ರಾಜದ್ರೋಹ ಕಾನೂನು ಕಿತ್ತೊಗೆಯಬೇಕು

0
238

ಶಶಿ ತರೂರ್, ಸಂಸದರು

ಇದು ಬ್ರಿಟಿಷರ ಕಾಲದಲ್ಲಿ ತಮ್ಮ ವಸಾಹತುಗಳನ್ನು ಕಾಲಬುಡದಲ್ಲಿಯೇ ಹೊಸಕಿ ಹಾಕಲು ತಂದ ಕಾನೂನಾಗಿದೆ. ಭಾರತದ ರಾಜದ್ರೋಹ ಕಾನೂನು ಅವಧಿ ಮುಗಿದದ್ದು ಮತ್ತು ಅನಾಗರಿಕವೂ ಆಗಿದೆ. ಆದರೆ ಸಾಮಾನ್ಯ ಬ್ರಿಟಿಷ್ ಪ್ರಜೆಗೆ ಬಾಧಕವಾದ ಕಾನೂನುಗಳು ಭಾರತೀಯರನ್ನು ದಮನಿಸಲು ಸಾಕಾಗುವುದಿಲ್ಲ ಎಂಬ ಬ್ರಿಟಿಷರ ದಬ್ಬಾಳಿಕೆಯ ಮನಸ್ಥಿತಿಯು 1890ರಲ್ಲಿ ಕಾನೂನು ಮತ್ತು ಅದರ ಪರಿಭಾಷೆಗಳನ್ನು ಕಠೋರಗೊಳಿಸಲು ಬ್ರಿಟಿಷ್ ಅಟಾರ್ನಿ ಜನರಲ್ರನ್ನು ಪ್ರೇರೇಪಿಸಿತು. ಈ ಕಾನೂನು ಬ್ರಿಟಿಷ್ ಸಾಮ್ರಾಜ್ಯದ ದಬ್ಬಾಳಿಕೆಯ ಮುಖ್ಯ ದಂಡವಾಗಿತ್ತು. ಭಾರತೀಯರು ಕೇವಲ ಬ್ರಿಟಿಷರ ಅಧೀನದಲ್ಲಿ ಜೀವಿಸಬೇಕಾದ ಪ್ರಜೆಗಳೆಂದು ಅವರು ಭಾವಿಸಿದರು. ಮಹಾತ್ಮಾಗಾಂಧಿ, ನೆಹರೂ ಸೇರಿದಂತೆ ಹಲವು ನಾಯಕರು ಈ ಕಾನೂನಿಗೆ ಆಹಾರವಾದರು. ಅವರು ಎಲ್ಲಾ ವಿಧದ ರಾಜದ್ರೋಹ ಕಾನೂನುಗಳನ್ನು ಕಿತ್ತೊಗೆಯಲು ಪ್ರತಿಜ್ಞಾ ಬದ್ಧರಾಗಿದ್ದರು. ಇಂತಹ ಕಾನೂನನ್ನು ಇಂದಿಗೂ ಕಿತ್ತೊಗೆಯಲು ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಾಧ್ಯವಾಗದೇ ಇರುವುದು ಖೇದಕರ.

ರಾಜದ್ರೋಹ ಏನೆಂದು 1960ರ ಕೆಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟೀಕರಣವನ್ನು ನೀಡಿದೆ. ಆಕ್ರಮಣಗಳಿಗೆ ಪ್ರೇರಣೆ ನೀಡದೇ ಇರುವ ವರೆಗೆ ಕೇವಲ ಮಾತುಗಳು ರಾಜದ್ರೋಹವಾಗಿ ಪರಿಗಣಿಸಲ್ಪಡಲಾರದು ಎಂದು ಪರಮೋನ್ನತ ನ್ಯಾಯಪೀಠ ಹೇಳಿದೆ. ಈ ತೀರ್ಪಿನ ತತ್ವವನ್ನು ಹಿನ್ನೆಲೆಯಾಗಿಟ್ಟುಕೊಂಡು ಪರಮೋನ್ನತ ನ್ಯಾಯಪೀಠದ ಮುಂದೆ ತಲುಪುವ ಮಿಕ್ಕ ರಾಜದ್ರೋಹ ಪ್ರಕರಣಗಳಲ್ಲೂ ಆರೋಪಿ ನಿರ್ದೋಷಿಯಾಗುತ್ತಾನೆ. ಯಾತಕ್ಕಾಗಿ ನಾವು ಈ ಕಾನೂನನ್ನು ಪರಿಷ್ಕರಿಸಲಿಲ್ಲ ಎಂದು ತಿಳಿದು ಬರುತ್ತಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಾಗಿಟ್ಟುಕೊಂಡು ರಾಜದ್ರೋಹ ಕಾನೂನನನ್ನು ತಿದ್ದುಪಡಿಗೆ ಒಳಪಡಿಸಬೇಕೆಂದು ನಾನು ಸಂಸತ್ತಿನಲ್ಲಿ ಖಾಸಗಿಯಾಗಿ ಏಕಾಂಗ ಮಸೂದೆಯನ್ನು ಮಂಡಿಸಿದ್ದೆನು. ಸರಕಾರದಿಂದ ನಮಗೆ ಸ್ವಾತಂತ್ರ ಬೇಕು ಎಂದು ಹೇಳುವುದು ರಾಜದ್ರೋಹ ಆಗಲಾರದು. ಅದು ಕೇವಲ ರಾಜಕೀಯವಾದ ಅಭಿವ್ಯಕ್ತಿ ಮಾತ್ರ. ಪ್ರಬುದ್ಧ ಪ್ರಜಾಪ್ರಭುತ್ವದಂತೆ ವರ್ತಿಸಲು ನಮಗೆ ಸಾಧ್ಯವಾಗಬೇಕು. ವಿದ್ಯಾರ್ಥಿಗಳ ಬೇಜವಾಬ್ದಾರಿಯುತ ಘೋಷಣೆಗಳಿಗಾಗಿ ಶಿಕ್ಷಿಸಲು ನಾವು ರಾಜ್ಯದ್ರೋಹ ಕಾನೂನನ್ನು ಬಳಸುತ್ತೇವೆ ಎಂಬುದು ನಾವು ಪ್ರಜಾಪ್ರಭುತ್ವಕ್ಕೆ ಬೆನ್ನು ತಿರುಗಿಸಿದಂತೆಯೇ ಸರಿ. ದಬ್ಬಾಳಿಕೆಯ ವಸಹಾತುಶಾಹಿ ಕಾನೂನುಗಳು ನಮಗೆಂದಿಗೂ ಬೇಡ.
ಬಿಜೆಪಿಯ ಆಡಳಿತ ಮತ್ತು ರಾಜದ್ರೋಹ
ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ರಾಜ್ಯ ಸರಕಾರಗಳ ವ್ಯಾಪ್ತಿಗೊಳಪಡುವುದರಿಂದ ರಾಜದ್ರೋಹ ಆರೋಪ ಪ್ರಕರಣ ದಾಖಲಿಸುವುದೂ ರಾಜ್ಯ ಸರಕಾರಗಳೇ ಆಗಿವೆ. ಇತರೆಲ್ಲರಿಗಿಂತಲೂ ಹೆಚ್ಚಾಗಿ ಬಿಜೆಪಿ ಸರಕಾರವು ಈ ವಿಷಯದಲ್ಲಿ ಅತ್ಯಂತ ಕೆಟ್ಟದಾಗಿ ಕಾರ್ಯ ನಿರ್ವಹಿಸಿದೆ ಎಂದು ಹೇಳುವಷ್ಟು ಆಳವಾದ ಅಧ್ಯಯನವನ್ನೇನೂ ನಾನು ಕೈಗೊಂಡಿಲ್ಲ. ಈ ಕಾನೂನು ಪರಿಶೀಲನೆಗೆ ಒಳಪಡದಷ್ಟು ಕಾಲವು ಪೊಲೀಸ್ ಮತ್ತು ಕೆಳ ನ್ಯಾಯಾಲಯಗಳು ರಾಜದ್ರೋಹವನ್ನು ಹೊರಿಸುತ್ತಲೇ ಇರುತ್ತದೆ ಎಂಬುದು ನಮ್ಮ ಮುಂದಿರುವ ಸಮಸ್ಯೆ. ಜನರು ಅನಗತ್ಯವಾಗಿ ಜೈಲು ಸೇರಿ, ಹಿಂಸೆಗೊಳಗಾಗುವುದು ನಡೆಯುತ್ತಿರುತ್ತದೆ. ಈ ಕಾನೂನಿಗೆ ತಿದ್ದುಪಡಿ ತರದಿದ್ದರೆ ಅಥವಾ ನಿಖರತೆಯಿಲ್ಲದಿದ್ದರೆ ತುಂಬಾ ಅಪಾಯಕಾರಿಯಾಗಬಹುದು.
ಕಾನೂನನ್ನು ಪುನರ್ಪರಿಶೀಲಿಸಬೇಕಾಗಿದೆ

ಕಾನೂನನ್ನು ರದ್ದುಗೊಳಿಸುವುದು ಮತ್ತು ಪರಿಶೀಲಿಸುವುದು ಕಾನೂನು ರಚನಾ ಸಮಿತಿಯ ಕೆಲಸವಾಗಿದೆ. ಆ ಕಾರಣದಿಂದಲೇ ಭಾರತ ವಿರೋಧಿ ಘೋಷಣೆ ಕೂಗಿದ್ದಕ್ಕಾಗಿ ಜೆ.ಎನ್.ಯುನ ಕೆಲವು ವಿದ್ಯಾರ್ಥಿಗಳ ಮೇಲೆ 2016ರಲ್ಲಿ ರಾಜದ್ರೋಹ ಆರೋಪ ಹೊರಿಸಲ್ಪಟ್ಟಾಗ ನಾನು ಸಂಸತ್ತಿನಲ್ಲಿ ಖಾಸಗಿ ಮಸೂದೆಯನ್ನು ಮಂಡಿಸಿದನು. ಕಾನೂನನ್ನು ವ್ಯಾಖ್ಯಾನಿಸುವ ಜವಾಬ್ದಾರಿ ನ್ಯಾಯಾಂಗದ್ದು. ರಾಜದ್ರೋಹ ಕಾನೂನು ಪರಿಶೀಲಿಸುವ ಯಾವುದೇ ಪ್ರಸ್ತಾಪ ತನ್ನ ಮುಂದಿಲ್ಲ ಎಂದು ಕಾನೂನು ಇಲಾಖೆ ಹೇಳುತ್ತಿದೆ. ಈ ನಿಲುವು ಖಂಡನೀಯ. ಇದು ಬಿಜೆಪಿ ಸರಕಾರದ ನಿಲುವನ್ನು ಬಹಿರಂಗಪಡಿಸುತ್ತಿದೆ. ಮಧ್ಯಪ್ರದೇಶದ ಕಾಂಗ್ರೆಸ್ ಸರಕಾರ:
ನಾವು ಆತ್ಮಾವಲೋಕನ ಮಾಡಬೇಕಿದೆ. ಅದಕ್ಕೆ ಪರಿವರ್ತನಾ ಸಾಮರ್ಥ್ಯವಿದೆ. ಉದಾಹರಣೆಗೆ: ದನವನ್ನು ಕೊಯ್ದದ್ದಕ್ಕಾಗಿ ಮಧ್ಯಪ್ರದೇಶ ಸರಕಾರ ರಾಷ್ಟ್ರೀಯ ಭದ್ರತಾ ಕಾನೂನು(ಎನ್.ಎಸ್.ಎ) ಹೊರಿಸಿದಾಗ ಕಾಂಗ್ರೆಸ್ ನಾಯಕತ್ವ ಮಧ್ಯ ಪ್ರವೇಶಿಸಿ ಇದು ನಮ್ಮ ಕೆಲಸವಲ್ಲ ಎಂದು ನೆನಪಿಸಿತು. ಕಾಂಗ್ರೆಸ್ ನಾಯಕತ್ವವು ಹೆಚ್ಚು ಪ್ರಜಾಪ್ರಭುತ್ವ ಪರ ನಿಲುವನ್ನೇ ಅವಲಂಬಿಸುತ್ತದೆ. ಅದರ ಪ್ರತಿಫಲನ ಖಂಡಿತಾ ಉಂಟಾಗುತ್ತದೆ ಎಂಬ ವಿಶ್ವಾಸ ನನಗಿದೆ.
ಕನ್ಹಯ್ಯ ಕುಮಾರ್ ಘಟನೆ

ನಕಲಿ ವಿಡಿಯೋದಲ್ಲಿ ತೋರಿಸುವಂತೆ ರಾಜದ್ರೋಹ ಕುರಿತಾದ ಯಾವುದನ್ನೂ ತಾನು ಭಾಷಣ ಮಾಡಿಲ್ಲ ಎಂದು ಕನ್ಹಯ್ಯ ಕುಮಾರ್ ದಢವಾಗಿ ವಾದಿಸುತ್ತಾರೆ. ಬೇಜವಾಬ್ದಾರಿಯುತ ಘೋಷಣೆಗಳನ್ನು ಕೂಗಿದ ವೇಳೆ ಆತ ಸ್ಥಳದಲ್ಲಿರಲಿಲ್ಲ. ಇನ್ನು ಅಂತಹ ಘೋಷಣೆಗಳನ್ನು ಕೂಗಿದರೂ ಸುಪ್ರೀಂ ಕೋರ್ಟ್ನ ಅಭಿಪ್ರಾಯದಂತೆ ಅದು ರಾಜದ್ರೋಹವಾಗಲಾರದು ಅಥವಾ ಖಂಡಿತವಾಗಿಯೂ ಕಾನೂನನ್ನು ದುರುಪಯೋಗಪಡಿಸಲಾಗಿದೆ. ಕನ್ಹಯ್ಯ ಪ್ರಕರಣದಲ್ಲಿನ ವಿಚಾರಗಳು ಗುರುತರವಾದ ದುರುಪಯೋಗಕ್ಕೂ ಮೀರಿದವುಗಳಾಗಿವೆ.
ಪ್ರೀತಾ ನಾಯರ್ರೊಂದಿಗೆ ನಡೆಸಿದ ಸಂಭಾಷಣೆ
ಆಧಾರ: ಔಟ್ಲುಕ್
*********

LEAVE A REPLY

Please enter your comment!
Please enter your name here