ರೌಡಿ ಶೀಟರ್ ಸುರೇಂದ್ರ ಬಂಟ್ವಾಳ ಹತ್ಯೆ

ಬಂಟ್ವಾಳ: ಬಲಪಂಥೀಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ  ರೌಡಿ ಶೀಟರ್, ಚಾಲಿ ಪೋಲಿಲು ಚಿತ್ರದ ನಟ ಸುರೇಂದ್ರ ಶೆಟ್ಟಿ ಬಂಟ್ವಾಳ್ ರನ್ನು ಬುಧವಾರದಂದು ಹತ್ಯೆ ಮಾಡಲಾಗಿದೆ.

2018ರಲ್ಲಿ ಬಡ್ಡಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕತ್ತಿಯಿಂದ ಹಲ್ಲೆ ಮಾಡಿದ ಆರೋಪ ಸುರೇಂದ್ರರ ಮೇಲಿತ್ತು.

- Advertisement -

ಸುರೇಂದ್ರ ಇತರರೊಂದಿಗೆ ಸೇರಿ ಜೂ.11ರಂದು ರೆಸ್ಟಾರೆಂಟ್ ವೊಂದರಲ್ಲಿ ಪುಷ್ಪರಾಜ, ಗಣೇಶ್, ಚರಣ್ ಮತ್ತು ಇತರರ ಮೇಲೆ ಹಲ್ಲೆ ನಡೆಸಿದ್ದರು. ಜೂನ್ 10ರಂದು ಸೆಲೂನ್ ವೊಂದರಲ್ಲಿ ನಡೆದ ದಾಳಿಗೆ ಪ್ರತಿಯಾಗಿ ಬಜರಂಗದಳ ಕಾರ್ಯಕರ್ತ ಭುವಿತ್ ಶೆಟ್ಟಿ ಗ್ಯಾಂಗ್ ಮೇಲೆ ಈ ದಾಳಿ ನಡೆದಿತ್ತು ಎನ್ನಲಾಗಿದೆ. ಜೂನ್ 11ರ ದಾಳಿಯ ವೀಡಿಯೊ ವೈರಲ್ ಆಗಿತ್ತು.