ವಿದೇಶಿಯರಿಗಾಗಿ ಆನ್ ಲೈನ್ ಉದ್ಯೋಗ ವೆಬ್ ಸೈಟ್ ಪರಿಷ್ಕರಿಸಿದ ಕತಾರ್ ಚೇಂಬರ್

Prasthutha News


ಕೋವಿಡ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡ ವಿದೇಶಿಯರಿಗೆ ಹೊಸ ಉದ್ಯೋಗಗಳನ್ನು ಹುಡುಕಲು ಕತಾರ್ ಚೇಂಬರ್ jobs.qatar chamber.com ಎಂಬ ಆನ್ ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಈ ವೆಬ್ ಸೈಟನ್ನು ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಸಚಿವಾಲಯದ ವೆಬ್ ಸೈಟ್ ಗೆ ಲಿಂಕ್ ಮಾಡಿ ಹೊಸ ಸೇವೆಗಳೊಂದಿಗೆ ನವೀಕರಿಸಲಾಗಿದೆ.
ಖಾಸಗಿ ಕಂಪೆನಿಗಳು ಸಹ ಪೋರ್ಟಲ್ ನಲ್ಲಿ ನೊಂದಾಯಿಸಿಕೊಳ್ಳುವಂತೆ ಪೋರ್ಟಲ್ ಅನ್ನು ನವೀಕರಿಸಲಾಗಿದೆ. ಹೊಸ ಉದ್ಯೋಗಿಗಳನ್ನು ಹುಡುಕುವ ಕಂಪೆನಿಗಳು ವೆಬ್ ಸೈಟಿಗೆ ಲಾಗ್ ಇನ್ ಆಗಿ ಈ ಲಿಂಕ್ ಮೂಲಕ ನೊಂದಾಯಿಸಿಕೊಳ್ಳಬಹುದು. ನೋಂದಣಿ ಪೂರ್ಣಗೊಂಡ ನಂತರ ನಿಮ್ಮ ಸ್ವಂತ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಪಡೆಯುತ್ತೀರಿ.


ಇದರೊಂದಿಗೆ ಕಂಪೆನಿಗಳು ಪೋರ್ಟಲ್ ನಲ್ಲಿ ನೊಂದಾಯಿತ ಕಾರ್ಮಿಕರಲ್ಲಿ ಸೂಕ್ತವಾದವರನ್ನು ಆಯ್ಕೆ ಮಾಡಬಹುದು. ನೋಂದಣಿ ಪೂರ್ಣಗೊಂಡ ನಂತರ ಈ ಕಂಪೆನಿಯ ವಿವರಗಳು ಕಾರ್ಮಿಕ ಸಚಿವಾಲಯಗಳಿಗೆ ಲಭ್ಯವಾಗಲಿದೆ ಮತ್ತು ಕಂಪೆನಿಯು ಯಾವುದೇ ಕಾರ್ಮಿಕ ಉಲ್ಲಂಘನೆ ಮಾಡಿದೆಯೇ ಎಂದು ಸಚಿವಾಲಯವು ಪರಿಶೀಲಿಸಲು ಸಾಧ್ಯವಾಗುತ್ತದೆ. ಉಲ್ಲಂಘನೆ ಮಾಡಿದ ಕಂಪೆನಿಗೆ ಹೊಸ ಕಾರ್ಮಿಕರನ್ನು ಈ ವೆಬ್ ಸೈಟ್ ಮೂಲಕ ಸ್ವೀಕರಿಸಲು ಸಾಧ್ಯವಾಗದು.


Prasthutha News