ರೈತರ ದೆಹಲಿ ಚಲೋ| ಅನ್ನದಾತರ ಬೇಡಿಕೆಯನ್ನು ಆಲಿಸಿ| ಹರ್ಭಜನ್ ಸಿಂಗ್
Prasthutha: November 29, 2020

ನವದೆಹಲಿ: ಕೇಂದ್ರ ಸರಕಾರದ ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಭಾರತದ ಕ್ರಿಕೆಟಿಗ ಹರ್ಭಜನ್ ಸಿಂಗ್ ಬೆಂಬಲ ವ್ಯಕ್ತಪಡಿಸಿದ್ದಾರೆ.
“ರೈತರು ನಮ್ಮ ಅನ್ನದಾತರು. ನಮ್ಮ ಅನ್ನದಾತರಿಗೆ ನಾವು ಸ್ವಲ್ಪ ಸಮಯ ನೀಡಬೇಕು. ಇದು ಸಮಂಜಸವಲ್ಲವೇ? ಪೊಲೀಸ್ ಕ್ರಮಗಳಿಲ್ಲದೇ ನಾವು ಅವರನ್ನು ಆಲಿಸಲು ಸಾಧ್ಯವಿಲ್ಲವೇ? ದಯವಿಟ್ಟು ರೈತರ ಬೇಡಿಕೆಯನ್ನು ಆಲಿಸಿ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅಲ್ಲದೇ ರೈತರು ಪೊಲೀಸರಿಗೆ ಕುಡಿಯಲು ನೀರು ಕೊಡುತ್ತಿರುವ ದೃಶ್ಯದ ಚಿತ್ರವನ್ನು ಹರ್ಭಜನ್ ಪೋಸ್ಟ್ ಮಾಡಿದ್ದಾರೆ.
