ವಿದ್ಯಾರ್ಥಿ ವೇತನಕ್ಕೆ ಆದಾಯ ಮಿತಿ : ವೆಲ್ಫೇರ್ ಪಾರ್ಟಿ ವಿರೋಧ

Prasthutha: February 26, 2021

ಬೆಂಗಳೂರು : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸರ್ಕಾರ ವಿದ್ಯಾರ್ಥಿ ವೇತನಕ್ಕೆ 2.5 ಲಕ್ಷದ ಆದಾಯ ಮಿತಿ ಹಾಕಿರುವುದಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವಿರೋಧ ವ್ಯಕ್ತಪಡಿಸಿದೆ.

ಈ ಬಗ್ಗೆ ಪ್ರಕಟಣೆ ನೀಡಿರುವ ವೆಲ್ಫೇರ್  ಪಾರ್ಟಿಯ ರಾಜ್ಯಾಧ್ಯಕ್ಷರು ತಾಹಿರ್ ಹುಸೇನ್, ಆದಾಯ ಮಿತಿಯ ಕಾರಣ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸೌಕರ್ಯಗಳಿಂದ ವಂಚಿತರಾಗಲಿದ್ದಾರೆ. ಸಾಮಾಜಿಕ, ಆರ್ಥಿಕ ಹಿಂದುಳಿಯುವಿಕೆ ಹಾಗೂ ಜೀವನ ನಿರ್ವವಣೆ ವೆಚ್ಚವನ್ನು ವಿದ್ಯಾರ್ಥಿ ವೇತನಕ್ಕೆ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ಫೆಲೋಶಿಪ್ ಹಣದಲ್ಲಿ ಶೇ 70 ರಷ್ಟು ಕಡಿತ ಮಾಡಿದ ಬೆನ್ನಲ್ಲೇ, ವಿದ್ಯಾರ್ಥಿ ವೇತನಕ್ಕೆ ಆದಾಯ ಮಿತಿ ಹಾಕಲಾಗಿದೆ.ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಕೊರೋನ್ ಅಬ್ಬರಕ್ಕೆ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದು ಇನ್ನೂವರೆಗೂ ಸರಕಾರ ಸರಿಯಾದ ರಿತಿಯಲ್ಲಿ ಜನರಿಗೆ ಸಹಾಯ ಮಾಡಿಲ್ಲ. ಇಂತಹ ಸಂಧರ್ಭದಲ್ಲಿ ಸರಕಾರ ಶಾಸಕರಿಗೆ ಸಂಸದರಿಗೆ ಕಾರು ಖರಿದಿಗೋಸ್ಕೆರ ಅನಿವಾರ್ಯವಲ್ಲದೇ ವಿಶೇಷ ಸವಲತ್ತಿಗಾಗಿ 1 ಲಕ್ಷ ರೂ ಏರಿಕೆ ಮಾಡಿದ್ದು ದುರದುಷ್ಟಕರ ಸಂಗತಿ. 28 ಸಂಸದರು 32 ಸಚಿವರನ್ನೋಳಗೊಂಡ ಒಟ್ಟು 60 ಕಾರು ಖರಿದಿಗೆ 13 ಕೊಟಿ 80 ಲಕ್ಷ ರೂ ಮೊತ್ತವಾಗಿದೆ. ಏಕೆಂದರೆ ಒಂದು ವರ್ಷದಿಂದ ಸಾರಿಗೆ ನೌಕರರಿಗೆ, ಶಾಲಾ ಶಿಕ್ಷಕರಿಗೆ ,ಬಿಸಿ ಊಟ ತಯಾರಿಸುವ ತಾಯಂದಿರಿಗೆ ಜನಸಾಮಾನ್ಯರಿಗೆ ಇನ್ನೂ ಹಲವಾರು ಸರಕಾರದಿಂದ ಬರಬೆಕಾದ ಹಣವನ್ನು ಸರಕಾರ ನಿಡದೇ ಜನರ ಆರ್ಥೀಕ ಪರಿಸ್ಥಿತಿಯನ್ನು ಮತ್ತಷ್ಟು ಪಾತಾಳಕ್ಕೆ ತಳ್ಳಿ ತನ್ನ ಇನ್ನೂ ಹೆಚ್ಚಿನ ಅನೂಕೂಲಗೋಸ್ಕರ ಕಾರಿನ ಖರಿದಿ ಬೆಲೆ ಏರಿಸಿದ್ದು ನ್ಯಾಯ ಸಮ್ಮತವೇ? ಮತ್ತು ಕೊವಿಡ್ ಯೋಧರು ಕರ್ತವ್ಯ ಸಂಧರ್ಭದಲ್ಲಿ ತಮ್ಮ ಪ್ರಾಣವನ್ನೆ ತ್ಯಾಗ ಮಾಡಿದ್ದು ಅವರ ಕುಟುಂಬಗಳಿಗೂ ಇನ್ನೂ ಕೊವಿಡ್ ವಿಮೆ ತಲುಪಿಸದೆ ಅವರೊಂದಿಗೆ ಅನ್ಯಾಯ ಮಾಡಿದ ಸರಕಾರವು  ತಾವುಗಳು ಐಷಾರಾಮಿ ಕಾರಿನಲ್ಲಿ ಪ್ರಯಾಣಿಸಲು 22 ಲಕ್ಷದಿಂದ 23 ಲಕ್ಷ ಏರಿಕೆ ಮಾಡಿ ಜನರ ಜೋತೆ ಚಿಲ್ಲಾಟ ಆಡುತ್ತಿದೆ ಎಂದು ತಾಹಿರ್ ಹುಸೇನ್ ಹೇಳಿದ್ದಾರೆ.

ಜನರ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ನಿಡಲು ಮುಂದಾಗದೇ ಸರಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಕಾರಣ ನಿಡಿ ತಮಗೆ ಬೇಕಾದ ರಿತಿಯಲ್ಲಿ ಸವಲತ್ತುಗಳು ಪಡೆದುಕೋಳ್ಳತ್ತಿರುವದು ಜನವಿರೋಧಿ ಸರಕಾರದ ನಡೆಯಾಗಿದೆ. ಎಷ್ಟೋ ಕುಟುಂಬಗಳು ಈಗಲೂ ಒಪ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದೆ.ಆದಾಯ ಮಿತಿಯನ್ನು ಕೂಡಲೇ ಕೈಬಿಡದಿದ್ದರೆ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!