ರಾಹುಲ್ ಮತ್ತು ಮನಮೋಹನ್ ಸಿಂಗ್ ಗೆ ಅವಮಾನ ; ಒಬಾಮಾ ಪುಸ್ತಕದ ವಿರುದ್ಧ ಕೇಸ್

Prasthutha|

ಲಕ್ನೋ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಇತ್ತೀಚಿನ ಪುಸ್ತಕ ದಿ ಪ್ರಾಮಿಸ್ಡ್ ಲ್ಯಾಂಡ್ ವಿರುದ್ಧ ಉತ್ತರಪ್ರದೇಶದ ಪ್ರತಿಪ್ಗಡದ ವಕೀಲರೊಬ್ಬರು ಸಿವಿಲ್ ಮೊಕದ್ದಮೆ ಹೂಡಿದ್ದಾರೆ. ಪುಸ್ತಕವು ಕಾಂಗ್ರೆಸ್ ಮುಖಂಡರನ್ನು ಅವಮಾನಿಸಿದ್ದರಿಂದ ಮತ್ತು ಅವರ ಅನುಯಾಯಿಗಳ ಭಾವನೆಗಳನ್ನು ಘಾಸಿಗೊಳಿಸಿದ್ದರಿಂದ ಎಫ್‌ಐಆರ್ ದಾಖಲಿಸಬೇಕೆಂದು ವಕೀಲರು ಒತ್ತಾಯಿಸಿದರು. ಒಬಾಮಾ ಅವರ ಹೊಸ ಪುಸ್ತಕ ದಿ ಪ್ರಾಮಿಸ್ಡ್ ಲ್ಯಾಂಡ್ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರನ್ನು ಅವಮಾನಿಸುವ ಉಲ್ಲೇಖಗಳನ್ನು ಹೊಂದಿದೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.

- Advertisement -

ಉತ್ತರಪ್ರದೇಶದ ಪ್ರತಾಪ್‌ಘಡದ ವಕೀಲ ಜ್ಞಾನ ಪ್ರಕಾಶ್ ಶುಕ್ಲಾ ಅವರು ಈ ಪ್ರಕರಣ ದಾಖಲಿಸಿದ್ದಾರೆ. ಜ್ಞಾನ ಪ್ರಕಾಶ್ ಆಲ್ ಇಂಡಿಯಾ ರೂರಲ್ ಬಾರ್ ಅಸೋಸಿಯೇಶನ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಒಬಾಮಾ ವಿರುದ್ಧ ಸಿವಿಲ್ ಪ್ರಕರಣವನ್ನು ಲಾಲ್ಗಂಜ್ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಎಫ್‌ಐಆರ್ ನೋಂದಾಯಿಸದಿದ್ದರೆ, ಯುಎಸ್ ರಾಯಭಾರ ಕಛೇರಿಯ ಮುಂದೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಜ್ಞಾನ ಪ್ರಕಾಶ್ ದೂರಿನಲ್ಲಿ ತಿಳಿಸಿದ್ದಾರೆ.

- Advertisement -