ವಿಭಜನ ರಾಜಕೀಯದಲ್ಲಿ ಬಿಜೆಪಿ ಟ್ರಂಪ್ ಗಿಂತ ಮುಂದೆ : ಬರಾಕ್ ಒಬಾಮ

Prasthutha|

ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಧರ್ಮ ಮತ್ತು ವರ್ಣಭೇದ ನೀತಿಯ ರಾಜಕೀಯದ ಬಗ್ಗೆ ತನಗೆ ಎಚ್ಚರಿಕೆ ನೀಡಿದ್ದರು ಎಂದು ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ. ಒಬಾಮಾ ಅವರ ರಾಜಕೀಯ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್’ ಎಂಬ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಕಳೆದ ವಾರ ಭಾರತದ ಪ್ರಮುಖ ಮಾಧ್ಯಮಗಳ ಮುಖ್ಯಾಂಶಗಳಲ್ಲಿ ಒಬಾಮಾ ಅವರ ವಿವಿಧ ಕಾಂಗ್ರೆಸ್ ನಾಯಕರ ಕುರಿತ ಉಲ್ಲೇಖದ ಬಗ್ಗೆ ಹೆಚ್ಚು ಸುದ್ದಿಯಾಗಿತ್ತು. ಮನಮೋಹನ್ ಸಿಂಗ್ ಅವರು “ಅಸಾದಾರಣ ಬುದ್ಧಿವಂತಿಕೆಯ ಮನುಷ್ಯ” ಎಂದು ಈ ಪುಸ್ತಕದಲ್ಲಿ ಹೇಳಿದ್ದಾರೆ. ಅದೇ ರೀತಿ ಸೋನಿಯಾ ಗಾಂಧಿ ಅತ್ಯಂತ ಸಮರ್ಥ ಮತ್ತು ಶಕ್ತಿಯುತ ರಾಜಕಾರಣಿ, ಆದರೆ ರಾಹುಲ್ ಗಾಂಧಿ ಅವರು ಸಬ್ಜೆಕ್ಟ್ ಬಗ್ಗೆ ಯಾವುದೇ ಅಭಿರುಚಿ ಅಥವಾ ಉತ್ಸಾಹವಿಲ್ಲದ ಮಗುವಿನಂತೆ ಎಂದು ಅವರು ಪುಸ್ತಕದಲ್ಲಿ ಹೇಳುತ್ತಾರೆ.

ಒಬಾಮಾ ಅವರ ಉಲ್ಲೇಖವನ್ನು ಕಾಂಗ್ರೆಸ್ಸಿನ ಮತ್ತೊಂದು ವೈಫಲ್ಯ ಎಂದು ಬಿಜೆಪಿ ಚಿತ್ರಿಸಲು ಪ್ರಯತ್ನಿಸುತ್ತಿದೆ. ಆದರೆ ರಾಹುಲ್ ಗಾಂಧಿಯವರ ಬಗ್ಗೆ ಒಬಾಮಾ ಉಲ್ಲೇಖವನ್ನು ವಿರೋಧ ಪಕ್ಷದ ಬೆಂಬಲಿಗರು ತೀವ್ರವಾಗಿ ಟೀಕಿಸಿದ್ದಾರೆ. ಆದರೆ 2008- 2012ರ ಅವಧಿಯನ್ನು ಉಲ್ಲೇಖಿಸುವಾಗ ವಿವಿಧ ಜನಾಂಗಗಳು ವಾಸಿಸುವ ಪ್ರಜಾಪ್ರಭುತ್ವ ರಾಷ್ಟ್ರಗಳು ಎದುರಿಸುತ್ತಿರುವ ಸವಾಲನ್ನು ಒಬಾಮಾ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ವಿಭಜನ ರಾಜಕೀಯ ಮತ್ತು ಕೋಮು ರಾಜಕೀಯದಲ್ಲಿ ಬಿಜೆಪಿಯು ಟ್ರಂಪ್ ಗಿಂತ ಮುಂದೆ ಇದೆ ಎಂದು ಒಬಾಮಾ ಹೇಳುತ್ತಾರೆ. ಭಾರತ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದ್ದರೂ, ಪ್ರಸ್ತುತ ವಿಶ್ವದ ಸ್ಥಿತಿ ಭಾರತದಲ್ಲಿಯೂ ನಿರುದ್ಯೋಗದ ಸಮಸ್ಯೆಯನ್ನು ಸೃಷ್ಟಿಸಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

- Advertisement -