ವೆಸ್ಟ್ ಬ್ಯಾಂಕ್ ನಲ್ಲಿ ಪ್ಯಾಲೆಸ್ತೀನಿಯನ್ ಪ್ರತಿಭಟನಕಾರರ ಮೇಲೆ ಇಸ್ರೇಲಿ ಸೈನಿಕರ ದಾಳಿ

Prasthutha|

ಜೆರುಸಲೇಂ : ಇಸ್ರೇಲಿ ಆಕ್ರಮಣವನ್ನು ವಿರೋಧಿಸಿ ಪ್ರತಿಭಟಿಸಿದ ಪ್ಯಾಲೇಸ್ತೀನಿಯನ್ನರ ಮೇಲೆ ಇಸ್ರೇಲಿ ಸೇನಾ ಪಡೆಗಳು ದಾಳಿ ನಡೆಸಿದ್ದು, ಹಲವಾರು ಮಂದಿಗೆ ಗಾಯಗಳಾಗಿವೆ. ಖಲ್ಕಿಲಿಯಾದ ವೆಸ್ಟ್ ಬ್ಯಾಂಕ್ ಬಳಿಯ ಬುರ್ಖಾ ಗ್ರಾಮದಲ್ಲಿ ಯುವಕರು ಮತ್ತು ಇಸ್ರೇಲಿ ಸೈನಿಕರ ನಡುವೆ ಘರ್ಷಣೆ ನಡೆದಿದೆ. ಘಟನೆಯ ವೀಡಿಯೊ ಬಹಿರಂಗವಾಗಿದೆ ಎಂದು ಪ್ಯಾಲೆಸ್ತಿನಿಯನ್ ಮಾಧ್ಯಮಗಳು ವರದಿ ಮಾಡಿವೆ.

ಪ್ಯಾಲೆಸ್ತೀನಿಯನ್ ಪ್ರತಿಭಟನಕಾರರ ಮೇಲೆ ಇಸ್ರೇಲಿ ಸೈನಿಕರು ಅಶ್ರುವಾಯು ಸಿಡಿಸಿದ್ದಾರೆ ಮತ್ತು ರಬ್ಬರ್ ಗುಂಡುಗಳ ದಾಳಿ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ಪತ್ರಕರ್ತರ ಮೇಲೂ ಇಸ್ರೇಲಿ ಸೈನಿಕರು ದಾಳಿ ನಡೆಸಿ, ಅವರ ಉಪಕರಣಗಳಿಗೆ ಹಾನಿ ಎಸಗಿದ್ದಾರೆ.

- Advertisement -

ಬುರ್ಖಾದಲ್ಲಿ ಪ್ಯಾಲೆಸ್ತೀನಿಯನ್ನರ ಕೃಷಿ ಭೂಮಿಗಳಿಗೆ ಇಸ್ರೇಲಿ ಆಕ್ರಮಣಕಾರರು ಬೆಂಕಿ ಹಚ್ಚಿದ್ದಾರೆ ಎಂದೂ ವರದಿಯಾಗಿದೆ.

- Advertisement -