ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಿಂದ ಅಂಬಾನಿ ಹೊರಕ್ಕೆ | 4ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ಇಳಿಕೆ

Prasthutha|

ವಿಶ್ವದ ಅಗ್ರ ಸಿರಿವಂತರ ಪೈಕಿ 2020ರಲ್ಲಿ ಟಾಪ್-4ನೇ ಸ್ಥಾನದಲ್ಲಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಇದೀಗ ಟಾಪ್-10 ಪಟ್ಟಿಯಿಂದ ಹೊರಗುಳಿದಿದ್ದು, 11ನೇ ಸ್ಥಾನಕ್ಕೆ ಕುಸಿದಿದ್ದಾರೆ.

ವರ್ಷದ ಆರಂಭದಲ್ಲಿ, 6.62 ಲಕ್ಷ ಕೋಟಿ ರೂ. ಇದ್ದ ಅಂಬಾನಿ ಅವರ ಸಂಪತ್ತು ಇದೀಗ 5.63 ಲಕ್ಷ ಕೋಟಿ ರೂ.ಗೆ ಕುಸಿದಿದೆ. ರಿಲಯನ್ಸ್ ಷೇರುಗಳು ಶೇ.16 ರಷ್ಟು ನಷ್ಟಗೊಂಡಿದ್ದು, ಅಂಬಾನಿ ಅವರ ಸಂಪತ್ತು ಕರಗಲು ಕಾರಣವಾಗಿದೆ.

- Advertisement -

ಈ ವೇಳೆ ಬ್ಲೂಮ್ ಬರ್ಗ್ ಶ್ರೀಮಂತರ ಪಟ್ಟಿಯಲ್ಲಿ ಅಮೆಜಾನ್ ಸಿಇಒ ಜೆಫ್ ಬಿಜೋಸ್ ಮೊದಲ ಸ್ಥಾನದಲ್ಲಿದ್ದು, ಸ್ಪೇಸ್ ಎಕ್ಸ್ ನ ಸಂಸ್ಥಾಪಕ ಎಲೋನ್ ಮಾಸ್ಕ್ ಎರಡನೇ ಸ್ಥಾನ ಪಡೆದಿದ್ದರೆ, ಬಿಲ್ ಗೇಟ್ಸ್ ಮೂರನೇ ಸ್ಥಾನದಲ್ಲಿದ್ದಾರೆ.

- Advertisement -