ರೋಗದ ವಿರುದ್ಧ ಹೋರಾಡಲು ವ್ಯವಸ್ಥೆ ರೂಪಿಸಬೇಕೇ ಹೊರತು, ತಟ್ಟೆ ಬಾರಿಸಿ ಹೇಳುವುದಲ್ಲ: ನಿಜಗುಣಾನಂದ ಸ್ವಾಮೀಜಿ

ಬೆಳಗಾವಿ: ರೋಗದ ವಿರುದ್ಧ ಹೋರಾಟಕ್ಕೆ ವ್ಯವಸ್ಥೆ ರೂಪಿಸಬೇಕಿತ್ತು. ಆದರೆ, ಕೈಗೆ ತಟ್ಟೆ ನೀಡಿ ಬಾರಿಸಿ ಎಂದರು. ಇಡೀ ದೇಶವೇ ತಟ್ಟೆಯನ್ನು ಬಾರಿಸಿತು. ಇದಕ್ಕೆ ಕೆಲ ಸ್ವಾಮೀಜಿಗಳು ಕೈಜೋಡಿಸಿದರು. ಅಲ್ಲದೆ, ಜನರಿಗೆ ವಿಜ್ಞಾನ-ತಂತ್ರಜ್ಞಾನವನ್ನು ಕೊಡಬೇಕಿದ್ದ ಇಂದಿನ ಸಮಾಜದಲ್ಲಿ ತಟ್ಟೆ ಬಾರಿಸಿ ಎಂದರೆ ಹೇಗೆ ಎಂದು ಬೈಲೂರು ನಿಶ್ಕಲ್ಮಶ ಮಠದ ನಿಜಗುಣಾನಂದ ಸ್ವಾಮೀಜಿ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಸದಾಶಿವ ನಗರದ ಸ್ಮಶಾನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೂತನ ಕಾರು ಚಾಲನೆ ಸಮಾರಂಭದಲ್ಲಿ ನಿಜಗುಣಾನಂದ ಸ್ವಾಮೀಜಿ ಮಾತನಾಡಿದರು.

- Advertisement -

ದೇಶದ ಯುವಕರ ಕೈಯಲ್ಲಿ ಧರ್ಮದ ಧ್ವಜವನ್ನು ನೀಡಿ ದ್ವೇಷವನ್ನು ಬೆಳೆಸುವ ಬದಲಿಗೆ ಕಾಯಕದ ಧ್ವಜವನ್ನು ನೀಡಬೇಕು. ಇಂದು ದೇಶದಲ್ಲಿ ಶಬ್ದ ಆಳುತ್ತಿದೆ. ಅದನ್ನು ಆಳುತ್ತಿರುವವರು ಪೂಜಾರಿಗಳು, ಪಂಚಾಂಗದವರು. ಇವರೆಲ್ಲರೂ ಶಬ್ದದ ಮೇಲೆ ಜಗತ್ತನ್ನು ಕಟ್ಟುತ್ತಾರೆ ಎಂದು ಹೇಳಿದರು.

ದೇಶದ ಜನರಲ್ಲಿ ಇಂದಿನ ಆಧುನಿಕತೆಯ ಯುಗದಲ್ಲಿಯೂ ಕೆಳಮಟ್ಟದ ವಿಚಾರಧಾರೆಗಳಿವೆ. ಹೀಗಾಗಿ, ಸಮಾಜದಲ್ಲಿ ಇಂದು ಕೂಡ ಅಂಧಶ್ರದ್ಧೆ, ಕಂದಾಚಾರ ಹಾಗೂ ಮೂಢನಂಬಿಕೆಗಳು ಜನರಲ್ಲಿ ನೆಲೆಯೂರಿವೆ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. 

- Advertisement -