ವಿವಾದಿತ ಗೋಡೆ ಬರಹ ಪ್ರಕರಣ | ಇಬ್ಬರ ಬಂಧನ

Prasthutha|

ಮಂಗಳೂರು: ನಗರದಲ್ಲಿ ಕೆಲ ದಿನಗಳ ಹಿಂದೆ ಎರಡು ಕಡೆಗಳಲ್ಲಿ ಕಂಡುಬಂದ ವಿವಾದಿತ ಗೋಡೆಬರಹ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ತೀರ್ಥಹಳ್ಳಿ ಮುಹಮ್ಮದ್ ಶಾಹೀಕ್ ಹಾಗೂ ಮಾಝ್ ಮುನೀರ್ ಬಂಧಿತರಾದ ಆರೋಪಿಗಳಾಗಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ‌ ಮಾತನಾಡಿದ ನಗರ ಪೊಲೀಸ್ ಆಯುಕ್ತ ವಿಕಾಸ್‌ ಕುಮಾರ್, ಬಂಧಿತ ಇಬ್ಬರು ಆರೋಪಿಗಳು ಸೇರಿ ಈ ಕೃತ್ಯ ನಡೆಸಿದ್ದಾರೆ. ಎಲ್ಲರಿಗೂ ಕಾಣುವ ಪ್ರದೇಶದಲ್ಲಿ ಬರಹ ಬರೆದಿದ್ದು,  ಪ್ರಚಾರಕ್ಕಾಗಿ ಈ ಕೃತ್ಯ ನಡೆಸಿದ್ದಾರೆ ಎಂದು ಹೇಳಿದರು.

ಶಾಹೀಕ್ ಮತ್ತು ಮುನೀರ್ ಮೊದಲಿನಿಂದಲೂ ಸ್ನೇಹಿತರಾಗಿದ್ದು, ಶಾಹೀರ್ ಸೇಲ್ಸ್‌ ಮನ್ ವೃತ್ತಿಯಲ್ಲಿದ್ದ ಮತ್ತು ಮುನೀರ್ ನಗರದಲ್ಲಿ ಬಿ.ಟೆಕ್ ವಿದ್ಯಾರ್ಥಿಯಾಗಿದ್ದಾನೆ ಎಂದು ತಿಳಿಸಿದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆಯು ಕೇಂದ್ರ ಉಪ ವಿಭಾಗದ ಎಸಿಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿತ್ತು. ಗೋಡೆ ಬರಹಕ್ಕೆ ಸಂಬಂಧಿಸಿದಂತೆ ಮಂಗಳೂರು ಪೂರ್ವ (ಕದ್ರಿ), ಮಂಗಳೂರು ಪೂರ್ವ (ಬಂದರ್) ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.

- Advertisement -