ವಿವಿಪ್ಯಾಟ್‌ಗಳನ್ನು ಹ್ಯಾಕ್ ಮಾಡಬಹುದು: ಮಾಜಿ ಐಎಎಸ್ ಅಧಿಕಾರಿ

0
81

ಹೊಸದಿಲ್ಲಿ: ವಿದ್ಯುನ್ಮಾನ ಮತಯಂತ್ರಗಳ ಮೂಲಕ ಸುರಕ್ಷಿತವಾಗಿದ್ದ ಮತದಾನ ಪ್ರಕ್ರಿಯೆಯಲ್ಲಿ ವಿವಿಪ್ಯಾಟ್‌ಗಳನ್ನು ಸೇರಿಸುವ ಮೂಲಕ ಅದನ್ನು ದುರ್ಬಲಗೊಳಿಸಲಾಗಿದೆ. ಈ ಸಮಸ್ಯೆಯನ್ನು ತುರ್ತಾಗಿ ನಿವಾರಿಸುವ ಅಗತ್ಯವಿದೆ ಎಂದು ಜಮ್ಮು-ಕಾಶ್ಮೀರದಲ್ಲಿ ಹೇರಲಾಗಿರುವ ನಿರ್ಬಂಧಗಳನ್ನು ಉಲ್ಲೇಖಿಸಿ ಇತ್ತೀಚೆಗೆ ಸೇವೆಗೆ ರಾಜೀನಾಮೆ ಸಲ್ಲಿಸಿರುವ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಹೇಳಿದ್ದಾರೆ.

‘‘ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶವನ್ನು ನೀಡಕೂಡದು. ಇವಿಎಮ್‌ಗಳನ್ನು ನಾನು ಈಗಲೂ ಸಮರ್ಥಿಸುತ್ತೇನೆ. ಆದರೆ ವಿವಿಪ್ಯಾಟ್ ಅವುಗಳ ರಕ್ಷಾಕವಚದಲ್ಲಿ ರಂಧ್ರವನ್ನುಂಟು ಮಾಡಿದೆ ಮತ್ತು ಹ್ಯಾಕಿಂಗ್‌ಅನ್ನು ಸುಲಭವಾಗಿಸಿದೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಗೋಪಿನಾಥನ್ ವ್ಯಕ್ತಪಡಿಸಿರುವ ಕಳವಳಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗದ ವಕ್ತಾರರು ಈ ವಿಷಯದಲ್ಲಿ ಮಾಹಿತಿಗಳಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here