ರೋಹಿಂಗ್ಯಾ ನಿರಾಶ್ರಿತರಿಗೆ ಆಹಾರ ಪೂರೈಸಿದ ಹೋಟೆಲ್ ಗಳ ವಿರುದ್ಧ ಹಿಂದುತ್ವವಾದಿಗಳ ಬೆದರಿಕೆ

Prasthutha|


ಹೊಸದಿಲ್ಲಿ : ನವರಾತ್ರಿ ಆಚರಣೆಯ ಅಂಗವಾಗಿ ರೋಹಿಂಗ್ಯಾ ನಿರಾಶ್ರಿತರಿಗೆ ಆಹಾರವನ್ನು ವಿತರಿಸಿದ ಹೋಟೆಲ್ ಗಳಿಗೆ ಹಿಂದುತ್ವವಾದಿಗಳು ಬೆದರಿಕೆ ಹಾಕಿದ್ದಾರೆ. ದೆಹಲಿಯ ಜಸೋಲಾ ಪ್ರದೇಶದ ಮೂರು ಹೋಟೆಲ್ ಗಳು ಹಿಂದುತ್ವವಾದಿಗಳಿಂದ ಸೈಬರ್ ದಾಳಿ ಮತ್ತು ಬೆದರಿಕೆಗಳನ್ನು ಎದುರಿಸುತ್ತಿವೆ. ರೋಹಿಂಗ್ಯಾ ನಿರಾಶ್ರಿತರಿಗೆ ಆಹಾರ ವಿತರಣೆಯ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಡಿದಾಗ ಸೈಬರ್ ದಾಳಿ ಪ್ರಾರಂಭವಾಗಿದೆ.
ನವರಾತ್ರಿಯ ಅಂಗವಾಗಿ ದೆಹಲಿಯ ಹೋಟೆಲ್ ಗಳು ರೋಹಿಂಗ್ಯಾ ನಿರಾಶ್ರಿತರಿಗೆ ಆಹಾರವನ್ನು ನೀಡುತ್ತಿದೆ ಎಂದು ಎನ್ಐಎ ಸುದ್ದಿ ಸಂಸ್ಥೆ ನೀಡಿದ ಸುದ್ದಿಯ ಕುರಿತು ರೋಹಿಂಗ್ಯಾಗಳನ್ನು ಅವಮಾನಿಸಿ, ಹೋಟೆಲ್ ಗಳನ್ನು ಬಹಿಷ್ಕರಿಸಬೇಕು ಮತ್ತು ಮುಚ್ಚಬೇಕು ಎಂದು ಹಿಂದುತ್ವವಾದಿಗಳು ಪ್ರತಿಕ್ರಿಯಿಸಿದ್ದಾರೆ. ಎರಡು ಹೋಟೆಲ್ ಗಳ ಮಾಲೀಕರಾದ 25 ವರ್ಷದ ಶಿವ ಸೆಹಗಲ್, ‘ಬೆದರಿಕೆಗೆ ಹೆದರಿ ಹಿಂದೆ ಸರಿಯುವುದಿಲ್ಲ ಇನ್ನೂ ಆಹಾರಗಳನ್ನು ನೀಡುತ್ತೇನೆ. ಏಕೆಂದರೆ ಅಗತ್ಯವಿರುವವರಿಗೆ ಏನು ನೀಡಬೇಕೆಂದು ನನಗೆ ತಿಳಿದಿದೆ’ ಎಂದು ಹೇಳಿದ್ದಾರೆ.
“ಮುಂದಿನ ಬಾರಿ ಆಹಾರವನ್ನು ವಿತರಿಸುವಾಗ ಮಾಧ್ಯಮಗಳ ಗಮನಕ್ಕೆ ತರುವುದಿಲ್ಲ. ಏಕೆಂದರೆ ಅವರಲ್ಲಿ ಹೆಚ್ಚಿನವರು ತಪ್ಪು ಮಾಹಿತಿಗಳನ್ನು ನೀಡುತ್ತಾರೆ. ಆದ್ದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗುತ್ತದೆ. ನಿರಾಶ್ರಿತರಲ್ಲಿ ಮುಸ್ಲಿಮರು ಮಾತ್ರವಲ್ಲ, ಅನೇಕ ಸಮುದಾಯಗಳ ಜನರೂ ಇದ್ದಾರೆ. ಮುಸ್ಲಿಮರು ಮಾತ್ರವಾಗಿದ್ದರೂ ಹಸಿದವರಿಗೆ ಆಹಾರ ನೀಡುವಲ್ಲಿ ಏನು ಸಮಸ್ಯೆ?” ಎಂದು ಶಿವಂ ಸೆಹಗಲ್ ಕೇಳಿದ್ದಾರೆ

- Advertisement -