ವಿಯೋಗ ಮತ್ತು ನಿರಾಶೆ ಮಾತ್ರ ಉಳಿಯಲಿದೆ. ಪರಿಣಾಮಕಾರಿ ಕ್ರಾಂತಿ ನಡೆಸಲು, ಅದರ  ಸಾಮರ್ಥ್ಯ  ನಿಯಂತ್ರಿಸಲು  ಮುಂಜಾಗ್ರತೆ ಇಲ್ಲದೆ ಅಖಾಡಕ್ಕಿಳಿದರೆ ನಷ್ಟ ಸಹಜ. ವಾಸ್ತವದಲ್ಲಿ ಅದು ಸೋಲಲ್ಲ. ಇಖ್‌ವಾನಿನ ಕ್ರಾಂತಿಯನ್ನು ತಪ್ಪುಗಳೆಂದು ಭಾವಿಸುವವರಿದ್ದಾರೆ. ಅರಬಿ ಹೆಸರನ್ನು ಅಂಟಿಸಿ ಯಾವುದೇ ಸ್ವೇಚ್ಛಾಧಿಪತಿಯ ವಿರುದ್ಧ ಕ್ರಾಂತಿ ನಡೆಸಬಾರದೆಂಬ ಹಳೆಯ  ಸಿದ್ಧಾಂತವನ್ನು ಮತ್ತೊಮ್ಮೆ ಪ್ರಚಾರಪಡಿಸುವವರೂ ಇದ್ದಾರೆ. ವಸಾಹತುಶಾಹಿಯ ತಜ್ಞನಾಗಿದ್ದ ನೆಪೋಲಿಯನ್ ಬೋನಾಪಾರ್ಟೆ(1798-1801) ಆ ಕಾಲದಲ್ಲಿ ಈಜಿಪ್ಟನ್ನು ಗೆದ್ದುಕೊಂಡಾಗ ಈ ಸಿದ್ಧಾಂತವನ್ನು ಸಮರ್ಥವಾಗಿ ಬಳಸಿಕೊಂಡಿದ್ದನು. ಕಲಿಮ ಉಚ್ಛರಿಸಿ ಅಲ್ ಅಝ್‌ಹರ್ ಮಸೀದಿ  ಪ್ರವೇಶಿಸಿ ನಮಾಝ್ ನಿರ್ವಹಿಸಿದಾಗ, ರೋಮಾಂಚನಗೊಂಡು, ನೆಪೋಲಿಯನ್ ವಸಾಹತುಶಾಹಿ ಎದುರಿಸಿದವರು ನರಕ ಪ್ರವೇಶಿಸುವರು ಎಂಬ ಫತ್ವಾವನ್ನು ಕೊಡಲಾಗಿತ್ತು. ಈ ಸಿದ್ಧಾಂತವನ್ನು ಇಂದೂ ಪುನರುಚ್ಚರಿಸಲಾಗುತ್ತದೆ. ಅವರು ಇತಿಹಾಸವನ್ನು ಅರಿತುಕೊಂಡಿಲ್ಲ ಮತ್ತು ಕುರ್‌ಆನ್ ನೀಡುವ ಪ್ರಾಥಮಿಕ ಪಾಠಗಳನ್ನೂ ಓದಿಲ್ಲ. ಭೂಮಿಯಲ್ಲಿರುವ ಹೊಣೆಗಾರಿಕೆ ಮತ್ತು ಪರಲೋಕದ ವಿಜಯದ ಬಗ್ಗೆ ಕುರ್‌ಆನ್ ಎಚ್ಚರಿಸುತ್ತದೆ.

‘‘ನೀವೇನು(ಸುಲಭವಾಗಿ) ನೀವು ಸ್ವರ್ಗ ಪ್ರವೇಶಿಸುವಿರೆಂದು ಕೊಂಡಿರುವಿರಾ? ನಿಜವಾಗಿ, ನಿಮಗಿಂತ ಹಿಂದೆ ಗತಿಸಿದವರಿಗೆ ಎದುರಾಗಿದ್ದ ಸನ್ನಿವೇಶಗಳು ನಿಮಗಿನ್ನೂ ಎದುರಾಗಿಲ್ಲ. ಅವರು ತೀವ್ರ ಸಂಕಷ್ಟಗಳನ್ನು ಹಾಗೂ ಹಿಂಸೆಯನ್ನು ಅನುಭವಿಸಿದ್ದರು ಮತ್ತು ಅವರನ್ನು ಅದೆಷ್ಟು ನರಳಿಸಲಾಗಿತ್ತೆಂದರೆ, (ಅಂದಿನ) ದೇವದೂತರು ಹಾಗೂ ಅವರ ಜೊತೆಗಿದ್ದ ವಿಶ್ವಾಸಿಗಳು, ‘‘ಯಾವಾಗ ಬಂದೀತು ಅಲ್ಲಾಹನ ಸಹಾಯ?’’ ಎನ್ನುವಂತಾಗಿತ್ತು. ತಿಳಿದಿರಲಿ, ಖಂಡಿತವಾಗಿಯೂ ಅಲ್ಲಾಹನ ಸಹಾಯವು ಹತ್ತಿರವೇ ಇದೆ’’ (ಕುರ್‌ಆನ್-2:214)

LEAVE A REPLY

Please enter your comment!
Please enter your name here