ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಎಫೆಕ್ಟ್ । ರಾಜ್ಯ ಬಜೆಟ್ ಅದಿವೇಶನ ಮುಂದೂಡಿಕೆ ?!

Prasthutha|

ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆಯ ವೀಡಿಯೋ ರಾಜ್ಯದಾದ್ಯಂತ ವೈರಲ್ ಆಗಿದೆ.  ಸಚಿವ ಜಾರಕಿಹೊಳಿ ಕಾಮಕಾಂಡದಿಂದ ರಾಜ್ಯ ಬಿಜೆಪಿ ಸರಕಾರ ತಲೆತಗ್ಗಿಸುವಂತಾಗಿದೆ. ವಿರೋಧ ಪಕ್ಷಗಳು ಸರಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದೆ. ಇದೀಗ ತನಗೆದುರಾಗಿರುವ ಮುಜುಗರವನ್ನು ತಪ್ಪಿಸಿಕೊಳ್ಳಲು ಬಿಜೆಪಿ ಬಜೆಟ್ ಅಧಿವೇಶನವನ್ನು ಮುಂದೂಡಲು ಚಿಂತನೆ ನಡೆಸಿದೆ.

ರಮೇಶ್ ಜಾರಕಿಹೊಳಿ ಪ್ರಕರಣದಿಂದ ತೀವ್ರ ಮುಜುಗರಕ್ಕೊಳಗಾಗಿರುವ  ರಾಜ್ಯ ಬಿಜೆಪಿ ಸರಕಾರವು ಗುರುವಾರ ನಡೆಯಲಿರುವ  ರಾಜ್ಯ ಬಜೆಟ್ ಅಧಿವೇಶನವನ್ನು ಮುಂದೂಡುವ ಚಿಂತನೆಯಲ್ಲಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಕಾನೂನು ತಜ್ಜರೊಂದಿಗೆ ಅಭಿಪ್ರಾಯವನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ.  ಸಚಿವ ಜಾರಕಿಹೊಳಿಯ ವೀಡಿಯೋ ಇದೀಗ ಕಾಂಗ್ರೆಸ್ ಪಾಳಯಕ್ಕೆ ಬಹುದೊಡ್ಡ ಅಸ್ತ್ರವಾಗಿದೆ. ಆದುದರಿಂದ ರಾಜ್ಯ ಬಿಜೆಪಿ ಸರ್ಕಾರವು ಅದಿವೇಶನವನ್ನು ಮುಂದೂಡುವ ಚಿಂತನೆಯಲ್ಲಿದೆ ಎನ್ನಲಾಗಿದೆ.

- Advertisement -