January 18, 2021

ರೋಹಿತ್ ವೆಮುಲಾನ ಸಾಂಸ್ಥಿಕ ಹತ್ಯೆಗೆ 5 ವರುಷ | ಇನ್ನೂ ನ್ಯಾಯದ ನಿರೀಕ್ಷೆಯಲ್ಲಿ ಕುಟುಂಬ

ರೋಹಿತ್ ವೆಮುಲಾನ ಸಾವಿನ ಘಟನೆಗೆ ಐದು ವರ್ಷ ತುಂಬಿದ್ದು, ಆತನ ಕುಟುಂಬವು ಇನ್ನೂ ನ್ಯಾಯದ ನಿರೀಕ್ಷೆಯಲ್ಲಿಯೇ ಕಾಲ ಕಳೆಯುತ್ತಿದೆ. ಇದೇ ವೇಳೆ ಆತನ ಸಹೋದರ ರಾಜಾ ತನ್ನ ಕಾನೂನು ಪದವಿಯನ್ನು ವೇಮುಲಾನಿಗೆ ಸಮರ್ಪಿಸುತ್ತಾ, ದಲಿತರ ಹಕ್ಕುಗಳಿಗಾಗಿ ಹೋರಾಡುವುದಾಗಿ ಘೋಷಿಸಿದ್ದಾರೆ.

ಹೈದರಾಬಾದ್ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೆಮುಲಾ ಐದು ವರ್ಷ ಮೊದಲು ಅಂದರೆ 2016ರ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದ. 26ರ ಹರೆಯದ ದಲಿತ ವಿದ್ಯಾರ್ಥಿಯಾಗಿದ್ದ ಆತನ ಸಾವಿನಿಂದ ಇಡೀ ದೇಶದಲ್ಲಿ ಆಂದೋಲನದ ವಾತಾವರಣ ನಿರ್ಮಾಣವಾಗಿತ್ತು. ಇದನ್ನು ಜನರು ಸಾಂಸ್ಥಿಕ ಹತ್ಯೆ ಎಂದು ಕರೆದಿದ್ದರು.

ಆತ್ಮಹತ್ಯೆಗೂ ಮೊದಲು ರೋಹಿತ್ ವೆಮುಲಾ ಬಿಟ್ಟು ಹೋಗಿದ್ದ ಆತ್ಮಹತ್ಯೆ ಪತ್ರವು ಬಹಳ ಮಾರ್ಮಿಕವಾಗಿತ್ತು. ಏಳು ತಿಂಗಳುಗಳಿಂದ ಫೆಲೋಶಿಪ್ ಹಣವು ದೊರಕಿರಲಿಲ್ಲ ಮತ್ತು ಹಿಂದುತ್ವವಾದಿ ಸಂಘಟನೆಗಳ ವಿದ್ಯಾರ್ಥಿಗಳು ಮತ್ತು ವೈಸ್ ಚಾನ್ಸಲರ್ ತನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದರು ಎಂದು ಆತ ಪತ್ರದಲ್ಲಿ ಬರೆದುಕೊಂಡಿದ್ದ.

ರೋಹಿತ್ ನ ತಾಯಿ ರಾಧಿಕಾ ವೇಮುಲಾ ಇಂದೂ ಕೂಡ ತನ್ನ ಪುತ್ರನನ್ನು ನೆನೆದುಕೊಂಡು ಭಾವುಕರಾಗುತ್ತಾರೆ. ರೋಹಿತ್ ನಿಗೆ ನ್ಯಾಯ ದೊರಕಿಸಲು ಮಾತ್ರವಲ್ಲ, ದೌರ್ಜನ್ಯ ಎದುರಿಸುವ ಎಲ್ಲರಿಗಾಗಿ ಹೋರಾಡುವ ನಿಟ್ಟಿನಲ್ಲಿ  ತನ್ನ ಮಗ ರಾಜಾನಿಗೆ ಕಾನೂನು ಪದವಿ ಕಲಿಸಿ ಸಮಾಜಕ್ಕೆ ಸಮರ್ಪಿಪಿಸಿದ್ದೇನೆ ಎಂದು ರಾಧಿಕ ವೇಮುಲಾ ಹೇಳುತ್ತಾರೆ.

ಶೋಷಿತ, ದಮನಿತ ಸಮುದಾಯಗಳ ಧ್ವನಿಯಾಗಿರುವ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಮಿಡಿಯುವ ಪ್ರಸ್ತುತ ಪಾಕ್ಷಿಕಕ್ಕೆ ಚಂದಾದಾರಾಗಿರಿ. ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ