ವಾಮಾಚಾರದ ಆರೋಪ: 80 ವರ್ಷದ ವೃದ್ಧನ ಜೀವಂತ ಸಮಾಧಿ

ವೆಸ್ಟ್ ಗ್ಯಾರೋ ಹಿಲ್ : ಮೇಘಾಲಯದ ವೆಸ್ಟ್ ಗ್ಯಾರೋ ಹಿಲ್ ನಲ್ಲಿ ವಾಮಾಚಾರ ನಡೆಸುತ್ತಿದ್ದಾನೆ ಎಂಬ ಅನುಮಾನದಿಂದ 80 ವರ್ಷದ ವೃದ್ಧನನ್ನು ಜೀವಂತ ಸಮಾಧಿ ಮಾಡಿದ ಘಟನೆ ನಡೆದಿದೆ. ಮೋರಿಸ್ ಮಂಗಲ್ ಎಂಬರು ಕೊಲೆಗೀಡಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ.

- Advertisement -

ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಐದು ಅಡಿ ಆಳದ ಗುಂಡಿಯಿಂದ ಶವವನ್ನು ಹೊರತೆಗೆದಿದ್ದಾರೆ. ಕೈಕಾಲುಗಳನ್ನು ಕಟ್ಟಿಹಾಕಿ, ಕಾಲುಗಳನ್ನು ಗೋಣಿಚೀಲಗಳಲ್ಲಿ ಸುತ್ತಿ, ಮುಖವನ್ನು ಮುಚ್ಚಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೋರಿಸ್, ವಾಮಾಚಾರ ಕಲಿತು ತನ್ನ ಸೊಸೆಯ ವಿರುದ್ಧ ಮಂತ್ರ ಜಪಿಸಿದರೆಂದು ಆರೋಪಿಸಿ ಅವರನ್ನು ಜೀವಂತವಾಗಿ ಸಮಾಧಿ ಮಾಡಲಾಗಿದೆ.

- Advertisement -