ವಿವಿಧ ಇಸ್ಲಾಮ್?

0
130

♦ಟಿ.ಕೆ. ಆಟ್ಟಕೋಯಾ

ಜನರನ್ನು ಅವರ ನಂಬಿಕೆ, ನಿಲುವುಗಳ ಆಧಾರದಲ್ಲಿ ಕುರ್‌ಆನ್ ಮತ್ತು ಪ್ರವಾದಿ ವಚನವು  ವಿಶ್ವಾಸಿಗಳು, ಸತ್ಯನಿಷೇಧಿಗಳು,ಕಪಟಿಗಳು ಎಂಬಿತ್ಯಾದಿ ಮೂರು ಗುಂಪುಗಳಾಗಿ ವರ್ಗೀಕರಿಸುತ್ತದೆ. ಯಾವುದೇ ಕಾಲ, ದೇಶದಲ್ಲಿರುವ ಮುಸ್ಲಿಮರು ಈ ಗುಂಪಿನೊಂದಿಗೆ ಯಾವ ರೀತಿಯಲ್ಲಿ ವ್ಯವಹರಿಸಬೇಕೆಂದು ಪ್ರವಾದಿ(ಸ) ನಿರ್ದೇಶಿಸಿದ್ದಾರೆ. ಇವೆಲ್ಲದರ ಹೊರತಾಗಿ ಹಲವು ರೂಪಭಾವಗಳೊಂದಿಗೆ ಇನ್ನಿತರ ಗುಂಪುಗಳೂ ಪ್ರತ್ಯಕ್ಷಗೊಳ್ಳುತ್ತದೆ. ದಶಲಕ್ಷ ಡಾಲರ್‌ಗಳನ್ನು ಸುರಿದು ಅಮೆರಿಕ ನಿರ್ಮಿಸುತ್ತಿರುವ ಒಂದು ಗುಂಪಿನ ಕುರಿತು ಪ್ರಾಜೆಕ್ಟ್ ರಿಫಾಮ್ಡ್ ಇಂಟರ್‌ನ್ಯಾಷನಲ್ (2005 ಮಾರ್ಚ್-ಎಪ್ರಿಲ್ ಸಂಚಿಕೆ) ಮ್ಯಾಗಝಿನ್‌ನಲ್ಲಿ ಬರೆದ ಲೇಖನದಲ್ಲಿ ಪರಿಚಯಿಸುತ್ತಿದ್ದಾರೆ. ಪಾಶ್ಚಾತ್ಯರು ಸುಧಾರಣಾವಾದಿ ಮುಸ್ಲಿಮರೆಂದು ಕರೆಯಲ್ಪಡುವ ಈ ಮಂದಿ ಮುಸ್ಲಿಮ್ ಸಮಾಜದ ಮಧ್ಯೆ ಬಿರುಕನ್ನು ಸೃಷ್ಟಿಸುತ್ತಿದ್ದಾರೆಂದೂ ಅವರು ಹೇಳುತ್ತಾರೆ.

19ನೇ ಶತಮಾನದಲ್ಲಿ ಬ್ರಿಟನ್, ಫ್ರಾನ್ಸಿನಲ್ಲಿ ಇಂತಹ ಮಂದಿಯನ್ನು ಸೃಷ್ಟಿಸುವ ಯೋಜನೆಗಳನ್ನು ಆವಿಷ್ಕರಿಸಲಾಯಿತು. ವಿವಿಧ ರೀತಿಯಲ್ಲಿ ಚಿಂತಿಸುವ, ಕಾರ್ಯವೆಸಗುವ  ವಿವಿಧ ರೀತಿಯ ಮುಸ್ಲಿಮರನ್ನು ಸೃಷ್ಟಿಸಿ ಇಸ್ಲಾಮಿನ ಏಕರೂಪ, ಏಕತಾನತೆಯನ್ನ್ನೂ ನಾಶಪಡಿಸುವುದು ಪಾಶ್ಚಾತ್ಯರ ಉದ್ದೇಶವಾಗಿತ್ತು. ವಿಶ್ವದ ಸಾರ್ವಕಾಲಿಕ, ವಿಶ್ವೋತ್ತರ ಮತ್ತು ಜಾಗತಿಕ ಸಮುದಾಯವಾಗಿರುವ ಮುಸ್ಲಿಮ್ ಸಮುದಾಯದ ಕುರಿತಾದ ಕಲ್ಪನೆಯನ್ನು ನಂದಿಸುವುದೇ ಅವರ ಗುರಿ. ಇಸ್ಲಾಮ್ ಒಂದಲ್ಲ ಹಲವು ಬಗೆಯೆಂದು ನಂಬುವಂತೆ ಮಾಡಿ ಆ ಮೂಲಕ ವೈಚಾರಿಕ ಸಮಗ್ರತೆ ಮತ್ತು ಚಿಂತನೆಯ ಪ್ರಭಾವವನ್ನು ಅವರು ಕುಗ್ಗಿಸಲು ಪ್ರಯತ್ನಪಡುತ್ತಿದ್ದಾರೆ. ಇಸ್ಲಾಮಿಗೆ ನಕಲುಗಳನ್ನೂ ಸೃಷ್ಟಿಸಿ ಅದರ ರಾಜಕೀಯ ಪ್ರಭಾವವನ್ನು ನಾಶ ಪಡಿಸುವುದು ಅವರೆಲ್ಲರ ಗುರಿ.

ಕಮ್ಯುನಿಸಂ ಪತನದ ನಂತರ ಮುಸ್ಲಿಮರನ್ನು ಗುರಿಯಾಗಿಸುವ ಯೋಜನೆಯನ್ನು ಅಮೆರಿಕಾ ಆವಿಷ್ಕರಿಸಿತು.

1992ರಲ್ಲಿ ರಿಚರ್ಡ್ ನಿಕ್ಸನ್ ಅಮೆರಿಕಾಗೆ ಈ ರೀತಿಯ ಸಲಹೆಯನ್ನು ನಿಡಿದರು. ಜಾಗತಿಕ ಶಕ್ತಿಯಾಗಿ ಕೇವಲ ಅಮೆರಿಕಾ ಮಾತ್ರವೇ ಇರುವ ಸನ್ನಿವೇಶದಲ್ಲಿ ನಾವು ಜೀವಿಸುತ್ತಿದ್ದೇವೆ. ಇದಕ್ಕನುಸಾರವಾಗಿ ಮಾತ್ರವೇ ನಮ್ಮ ವಿದೇಶಾಂಗ ನೀತಿ ಇರಬೇಕು. ಮುಸ್ಲಿಮರು ಏಕತೆಯಿಲ್ಲದ ಸಮುದಾಯವಾಗಿದ್ದಾರೆ. ಅವರನ್ನು ಪೋಣಿಸುವ ಯಾವುದೇ ದಾರಗಳಿಲ್ಲ. ಮೂಲಭೂತವಾದ, ತೀವ್ರಗಾಮಿತ್ವವಾದ, ಆಧುನೀಕವಾದ  ಈ ರೀತಿ ಮೂರು ಗುಂಪುಗಳಾಗಿ ಅವರು ಚದುರಿಹೋಗಿದ್ದಾರೆ. ಆದ್ದರಿಂದ ಆಧುನೀಕವಾದಿಗಳನ್ನು ಅಮೆರಿಕಾ ಬೆಂಬಲಿಸಬೇಕು ಆ ಮೂಲಕ ಅಮೆರಿಕಾಗೂ, ಅವರಿಗೂ ಪ್ರಯೋಜನ ಉಂಟಾಗುವುದು.

ಈ ಹಿಂದೆ ಕಮ್ಯುನಿಸಂ ಅಮೆರಿಕಾದ ಯಜಮಾನಿಕೆಗೆ  ಬೆದರಿಕೆಯಾಗಿತ್ತು. ಆದರೆ ಇಸ್ಲಾಮ್ ಅಮೆರಿಕಾದ ಯಜಮಾನಿಕೆಯ ವಿರುದ್ಧ ಎತ್ತುವ ಬೆದರಿಕೆಯು ಅದಕ್ಕಿಂತಲೂ ಮಿಗಿಲಾದುದುದು. ಆಯುಧಗಳಿಗೆ ಸೋಲಿಸಲು ಸಾಧ್ಯವಾಗದ ಶಕ್ತಿ ಇಸ್ಲಾಮಿಗಿದೆ. ಇಸ್ಲಾಮೀ ರಾಷ್ಟ್ರಗಳನ್ನು  ನಾಶಪಡಿಸಲು ಸಾಧ್ಯವಾದರೂ ಇಸ್ಲಾಮನ್ನು ನಾಶಪಡಿಸಲು ಅಮೆರಿಕಾಗೆ ಸಾಧ್ಯವಾಗಲಿಲ್ಲ. ಇಂತಹ ಸಂದರ್ಭದಲ್ಲಿ ಹಡಗಿನಲ್ಲಿ ಕಳ್ಳರನ್ನು ತುಂಬಿಸುವ ಉಪಾಯವನ್ನು ಅಮೆರಿಕಾ ಪ್ರಯೋಗಿಸುತ್ತಿದೆ.

ಸುಧಾರಣಾವಾದಿಗಳಾದ ಮುಸ್ಲಿಮರು ಅಥವಾ ಮೋಡರ್ನಿಸ್ಟ್ ಗಳು ಏನು ಮಾಡುತ್ತಾರೆ? ಅವರು ಯಾವ ರೀತಿಯಲ್ಲಿ ಅಮೆರಿಕಾದ ಗುಲಾಮಗಿರಿಯನ್ನು ಮಾಡುತ್ತಿದ್ದಾರೆ? ಶರೀಅತ್, ಜಿಹಾದ್, ಕೊನೆಗೆ ಇಸ್ಲಾಮಿನ ಸಿಂಧುತ್ವ ಮತ್ತು ಅಧಿಕೃತತೆಯನ್ನೇ ಸಂಶಯದಿಂದ ನೋಡುವಂತೆ ಮಾಡುವ ವಾಚಾಳಿತನ ಇರುವ ಮಂದಿ ಅವರ ಗುಂಪಿನಲ್ಲಿದ್ದಾರೆ. ಹದೀಸಿನ ಮೇಲೆ ಕೈಯಾಡಿಸುವ ಮಂದಿಯೂ ಅವರ ಗುಂಪಿನಲ್ಲಿದ್ದಾರೆ. ಇನ್ನು ಕೆಲವರ ಮಾತು ಕುರ್‌ಆನಿನ ಸಮಕಾಲೀನ ಓದುವಿಕೆಯ ಕುರಿತಾಗಿರುತ್ತದೆ. ಇನ್ನು ಕೆಲವರು ಸಂಶೋಧನೆಯ ವೇಷದಲ್ಲಿದ್ದಾರೆ. ಇಜ್ತಿಹಾದ್, ಇಸ್ಲಾಹ್, ತಜ್‌ದೀದ್ ಮುಂತಾದ ಇಸ್ಲಾಮಿನ ಸಂಕೇತಗಳನ್ನು ಈ ಮಂದಿ ದುರುಪಯೋಗಪಡಿಸುತ್ತಿದ್ದಾರೆ. ಅವರ ಬಳಿ ವ್ಯಾಖ್ಯಾನಗಳಿಲ್ಲ, ಏನಿದ್ದರೂ ದುರ್ವಾಖ್ಯಾನಗಳು ಮಾತ್ರವೇ ಇದೆ. ಪುನರ್‌ವಾಚನದ ಹೆಸರಿನಲ್ಲಿ ಮಾತಿನ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಲಿಬರಲ್, ಮೋಡರ್ನ್ ಮೊದಲಾದ ಮೇಲುಡುಗೆಯನ್ನು ಧರಿಸಿದ ಈ ಮಂದಿಯಲ್ಲಿ ಹೆಚ್ಚಿನವರು ಪಾಶ್ಚಾತ್ಯರು ನೇರವಾಗಿ ನಿಯುಕ್ತಿಗೊಳಿಸಿದ ಅವರ ಬಾಡಿಗೆದಾರರು ಇನ್ನು ಕೆಲವರು ಅವರ ಏಜೆಂಟರು. ಇವೆಲ್ಲದರ ಮಧ್ಯೆ ಪಾಶ್ಚಾತ್ಯರ ವಂಚನೆಗೆ ಬಲಿಯಾದವರು ಹಲವರಿದ್ದಾರೆ. ಕೆಲವರು ಅನುಕೂಲಕ್ಕಾಗಿ, ಸ್ವಾರ್ಥಕ್ಕಾಗಿ ಮತ್ತು ನೆಮ್ಮದಿಗಾಗಿ ಮೋಡರ್ನಿಸಂನ ಟೋಪಿಯನ್ನು ಧರಿಸಿದವರು. ಹೇಗಿದ್ದರೂ ಅವರೆಲ್ಲರೂ ಪಾಶ್ಚಾತ್ಯರಿಗೆ ಹೊಂದುವ ಧರ್ಮವೊಂದನ್ನು ನೇಯುತ್ತಿರುವವರು. ಇಸ್ಲಾಮಿನ ಪರಂಪರೆ, ಚೈತನ್ಯ, ಶಕ್ತಿ ಕಾಂತಿ ಇಲ್ಲದ ಧರ್ಮವೊಂದನ್ನು ಇಸ್ಲಾಮಿನ ಹೆಸರಿನಲ್ಲಿ ಅವರು ಪ್ರಚಾರಪಡಿಸುತ್ತಾರೆ. ಅಂತಹ ಇಸ್ಲಾಮ್‌ಗೆ ನಿಜವಾದ ಇಸ್ಲಾಮಿನ ರಾಜಕೀಯ ಮತ್ತು ಸಾಮಾಜಿಕ ಮಾನದಂಡ ವಿಧಾನಗಳು ಇರಲಾರವು. ಉಮ್ಮತ್‌ನ ಸಂಘಟಿತ ದೌತ್ಯಗಳಲ್ಲಿ ಆ ಇಸ್ಲಾಮ್‌ಗೆ ಯಾವುದೇ ಕೊಡುಗೆಗಳನ್ನು ನೀಡಲು ಸಾಧ್ಯವಾಗದು.

ಸಂಶೋಧನೆ ಮತ್ತು ವ್ಯಾಖ್ಯಾನದ ಪುನರಾಖ್ಯಾನದ ಹೆಸರಿನಲ್ಲಿ ರಂಗಪ್ರವೇಶ ನಡೆಸುವ ಮಂದಿಯ ಬಗ್ಗೆ ಪರಾಮರ್ಶಿಸುವ ವೇಳೆ ಸುಧಾರಣಾವಾದಿಗಳನ್ನು ಸತ್ಯಸಂಧರೆಂದೂ, ನಕಲಿಗಳೆಂದೂ ರಫೀಖ್ ರಮದಾನ್ ಬೇರ್ಪಡಿಸುತ್ತಾರೆ. ಕುರ್‌ಆನ್, ನಬಿಚರ್ಯೆ ಮತ್ತು ಇತಿಹಾಸವನ್ನು ದುರ್ವಾಖ್ಯಾನಗೊಳಿಸಿ ಮಾಯೆಗಳನ್ನು ಸೃಷ್ಟಿಸಿ ಜನರನ್ನು ಇಸ್ಲಾಮಿನ ಮೂಲಭೂತ ವಿಶ್ವಾಸಗಳಿಂದ ದೂರ ಕೊಂಡೊಯ್ದು ಇಸ್ಲಾಮಿನ ಬೆಳವಣಿಗೆಯನ್ನು ಕುಗ್ಗಿಸುವ ಪ್ರಯತ್ನಗಳನ್ನು ಮುಸ್ಲಿಮ್‌ರ ಮಧ್ಯೆ ಪಾಶ್ಚಾತೀಕರಣಗೊಂಡ ಸುಧಾರಣಾವಾದಿಗಳೂ, ಸ್ವತಂತ್ರವಾದಿಗಳೂ ಮಾಡುತ್ತಿದ್ದಾರೆ. ಅವರ ಕುತಂತ್ರಗಳನ್ನು ಬಹಿರಂಗಪಡಿಸಲು ಮತ್ತು ಜನರನ್ನು ನೇರದಾರಿಗೆ ತರಲು ನಮಗೆ ಸಾಧ್ಯವಾಗಬೇಕು. ಡಾ.ಮುಝಪ್ಫರ್ ಇಖ್ಬಾಲ್‌ರವರ ಲೇಖನವು ಈ ರೀತಿ ಕೊನೆಗೊಳ್ಳುತ್ತದೆ. ಅವರು ಇಸ್ಲಾಮನ್ನು ಘೋಷಿಸುತ್ತಾರೆ. ಆದ್ದರಿಂದ ಅವರನ್ನು ಸತ್ಯನಿಷೇಧಿಗಳೆಂದು ನಮಗೆ ಕರೆಯಲಾಗದು. ಪ್ರವಾದಿ(ಸ) ಕಪಟವಿಶ್ವಾಸಿಗಳೊಂದಿಗೂ ಸಹಿಷ್ಣುತೆಯಿಂದ ವ್ಯವಹರಿಸಿದರು. ಅವರ ಕುರಿತಾದ ತೀರ್ಪು ಅಲ್ಲಾಹನಿಗೆ ಬಿಟ್ಟುಕೊಟ್ಟರು. ಈ ವಿಚಾರದಲ್ಲಿ ನಾವೆಲ್ಲರೂ ಪ್ರವಾದಿ ಮಾದರಿಯಲ್ಲೇ ಮುಂದುವರಿಯಬೇಕಾಗಿದೆ.

LEAVE A REPLY

Please enter your comment!
Please enter your name here