ವಿಶ್ವದ ಪ್ರಪ್ರಥಮ ಪಾರದರ್ಶಕ ಟಿವಿ ಬಿಡುಗಡೆಗೆ ಸಿದ್ಧತೆ

Prasthutha|

ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುವುದರಲ್ಲಿ ಚೀನೀಯರು ನಿಸ್ಸೀಮರು. ಈಗ ವಿಶ್ವದ ಪ್ರಪ್ರಥಮ ಪಾರದರ್ಶಕ ಟಿವಿಯನ್ನು ತಯಾರಿಸಿರುವ ಚೀನಾದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಕ ಎಕ್ಸೋಮಿ, ಆ ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.

ಪಾರದರ್ಶಕ ಟಿವಿ ಹೇಗಿರಬಹುದೆಂದು ಊಹಿಸಿದ್ದೀರಾ? ನಿಜಕ್ಕೂ ಊಹಿಸಲಾಗದ ವಸ್ತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಎಕ್ಸೊಮಿ, ಈಗ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಬಹುತೇಕ ಕನ್ನಡಿಯ ರೀತಿಯಲ್ಲೇ ಡಿಸ್ಪ್ಲೆ ಹೊಂದಿರುವ ಈ ಟಿವಿ, ಸದ್ಯಕ್ಕೆ ಹೊಸ ಮಾದರಿಯದ್ದಾಗಿದೆ.

- Advertisement -

ಎಂಐ ಟಿವಿ ಲಕ್ಸುರಿಯಸ್ ಟ್ರಾನ್ಸ್ ಪರೆಂಟ್ ಆವೃತ್ತಿ ಇದಾಗಿದ್ದು, ಸೆಲ್ಫ್ ಲುಮಿನಿಯಸ್ ಡಿಸ್ಪ್ಲೆಯನ್ನು ಹೊಂದಿದೆ.

ಇನ್ನು ಈ ವಿಭಿನ್ನ ಟಿವಿಯ ಬೆಲೆ ಚೀನಾದ ಕರೆನ್ಸಿ 49,999 ಆರ್ ಎಂಬಿಯಷ್ಟಿದೆ. ಅದು ಭಾರತದ ರುಪಾಯಿಗಳಲ್ಲಿ ಬರೋಬ್ಬರಿ 5.38 ಲಕ್ಷದಷ್ಟಾಗುತ್ತದೆ. ಆದರೆ, ಇದು ಯಾವಾಗ ಮಾರುಕಟ್ಟೆಗೆ ಆಗಮಿಸಲಿದೆ ಎಂಬುದು ಸ್ಪಷ್ಟವಿಲ್ಲ.

- Advertisement -