ಉತ್ತರ ಪ್ರದೇಶ: ಮುಜಫರ್ ನಗರದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರು ಮತ್ತು ರೈತರ ನಡುವೆ ಸಂಘರ್ಷ ನಡೆದು ಹಲವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
“ಸೋರಂ ಗ್ರಾಮದಲ್ಲಿ ಬಿಜೆಪಿ ಮುಖಂಡರು ಮತ್ತು ರೈತರ ನಡುವೆ ಘರ್ಷಣೆ ಉಂಟಾಗಿ ಅನೇಕರು ಗಾಯಗೊಂಡಿದ್ದಾರೆ. ರೈತರ ಪರವಾಗಿ ಮಾತುಕತೆ ಇಲ್ಲದಿದ್ದರೆ ಕನಿಷ್ಠ ಪಕ್ಷ ಉತ್ತಮವಾಗಿ ವರ್ತಿಸಿ. ರೈತನನ್ನು ಗೌರವಿಸಿ! ಸರ್ಕಾರಿ ಪ್ರತಿನಿಧಿಗಳ ಗೂಂಡಾಗಿರಿಯನ್ನು ಗ್ರಾಮಸ್ಥರು ಸಹಿಸಿಕೊಳ್ಳುತ್ತಾರೆಯೇ? “ಎಂದು ರಾಷ್ಟ್ರೀಯ ಲೋಕ ದಳದ (ಆರ್ಎಲ್ಡಿ) ಮುಖಂಡ ಜಯಂತ್ ಚೌಧರಿ ಟ್ವೀಟ್ ಮಾಡಿದ್ದಾರೆ.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಕಳೆದ ವರ್ಷ ಸಂಸತ್ತು ಅಂಗೀಕರಿಸಿತ್ತು. ಇದನ್ನು ವಿರೋಧಿಸಿ ಸಾವಿರಾರು ರೈತರು ದೆಹಲಿ ಗಡಿಯಲ್ಲಿ ಕಾನೂನು ವಿರುದ್ಧ ಮೂರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.