ರಾಹುಲ್ – ಪ್ರಿಯಾಂಕಾ ಎಲೆ ನೋಡಿ ಹೆಸರು ಹೇಳಿದರೆ ನಾನು ರಾಜಕೀಯ ತೊರೆಯುವೆ | ಕೇಂದ್ರ ಸಚಿವ ಗಜೇಂದ್ರ ಸಿಂಗ್

Prasthutha|

ಕಾಂಗ್ರೆಸ್ ಮುಖಂಡರಾದ ರಾಹುಲ್ ಮತ್ತು ಪ್ರಿಯಾಂಕಾ ಎಲೆಗಳನ್ನು ನೋಡಿ ಅದು ಯಾವ ಬೆಳೆ ಎಂದು ಹೇಳಿದರೆ ತಾನು ರಾಜಕೀಯ ತ್ಯಜಿಸುವುದಾಗಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.

ಕೃಷಿ ಮಸೂದೆಯ ವಿರುದ್ಧ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯನ್ನು ಅಪಹಾಸ್ಯ ಮಾಡಿದ ಕೇಂದ್ರ ಸಚಿವರು, ಪ್ರತಿಭಟನೆಗಳನ್ನು ನಡೆಸಿ ರಾಹುಲ್ ಮತ್ತು ಪ್ರಿಯಾಂಕಾ ರೈತರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

- Advertisement -

ರಾಹುಲ್ ಮತ್ತು ಪ್ರಿಯಾಂಕಾ ಕುರಿ ಮತ್ತು ಮೇಕೆಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲದವರು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನಾ ರ‍್ಯಾಲಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಪಹಾಸ್ಯ ಮಾಡಿದ್ದರು. ಕೃಷಿಯ ಬಗ್ಗೆ ಏನೂ ತಿಳಿಯದ ವ್ಯಕ್ತಿಯು ಕೃಷಿ ಮಸೂದೆಯ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದರು.

- Advertisement -